Product SiteDocumentation Site

Red Hat Enterprise Linux 6

ಬಿಡುಗಡೆ ಟಿಪ್ಪಣಿಗಳು

Red Hat Enterprise Linux 6 ಕ್ಕಾಗಿನ ಬಿಡುಗಡೆ ಟಿಪ್ಪಣಿಗಳು

Logo

Legal Notice

Copyright © 2010 Red Hat.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.


1801 Varsity Drive
 RaleighNC 27606-2072 USA
 Phone: +1 919 754 3700
 Phone: 888 733 4281
 Fax: +1 919 754 3701

ಸಾರಾಂಶ
ಬಿಡುಗಡೆ ಟಿಪ್ಪಣಿಗಳು Red Hat Enterprise Linux 6 ಬಿಡುಗಡೆಯಲ್ಲಿ ಸೇರ್ಪಡಿಸಲಾದಂತಹ ಪ್ರಮುಖ ಸವಲತ್ತುಗಳು ಹಾಗು ವರ್ಧನೆಗಳನ್ನು ಹೊಂದಿರುತ್ತದೆ.

1. ಪರಿಚಯ
2. ಅನುಸ್ಥಾಪಕ
2.1. ಅನುಸ್ಥಾಪನಾ ಕ್ರಮಗಳು
2.2. ಅನುಸ್ಥಾಪನೆಯ ಸಮಯದಲ್ಲಿ ಬ್ಯಾಕ್‌ಅಪ್ ಗುಪ್ತವಾಕ್ಯಾಂಶಗಳನ್ನು ರಚಿಸುವಿಕೆ
2.3. DVD ಮಾಧ್ಯಮ ಬೂಟ್‌ ವಿಷಯಸೂಚಿ ನಮೂದುಗಳು
2.4. ಅನುಸ್ಥಾಪನಾ ಕುಸಿತ ವರದಿ ಮಾಡುವಿಕೆ
2.5. ಅನುಸ್ಥಾಪನಾ ದಾಖಲೆಗಳು
3. ಕಡತ ವ್ಯವಸ್ಥೆಗಳು
3.1. ಫೋರ್ತ್ ಎಕ್ಸ್ಟೆಂಡೆಂಡ್ ಫೈಲ್‌ಸಿಸ್ಟಮ್ (ext4) ಬೆಂಬಲ
3.2. XFS
3.3. ಖಂಡ ಕಡೆಗಣಿಸುವಿಕೆ(ಬ್ಲಾಕ್ ಡಿಸ್ಕಾರ್ಡ್) — ತೆಳುವಾಗಿ LUNಗಳನ್ನು ಹಾಗು SSD ಸಾಧನಗಳಿಗಾಗಿ ಉತ್ತಮ ಬೆಂಬಲ
3.4. ನೆಟ್‌ವರ್ಕ್ ಫೈಲ್ ಸಿಸ್ಟಮ್ (NFS)
4. ಶೇಖರಣೆ
4.1. ಶೇಖರಣೆಯ ಇನ್‌ಪುಟ್/ಔಟ್‌ಪುಟ್‌ನ ವಾಲಿಕೆ ಹಾಗು ಗಾತ್ರ
4.2. DM-ಮಲ್ಟಿಪಾತ್‌ನೊಂದಿಗೆ ಡೈನಮಿಕ್ ಹೊರೆ ಸಮತೋಲನೆ
4.3. ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ (LVM)
5. ವಿದ್ಯುಚ್ಚಕ್ತಿಯ ನಿರ್ವಹಣೆ
5.1. powertop
5.2. tuned
6. ಪ್ಯಾಕೇಜ್ ವ್ಯವಸ್ಥಾಪನೆ
6.1. ಪ್ಯಾಕೇಜ್ checksums ಅನ್ನು ಶೇಖರಿಸಿಡುವಿಕೆ
6.2. PackageKit ಪ್ಯಾಕೇಜ್ ವ್ಯವಸ್ಥಾಪಕ
6.3. Yum
7. ಕ್ಲಸ್ಟರಿಂಗ್
7.1. Corosync ಕ್ಲಸ್ಟರ್ ಎಂಜಿನ್
7.2. ಒಗ್ಗೂಡಿಸಲಾದ ಪ್ರವೇಶ ಸಂರಚನೆ(ಯುನಿಫೈಡ್ ಲಾಗಿಂಗ್ ಕಾನ್ಫಿಗರೇಶನ್)
7.3. ಅತಿ ಲಭ್ಯತೆಯ ನಿರ್ವಹಣೆ
7.4. ಸಾಮಾನ್ಯ ಅತಿ ಲಭ್ಯತೆಯ ಸುಧಾರಣೆಗಳು
8. ಸುರಕ್ಷತೆ
8.1. ಸಿಸ್ಟಮ್ ಸೆಕ್ಯುರಿಟಿ ಸರ್ವಿಸಸ್ ಡೀಮನ್ (SSSD)
8.2. ಸೆಕ್ಯುರಿಟಿ-ಎನ್‌ಹಾನ್ಸ್ಡ್ ಲಿನಕ್ಸ್ (SELinux)
8.3. ಗೂಢಲಿಪೀಕರಣಗೊಂಡ ಶೇಖರಣಾ ಸಾಧನಗಳಿಗಾಗಿನ ಬ್ಯಾಕ್‌ಅಪ್‌ ಗುಪ್ತವಾಕ್ಯಾಂಶಗಳು
8.4. sVirt
8.5. ಎಂಟರ್ಪ್ರೈಸ್ ಸೆಕ್ಯುರಿಟಿ ಕ್ಲೈಂಟ್
9. ಜಾಲಬಂಧ
9.1. ಬಹುಸರತಿ ಜಾಲಬಂಧ
9.2. ಇಂಟರ್ನೆಟ್ ಪ್ರೊಟೊಕಾಲ್ ಆವೃತ್ತಿ 6 (IPv6)
9.3. ನೆಟ್‌ಲೇಬಲ್
9.4. ಜನೆರಿಕ್ ರಿಸೀವ್ ಆಫ್‌ಲೋಡ್
9.5. ವೈರ್ಲೆಸ್ ಬೆಂಬಲ
10. ಗಣಕತೆರೆ
10.1. ಚಿತ್ರಾತ್ಮಕ ಆರಂಭ
10.2. ತಾತ್ಕಾಲಿಕ ಸ್ಥಗಿತ ಹಾಗು ಮರಳಿ ಆರಂಭಿಸುವಿಕೆ
10.3. ಬಹು ಪ್ರದರ್ಶಕ ಬೆಂಬಲ
10.4. NVIDIA ಗ್ರಾಫಿಕ್ಸ್‌ ಸಾಧನಗಳಿಗಾಗಿನ nouveau ಚಾಲಕ
10.5. ಅಂತರಾಷ್ಟ್ರೀಕರಣ(ಇಂಟರ್ನ್ಯಾಶನಲೈಸೇಶನ್)
10.6. ಅನ್ವಯಗಳು
10.7. NetworkManager
10.8. ಕೆಡಿಇ 4.3
11. ದಸ್ತಾವೇಜೀಕರಣ
11.1. ಬಿಡುಗಡೆ ದಸ್ತಾವೇಜು
11.2. ಅನುಸ್ಥಾಪನೆ ಹಾಗು ನಿಯೋಜನೆ
11.3. ಸುರಕ್ಷತೆ
11.4. ಉಪಕರಣಗಳು ಹಾಗು ಕಾರ್ಯಕ್ಷಮತೆ
11.5. ಅತಿ ಲಭ್ಯತೆ
11.6. ವರ್ಚುವಲೈಸೇಶನ್
12. ಕರ್ನಲ್
12.1. ಸಂಪನ್ಮೂಲ ನಿಯಂತ್ರಣ
12.2. ಗಾತ್ರ ಬದಲಾವಣೆಯ ಸಾಮರ್ಥ್ಯ
12.3. ದೋಷ ವರದಿ ಮಾಡುವಿಕೆ
12.4. ವಿದ್ಯುಚ್ಚಕ್ತಿಯ ನಿರ್ವಹಣೆ
12.5. ಕರ್ನಲ್ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಿಕೆ
12.6. ಸಾಮಾನ್ಯ ಕರ್ನಲ್ ಅಪ್‌ಡೇಟ್‌ಗಳು
13. ಕಂಪೈಲರ್ ಹಾಗು ಉಪಕರಣಗಳು
13.1. SystemTap
13.2. OProfile
13.3. GNU ಕಂಪೈಲರ್ ಕಲೆಕ್ಷನ್ (GCC)
13.4. GNU C ಲೈಬ್ರರಿ (glibc)
13.5. GNU ಪ್ರಾಜೆಕ್ಟ್ ಡೀಬಗ್ಗರ್ (GDB)
14. ಇಂಟರ್ಪೊಲೆಬಿಲಿಟಿ
14.1. Samba
15. ವರ್ಚುವಲೈಸೇಶನ್
15.1. ಕರ್ನಲ್-ಆಧರಿತ ವರ್ಚುವಲ್ ಮೆಶೀನ್
15.2. Xen
15.3. virt-v2v
16. ಬೆಂಬಲಿಸುವ ಸಾಮರ್ಥ್ಯ ಹಾಗು ನಿರ್ವಹಣೆ
16.1. firstaidkit ಗಣಕ ಪುನಶ್ಚೇತನ ಉಪಕರಣ
16.2. ದೋಷ ವರದಿ ಮಾಡುವಿಕೆ
16.3. ಸ್ವಯಂಚಾಲಿತವಾಗಿ ದೋಷ ವರದಿ ಮಾಡುವ ಉಪಕರಣ
17. ಜಾಲ ಪರಿಚಾರಕಗಳು ಹಾಗು ಸೇವೆಗಳು
17.1. ಅಪಾಚೆ HTTP ಜಾಲ ಪರಿಚಾರಕ
17.2. PHP: Hypertext Preprocessor (PHP)
17.3. memcached
18. ದತ್ತಸಂಚಯಗಳು
18.1. PostgreSQL
18.2. MySQL
19. ಆರ್ಕಿಟೆಕ್ಚರ್ ನಿಶ್ಚಿತ ಟಿಪ್ಪಣಿಗಳು
A. ಪುನರಾವರ್ತನೆಯ ಇತಿಹಾಸ

1. ಪರಿಚಯ

Red Hat Enterprise Linux 6 ದೊರೆಯುತ್ತಿದೆ ಎಂದು ತಿಳಿಸಲು Red Hat ಗೆ ಸಂತಸವಾಗುತ್ತಿದೆ. Red Hat Enterprise Linux 6 ಎನ್ನುವುದು Red Hatನ ವ್ಯಾಪಕವಾದ ಕಾರ್ಯವ್ಯವಸ್ಥೆಗಳ ಮುಂದಿನ ಪೀಳಿಗೆಯಾಗಿದ್ದು, ಇದನ್ನು ಮಿಶನ್-ಕ್ರಿಟಿಕಲ್ ಎಂಟರ್ಪ್ರೈಸ್ ಕಂಪ್ಯೂಟಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಹಾಗು ಹೆಸರಾಂತ ಎಂಟರ್ಪ್ರೈಸ್ ತಂತ್ರಾಂಶ ಹಾಗು ಯಂತ್ರಾಂಶ ಮಾರಾಟಗಾರರಿಂದ ಪ್ರಮಾಣೀಕೃತಗೊಂಡಿದೆ.
ಈ ಬಿಡುಗಡೆಯು ಈ ಕೆಳಗಿನ ಆರ್ಕಿಟೆಕ್ಚರುಗಳಿಗಾಗಿ ಒಂದೇ ಕಿಟ್‌ನಲ್ಲಿ ಲಭ್ಯವಿದೆ:
  • i386
  • AMD64/Intel64
  • System z
  • IBM Power (64-bit)
Red Hat ಈ ಬಿಡುಗಡೆಯಲ್ಲಿ ಪರಿಚಾರಕ, ವ್ಯವಸ್ಥೆಗಳಲ್ಲಿನ ಸುಧಾರಣೆಯ ಜೊತೆಗೆ ಒಟ್ಟಾರೆಯಾದ Red Hat ಮುಕ್ತ ಆಕರ (ಓಪನ್ ಸೋರ್ಸ್) ಅನುಭವವನ್ನು ಒದಗಿಸುತ್ತದೆ.

ಸೂಚನೆ

ಬಿಡುಗಡೆ ಟಿಪ್ಪಣಿಗಳ ಈ ಆವೃತ್ತಿಯು ಹಳೆಯ ಮಾಹಿತಿಗಳನ್ನು ಹೊಂದಿರಬಹುದು. ಈ ಬಿಡುಗಡೆಯಲ್ಲಿ ಸೇರಿಸಲಾದ ಹೊಸ ಸವಲತ್ತುಗಳ ಪ್ರಸಕ್ತ ಅವಲೋಕನಕ್ಕಾಗಿ ಆನ್‌ಲೈನಿಲ್ಲಿನ ಬಿಡುಗಡೆ ಟಿಪ್ಪಣಿಗಳು ಅನ್ನು ನೋಡಿ.

2. ಅನುಸ್ಥಾಪಕ

Red Hat Enterprise Linux ಅನುಸ್ಥಾಪಕವು (anaconda ಎಂದೂ ಸಹ ಕರೆಯಲಾಗುತ್ತದೆ) Red Hat Enterprise Linux 6 ರ ಅನುಸ್ಥಾಪನೆಯಲ್ಲಿ ನೆರವಾಗುತ್ತದೆ. ಬಿಡುಗಡೆ ಟಿಪ್ಪಣಿಗಳ ಈ ವಿಭಾಗವು Red Hat Enterprise Linux 6 ಕ್ಕಾಗಿನ ಅನುಸ್ಥಾಪಕದಲ್ಲಿ ಅಳವಡಿಸಲಾದಂತಹ ಹೊಸ ಸವಲತ್ತುಗಳ ಒಂದು ಅವಲೋಕವನ್ನು ಒದಗಿಸುತ್ತದೆ.

ಹೆಚ್ಚಿನ ಓದಿಗಾಗಿ

Red Hat Enterprise Linux 6 ಅನುಸ್ಥಾಪನಾ ಮಾರ್ಗದರ್ಶಿಯು ಅನುಸ್ಥಾಪಕ ಹಾಗು ಅನುಸ್ಥಾಪನೆ ಪ್ರಕ್ರಿಯೆಯ ಬಗೆಗಿನ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.

2.1. ಅನುಸ್ಥಾಪನಾ ಕ್ರಮಗಳು

ಅನುಸ್ಥಾಪಕವು Red Hat Enterprise Linux ಅನ್ನು ಅನುಸ್ಥಾಪಿಸಲು ಮೂರು ಪ್ರಮುಖ ಸಂಪರ್ಕಸಾಧನಗಳನ್ನು ಒದಗಿಸುತ್ತದೆ: ಕಿಕ್‌ಸ್ಟಾರ್ಟ್, ಚಿತ್ರಾತ್ಮಕ ಅನುಸ್ಥಾಪಕ ಹಾಗು ಪಠ್ಯ-ಆಧರಿತವಾದ ಅನುಸ್ಥಾಪಕ.

2.1.1. ಚಿತ್ರಾತ್ಮಕ ಅನುಸ್ಥಾಪನೆ

Red Hat Enterprise Linux ಚಿತ್ರಾತ್ಮಕ ಅನುಸ್ಥಾಪಕವು ಒಂದು ವ್ಯವಸ್ಥೆಯನ್ನು ಅನುಸ್ಥಾಪನೆಗಾಗಿ ಸಿದ್ಧಗೊಳಿಸಲು ಪ್ರಮುಖ ಹಂತಗಳ ಮೂಲಕ ಬಳಕೆದಾರರನ್ನು ಕೊಂಡೊಯ್ಯುತ್ತದೆ. Red Hat Enterprise Linux 6 ಅನುಸ್ಥಾಪನಾ GUI ಯು ಡಿಸ್ಕ್ ವಿಭಜನೆಗಾಗಿ ಹಾಗು ಶೇಖರಣೆಯ ಸಂರಚನೆಗಾಗಿ ಪ್ರಮುಖ ಬಳಕೆಯ ವರ್ಧನೆಗಳನ್ನು ಪರಿಚಯಿಸುತ್ತದೆ.
ಅನುಸ್ಥಾಪನೆಯ ಆರಂಭಿಕ ಹಂತಗಳಲ್ಲಿ, ಈಗ ಬಳಕೆದಾರರು ಮೂಲಭೂತ ಶೇಖರಣಾ ಸಾಧನಗಳು ಅಥವ ವಿಶೇಷವಾದ ಶೇಖರಣಾ ಸಾಧನಗಳ ನಡುವೆ ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಮೂಲಭೂತ ಶೇಖರಣಾ ಸಾಧನಗಳನ್ನು ಬಳಸುವ ಮೊದಲು ಸಾಮಾನ್ಯವಾಗಿ ಯಾವುದೆ ರೀತಿಯ ಹೆಚ್ಚುವರಿ ಸಂರಚನಾ ಸಿದ್ಧತೆಗಳ ಅಗತ್ಯವಿರುವುದಿಲ್ಲ. ವಿಶೇಷವಾದ ಶೇಖರಣಾ ಸಾಧನಗಳನ್ನು ಸಂರಚಿಸಲು ಒಂದು ಹೊಸ ಸಂಪರ್ಕಸಾಧನಗಳನ್ನು ಅಳವಡಿಸಲಾಗಿದೆ. ಫರ್ಮ್-ವೇರ್ RAID ಸಾಧನಗಳು, ಫೈಬರ್ ಚಾನಲ್ ಓವರ್ ಎತರ್ನೆಟ್ (FCoE) ಸಾಧನಗಳು, ಮಲ್ಟಿಪಾತ್ ಸಾಧನಗಳು, ಹಾಗು ಇತರೆ ಸ್ಟೋರೇಜ್ ಏರಿಯಾ ನೆಟ್‌ವರ್ಕ್ (SAN) ಸಾಧನಗಳು ಈಗ ಹೊಸ ಸಂಪರ್ಕಸಾಧನವನ್ನು ಬಳಸಿಕೊಂಡು ಸುಲಭವಾಗಿ ಸಂರಚಿಸಬಹುದಾಗಿರುತ್ತದೆ.
Specialized Storage Devices Configuration
ಚಿತ್ರ 1. ವಿಶೇಷ ಶೇಖರಣಾ ಸಾಧನಗಳ ಸಂರಚನೆ

ವಿಭಜನಾ ವಿನ್ಯಾಸವನ್ನು ಆಯ್ಕೆ ಮಾಡುವ ಸಂಪರ್ಕಸಾಧನವನ್ನು ಈಗ ಉತ್ತಮಗೊಳಿಸಲಾಗಿದ್ದು, ಪ್ರತಿಯೊಂದು ಪೂರ್ವನಿಯೋಜಿತ ವಿಭಜನಾ ವಿನ್ಯಾಸಕ್ಕಾಗಿ ವಿವರವಾದ ಮಾಹಿತಿಯನ್ನು ಒದಗಿಸಲಾಗುತ್ತದೆ
The graphical installer
ಚಿತ್ರ 2. ವಿಭಾಗೀಕರಣ ವಿನ್ಯಾಸದ ಆಯ್ಕೆಗಳು

ಅನುಸ್ಥಾಪಕವು ಅನುಸ್ಥಾಪನೆಗೆ ಮೊದಲು ಶೇಖರಣಾ ಸಾಧನಗಳನ್ನು ಅನುಸ್ಥಾಪನಾ ಗುರಿಯ ಸಾಧನಗಳಂತೆ ಅಥವ ದತ್ತಾಂಶ ಶೇಖರಣಾ ಸಾಧನಗಳಾಗಿ ಸೂಚಿಸಲು ಅನುವು ಮಾಡಿಕೊಡುತ್ತದೆ.
The graphical installer
ಚಿತ್ರ 3. ಶೇಖರಣಾ ಸಾಧನಗಳನ್ನು ಸೂಚಿಸುವಿಕೆ

2.1.2. ಕಿಕ್‌ಸ್ಟಾರ್ಟ್

ಕಿಕ್‌ಸ್ಟಾರ್ಟ್ ಎನ್ನುವುದು ವ್ಯವಸ್ಥೆಯ ನಿರ್ವಾಹಕರು Red Hat Enterprise Linux ಅನ್ನು ಅನುಸ್ಥಾಪಿಸಲು ಬಳಸಬಹುದಾದ ಒಂದು ಸ್ವಯಂಚಾಲಿತ ಅನುಸ್ಥಾಪನಾ ವಿಧಾನವಾಗಿದೆ. ಕಿಕ್‌ಸ್ಟಾರ್ಟ್ ಅನ್ನು ಬಳಸಿಕೊಂಡು, ಅನುಸ್ಥಾಪನೆಯ ಸಮಯದಲ್ಲಿ ಸಾಮಾನ್ಯವಾಗಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹೊಂದಿರುವ ಒಂದು ಕಡತವನ್ನು ರಚಿಸಲಾಗುತ್ತದೆ.
Red Hat Enterprise Linux 6 ರಲ್ಲಿ ಕಿಕ್‌ಸ್ಟಾರ್ಟ್ ಕಡತಗಳನ್ನು ಪರಿಶೀಲನೆಗೆ ಸುಧಾರಣೆಗಳನ್ನು ಒದಗಿಸುತ್ತದೆ, ಇದರಿಂದಾಗಿ ಅನುಸ್ಥಾಪನೆಯು ಆರಂಭಗೊಳ್ಳುವ ಮೊದಲು ಕಿಕ್‌ಸ್ಟಾರ್ಟ್ ಕಡತದಲ್ಲಿನ ಸಿಂಟ್ಯಾಕ್ಸ್ ದೋಷಗಳನ್ನು ಪತ್ತೆಹಚ್ಚಬಹುದಾಗಿರುತ್ತದೆ.

2.1.3. ಪಠ್ಯ-ವಿಧಾನದ ಅನುಸ್ಥಾಪಕ

ಪಠ್ಯ-ವಿಧಾನದ ಅನುಸ್ಥಾಪನೆಯನ್ನು ಮೂಲಭೂತವಾಗಿ ಸಂಪನ್ಮೂಲಗಳ ಮಿತಿಯನ್ನು ಹೊಂದಿರುವ ವ್ಯವಸ್ಥೆಗಳಲ್ಲಿ ಬಳಸುವ ಸಲುವಾಗಿ ಒದಗಿಸಲಾಗಿದೆ. ಪಠ್ಯ-ವಿಧಾನದ ಅನುಸ್ಥಾಪನೆಯನ್ನು ಸರಳಗೊಳಿಸಲಾಗಿದ್ದು, ಇದು ಪೂರ್ವನಿಯೋಜಿತವಾದ ಡಿಸ್ಕ್ ವಿನ್ಯಾಸಗಳಿಗೆ ಅನುಸ್ಥಾಪಿಸುವಿಕೆ, ಹಾಗು ಹೊಸ ಹಾಗು ಅಪ್‌ಡೇಟ್ ಆದ ಪ್ಯಾಕೇಜ್‌ಗಳನ್ನು ಅನುಸ್ಥಾಪಿಸುವಿಕೆಗೆ ಅನುಮತಿಸುತ್ತದೆ.
text-based installer
ಚಿತ್ರ 4. ಪಠ್ಯ-ವಿಧಾನದ ಅನುಸ್ಥಾಪಕ

ಸೂಚನೆ

ಕೆಲವು ಅನುಸ್ಥಾಪನೆಗಳಿಗೆ ಪಠ್ಯ-ವಿಧಾನದ ಅನುಸ್ಥಾಪಕದಲ್ಲಿರದೆ ಇರುವ ಆಧುನಿಕ ಅನುಸ್ಥಾಪನಾ ಆಯ್ಕೆಗಳ ಅಗತ್ಯವಿರುತ್ತದೆ. ನಿರ್ದೇಶಿತ ವ್ಯವಸ್ಥೆಯು ಚಿತ್ರಾತ್ಮಕ ಅನುಸ್ಥಾಪನೆಯನ್ನು ಸ್ಥಳೀಯವಾಗಿ ಚಲಾಯಿಸಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ಅನುಸ್ಥಾಪನೆಯನ್ನು ಪೂರ್ಣಗೊಳಿಸಲು ವರ್ಚುವಲ್ ನೆಟ್‌ವರ್ಕ್ ಕಂಪ್ಯೂಟಿಂಗ್ (VNC) ಡಿಸ್‌ಪ್ಲೇ ಪ್ರೊಟೊಕಾಲ್ ಅನ್ನು ಬಳಸಿ.

2.2. ಅನುಸ್ಥಾಪನೆಯ ಸಮಯದಲ್ಲಿ ಬ್ಯಾಕ್‌ಅಪ್ ಗುಪ್ತವಾಕ್ಯಾಂಶಗಳನ್ನು ರಚಿಸುವಿಕೆ

Red Hat Enterprise Linux 6 ರಲ್ಲಿ ಗೂಡಲಿಪೀಕರಣ ಕೀಲಿಯನ್ನು ಉಳಿಸಿಕೊಳ್ಳುವುದು ಹಾಗು ಗೂಡಲಿಪೀಕರಿಸಲಾದ ಕಡತವ್ಯವಸ್ಥೆಗಳಿಗಾಗಿ ಬ್ಯಾಕ್ಅಪ್ ಗುಪ್ತವಾಕ್ಯಾಂಶಗಳನ್ನು ರಚಿಸುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಈ ಸವಲತ್ತಿನ ಬಗೆಗೆ ವಿಭಾಗ 8.3, “ಗೂಢಲಿಪೀಕರಣಗೊಂಡ ಶೇಖರಣಾ ಸಾಧನಗಳಿಗಾಗಿನ ಬ್ಯಾಕ್‌ಅಪ್‌ ಗುಪ್ತವಾಕ್ಯಾಂಶಗಳು” ಎಂಬಲ್ಲಿ ವಿವರವಾಗಿ ಚರ್ಚಿಸಲಾಗಿದೆ

ಸೂಚನೆ

ಪ್ರಸಕ್ತ, ಅನುಸ್ಥಾಪನಾ ಸಮಯದಲ್ಲಿ ಗೂಡಲಿಪೀಕರಿಸಲಾದ ಕಡತವ್ಯವಸ್ಥೆಗಳಿಗಾಗಿ ಬ್ಯಾಕ್ಅಪ್ ಗುಪ್ತವಾಕ್ಯಾಂಶಗಳನ್ನು ರಚಿಸುವಿಕೆಯು ಕೇವಲ ಕಿಕ್‌ಸ್ಟಾರ್ಟ್ ಅನುಸ್ಥಾಪನೆಯಲ್ಲಿ ಮಾತ್ರ ಸಾಧ್ಯವಿರುತ್ತದೆ. ಈ ಸವಲತ್ತಿನ ಬಗೆಗಿನ ಹೆಚ್ಚಿನ ಮಾಹಿತಿ ಹಾಗು Red Hat Enterprise Linux 6 ರ ಕಿಕ್‌ಸ್ಟಾರ್ಟ್ ಅನುಸ್ಥಾಪನೆಯಲ್ಲಿ ಈ ಸವಲತ್ತನ್ನು ಬಳಸುವ ಬಗೆಗಿನ ಮಾಹಿತಿಗಾಗಿ, ಅನುಸ್ಥಾಪನಾ ಮಾರ್ಗದರ್ಶಿಯಲ್ಲಿರುವ ಡಿಸ್ಕ್ ಗೂಢಲಿಪೀಕರಣ ಸೂಚಿಯನ್ನು ನೋಡಿ.

2.3. DVD ಮಾಧ್ಯಮ ಬೂಟ್‌ ವಿಷಯಸೂಚಿ ನಮೂದುಗಳು

Red Hat Enterprise Linux 6 ಗಾಗಿನ DVD ಮಾಧ್ಯಮವು BIOS- ಹಾಗು UEFI-ಆಧರಿತವಾದ ಗಣಕಗಳಿಗಾಗಿ ಬೂಟ್ ವಿಷಯಸೂಚಿ ನಮೂದುಗಳನ್ನು ಹೊಂದಿರುತ್ತದೆ. ಇದರಿಂದಾಗಿ ವ್ಯವಸ್ಥೆಗಳು ಯಾವುದಾದರೂ ಫರ್ಮ್-ವೇರ್ ಸಂಪರ್ಕಸಾಧನದಿಂದ ಬೂಟ್ ಆಗಲು ಸಾಧ್ಯವಿರುತ್ತದೆ. (UEFI ಎನ್ನುವುದು Unified Extensible Firmware Interface ಆಗಿದೆ, ಇದು ಆರಂಭದಲ್ಲಿ Intel ನಿಂದ ಅಭಿವೃದ್ಧಿ ಪಡಿಸಲಾಗಿದ್ದು ಈಗ ಯೂನಿಫೈಡ್ EFI ಫೋರಮ್‌ನಿಂದ ನಿರ್ವಹಿಸಲ್ಪಡುತ್ತಿದೆ. ಇದು ಹಳೆಯ BIOS ಫರ್‌-ವೇರುಗಳಿಗೆ ಬದಲಿಗೆ ಬಳಸಲ್ಪಡುವ ಉದ್ಧೇಶವನ್ನು ಹೊಂದಿದೆ.)

ಮಹತ್ವ

ಅತಿ ಹಳೆಯದಾದ BIOS ಅಳವಡಿಕೆಗಳನ್ನು ಹೊಂದಿರುವ ಕೆಲವು ವ್ಯವಸ್ಥೆಗಳು ಒಂದಕ್ಕಿಂತ ಹೆಚ್ಚು ಬೂಟ್ ವಿಷಯಸೂಚಿ ನಮೂದನ್ನು ಹೊಂದಿರುವ ಮಾಧ್ಯಮದಿಂದ ಬೂಟ್ ಆಗುವುದಿಲ್ಲ. ಅಂತಹ ವ್ಯವಸ್ಥೆಗಳು Red Hat Enterprise Linux 6 DVD ಇಮದ ಬೂಟ್ ಆಗುವುದಿಲ್ಲ ಆದರೆ USB ಡ್ರೈವ್ ಬಳಸಿಕೊಂಡು ಅಥವ ಜಾಲಬಂಧದ ಮುಖಾಂತರದ PXE ಅನ್ನು ಬಳಸಿಕೊಂಡು ಬೂಟ್ ಮಾಡಬಹುದಾಗಿರುತ್ತದೆ.

ಸೂಚನೆ

UEFI ಹಾಗು BIOS ಬೂಟ್ ಸಂರಚನೆಗಳು ಪರಸ್ಪರ ಗಮನಾರ್ಹವಾದ ವ್ಯತ್ಯಾಸಗಳನ್ನು ಹೊಂದಿವೆ ಹಾಗು ಅವುಗಳನ್ನು ಪರಸ್ಪರ ಬದಲಾಯಿಸಲು ಸಾಧ್ಯವಿರುವುದಿಲ್ಲ. Red Hat Enterprise Linux 6 ಅನುಸ್ಥಾಪಿಸಲಾದ ಆವೃತ್ತಿಗಾಗಿ ಸಂರಚಿಸಲಾದ ಫರ್ಮ್-ವೇರನ್ನು ಬದಲಾಯಿಸಿದಲ್ಲಿ ಅದು ಬೂಟ್ ಆಗುವುದಿಲ್ಲ. ಉದಾಹರಣೆಗೆ, ನೀವು ಕಾರ್ಯವ್ಯವಸ್ಥೆಯನ್ನು BIOS-ಆಧರಿತವಾದ ವ್ಯವಸ್ಥೆಯಲ್ಲಿ ಅನುಸ್ಥಾಪಿಸಿ ನಂತರ ಅದನ್ನು ಒಂದು UEFI-ಆಧರಿತವಾದ ವ್ಯವಸ್ಥೆಯಲ್ಲಿ ಬೂಟ್‌ ಮಾಡಲು ಸಾಧ್ಯವಿರುವುದಿಲ್ಲ.

2.4. ಅನುಸ್ಥಾಪನಾ ಕುಸಿತ ವರದಿ ಮಾಡುವಿಕೆ

Red Hat Enterprise Linux 6 ರಲ್ಲಿನ ಅನುಸ್ಥಾಪಕದಲ್ಲಿ ಉತ್ತಮಗೊಳಿಸಲಾದ ಕುಸಿತವನ್ನು ವರದಿ ಮಾಡುವ ಸವಲತ್ತನ್ನು ಸೇರಿಸಲಾಗಿದೆ. ಅನುಸ್ಥಾಪನಾ ಪ್ರಕ್ರಿಯೆ ಸಮಯದಲ್ಲಿ ಅನುಸ್ಥಾಪಕಕ್ಕೆ ಒಂದು ದೋಷ ಎದುರಾದರೆ, ದೋಷದ ವಿವರಗಳನ್ನು ಬಳಕೆದಾರರಿಗೆ ವರದಿ ಮಾಡಲಾಗುತ್ತದೆ.
text-based installer
ಚಿತ್ರ 5. ಅನುಸ್ಥಾಪನಾ ದೋಷ ವರದಿ ಮಾಡುವಿಕೆ

ದೋಷದ ವಿವರಗಳನ್ನು ತಕ್ಷಣ Red Hat ಬಗ್‌ಝಿಲ್ಲಾ ದೋಷದ ಜಾಡನ್ನು ಇರಿಸುವ ಜಾಲತಾಣಕ್ಕೆ ವರದಿ ಮಾಡಬಹುದು, ಅಥವ ಅಂತರಜಾಲದ ಸಂಪರ್ಕವು ಇಲ್ಲದೆ ಹೋದ ಪಕ್ಷದಲ್ಲಿ ಸ್ಥಳಿಯ ಡಿಸ್ಕಿಗೆ ಉಳಿಸಬಹುದು.
text-based installer
ಚಿತ್ರ 6. ಬಗ್‌ಝಿಲ್ಲಾಗೆ ಕಳುಹಿಸಲಾಗುತ್ತಿದೆ

2.5. ಅನುಸ್ಥಾಪನಾ ದಾಖಲೆಗಳು

ಅನುಸ್ಥಾಪನೆಗಳಲ್ಲಿ ತೊಂದರೆ ಪತ್ತೆಹಚ್ಚುವಿಕೆ ಹಾಗು ದೋಷ ನಿವಾರಣೆಯಲ್ಲಿ ನೆರವಾಗಲು, ಈಗ ಅನುಸ್ಥಾಪಕದಿಂದ ಉತ್ಪಾದಿಸಲಾದ ದಾಖಲೆ ಕಡತಗಳಲ್ಲಿ ಹೆಚ್ಚುವರಿ ವಿವರಗಳನ್ನು ಈಗ ಸೇರಿಸಲಾಗುತ್ತದೆ. ಅನುಸ್ಥಾಪನಾ ದಾಖಲೆಗಳ ಬಗೆಗಿನ ಹೆಚ್ಚುವರಿ ಮಾಹಿತಿಯನ್ನು, ಹಾಗು ಅವನ್ನು ತೊಂದರೆ ಪತ್ತೆ ಹಚ್ಚುವಿಕೆಯಲ್ಲಿ ಹೇಗೆ ಬಳಸಬೇಕು ಎನ್ನುವುದನ್ನು ಅನುಸ್ಥಾಪನಾ ಮಾರ್ಗದರ್ಶಿ ಯ ಈ ಕೆಳಗಿನ ಅಧ್ಯಾಯಗಳಲ್ಲಿ ಕಾಣಬಹುದು.

3. ಕಡತ ವ್ಯವಸ್ಥೆಗಳು

ಹೆಚ್ಚಿನ ಓದಿಗಾಗಿ

ಶೇಖರಣೆ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 6 ರಲ್ಲಿ ಕಡತ ವ್ಯವಸ್ಥೆಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎನ್ನುವುದರ ಬಗೆಗಿನ ಹೆಚ್ಚಿನ ಸೂಚನೆಗಳನ್ನು ಒದಗಿಸುತ್ತದೆ. ಅಷ್ಟೆ ಅಲ್ಲದೆ, ಗ್ಲೋಬಲ್ ಫೈಲ್ ಸಿಸ್ಟಮ್ 2 ದಸ್ತಾವೇಜು Red Hat Enterprise Linux 6 ಗಾಗಿನ Red Hat ಗ್ಲೋಬಲ್ ಫೈಲ್ ಸಿಸ್ಟಮ್ 2 ಅನ್ನು ಸಂರಚಿಸುವ ಹಾಗು ಮೇಲ್ವಿಚಾರಣೆ ನಡೆಸುವ ಬಗೆಗಿನ ನಿಶ್ಚಿತ ವಿವರಗಳನ್ನು ಹೊಂದಿದೆ.

3.1. ಫೋರ್ತ್ ಎಕ್ಸ್ಟೆಂಡೆಂಡ್ ಫೈಲ್‌ಸಿಸ್ಟಮ್ (ext4) ಬೆಂಬಲ

ಫೋರ್ತ್ ಎಕ್ಸ್ಟೆಂಡೆಂಡ್ ಫೈಲ್‌ಸಿಸ್ಟಮ್ (ext4) ಎನ್ನುವುದು ತರ್ಡ್ ಎಕ್ಸ್ಟೆಂಡೆಂಡ್ ಫೈಲ್‌ಸಿಸ್ಟಮ್ (ext3) ಆಧರಿತವಾಗಿದ್ದು ಹಲವಾರು ಸುಧಾರಣೆಗಳನ್ನು ಹೊಂದಿದೆ. ಅವುಗಳೆಂದರೆ, ದೊಡ್ಡ ಗಾತ್ರದ ಕಡತ ವ್ಯವಸ್ಥೆಗಳಿಗೆ ಹಾಗು ದೊಡ್ಡ ಗಾತ್ರದ ಕಡತಗಳಿಗೆ ಬೆಂಬಲ, ವೇಗವಾದ ಹಾಗು ಹೆಚ್ಚು ಸಕ್ಷಮವಾಗಿ ಡಿಸ್ಕ್ ಜಾಗದ ನಿಯೋಜನೆ, ಒಂದು ಕೋಶದ ಒಳಗಿನ ಉಪಕೋಶಗಳ ಸಂಖ್ಯೆಗೆ ಯಾವುದೆ ಮಿತಿ ಇಲ್ಲದಿರುವಿಕೆ, ವೇಗವಾದ ಕಡತ ವ್ಯವಸ್ಥೆ ಪರಿಶೀಲನೆ, ಹಾಗು ಹೆಚ್ಚು ಶಕ್ತಿಯುತವಾದ ಜರ್ನಲಿಂಗ್. ext4 ಕಡತ ವ್ಯವಸ್ಥೆಯನ್ನು ಪೂರ್ವನಿಯೋಜಿತವಾಗಿ ಆಯ್ಕೆ ಮಾಡಲಾಗುತ್ತದೆ ಹಾಗು ಅದನ್ನೆ ಬಳಸುವಂತೆ ಬಲವಾಗಿ ಸಲಹೆ ಮಾಡಲಾಗುತ್ತದೆ.

3.2. XFS

XFS ಎನ್ನುವುದು ಹೆಚ್ಚು ಗಾತ್ರ ಬದಲಾವಣೆ ಮಾಡಬಹುದಾದ, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಕಡತವ್ಯವಸ್ಥೆಯಾಗಿದ್ದು ಅದನ್ನು ಮೊತ್ತ ಮೊದಲಿಗೆ Silicon Graphics, Inc ಇಂದ ವಿನ್ಯಾಸಗೊಳಿಸಲಾಗಿರುತ್ತದೆ. ಇದನ್ನು 16 ಎಕ್ಸಾಬೈಟ್‌ಗಳಷ್ಟು ಗಾತ್ರದ ಕಡತವ್ಯವಸ್ಥೆಗಳನ್ನು (ಸುಮಾರು 16 ಮಿಲಿಯನ್ ಟೆರಾಬೈಟ್‌ಗಳು), 8 ಎಕ್ಸಾಬೈಟ್‌ಗಳಷ್ಟು ಗಾತ್ರದ ಕಡತವನ್ನು (ಸುಮಾರು 8 ಮಿಲಿಯನ್ ಟೆರಾಬೈಟ್‌ಗಳು) ಹಾಗು ಹತ್ತಾರು ಮಿಲಿಯನ್ ನಮೂದುಗಳನ್ನು ಹೊಂದಿರುವ ಕೋಶ ರಚನೆಗಳನ್ನು ಹೊಂದಿರುವ ವ್ಯವಸ್ಥೆಯನ್ನು ಬೆಂಬಲಿಸುವ ಸಲುವಾಗಿ ನಿರ್ಮಿಸಲಾಗಿದೆ.
XFS ಮೆಟಡೇಟ ಜರ್ನಲಿಂಗ್ ಅನ್ನು ಬೆಂಬಲಿಸಲಿದ್ದು, ಇದು ಕ್ಷಿಪ್ರವಾಗಿ ಕುಸಿತದಿಂದ ಪುನಶ್ಚೇತನಕ್ಕೆ ಅನುವು ಮಾಡಿಕೊಡುತ್ತದೆ. XFS ಕಡತ ವ್ಯವಸ್ಥೆಯನ್ನು ಆರೋಹಿಸಿದಾಗ ಹಾಗು ಸಕ್ರಿಯವಾಗಿದ್ದಾಗ ವಿಭಜಿಸಬಹುದಾಗಿರುತ್ತದೆ ಹಾಗು ವಿಸ್ತರಿಸಬಹುದಾಗಿರುತ್ತದೆ.

3.3. ಖಂಡ ಕಡೆಗಣಿಸುವಿಕೆ(ಬ್ಲಾಕ್ ಡಿಸ್ಕಾರ್ಡ್) — ತೆಳುವಾಗಿ LUNಗಳನ್ನು ಹಾಗು SSD ಸಾಧನಗಳಿಗಾಗಿ ಉತ್ತಮ ಬೆಂಬಲ

Red Hat Enterprise Linux 6 ರಲ್ಲಿನ ಕಡತ ವ್ಯವಸ್ಥೆಯು, ಒಂದು ಸಾಧನದ (ಬ್ಲಾಕ್‌ಗಳು ಎಂದೂ ಸಹ ಕರೆಯಲಾಗುವ) ಭಾಗಗಳು ಸಕ್ರಿಯ ಬಳಕೆಯಲ್ಲಿ ಇಲ್ಲ ಎಂದು ಕಡತವ್ಯವಸ್ಥೆಯು ಗುರುತಿಸಿದಾಗ ಶೇಖರಣಾ ಸಾಧನಕ್ಕೆ ತಿಳಿಸುವಂತಹ ಹೊಸ ಬ್ಲಾಕ್ ಡಿಸ್ಕಾರ್ಡ್ ಸವಲತ್ತನ್ನು ಬಳಸುತ್ತದೆ. ಕೆಲವು ಶೇಖರಣಾ ಸಾಧನಗಳು ಬ್ಲಾಕ್‌ ಡಿಸ್ಕಾರ್ಡ್ ಸಾಮರ್ಥ್ಯಗಳನ್ನು ಹೊಂದಿದ್ದರೂ ಸಹ, ಹೊಸ solid state drives (SSDs) ಇದನ್ನು ಆಂತರಿಕ ದತ್ತಾಂಶ ವಿನ್ಯಾಸವನ್ನು ಅನುರೂಪಗೊಳಿಸಲು ಹಾಗು ಮುಂಚಿತವಾಗಿ ವಿಯರ್ ಲೆವೆಲಿಂಗ್ ಅನ್ನು ನಡೆಸಲು ಬಳಸುತ್ತದೆ. ಜೊತೆಗೆ, ಕೆಲವು ಉನ್ನತವಾದ SCSI ಸಾಧನಗಳು ತೆಳುವಾಗಿ ನಿಯೋಜಿಸಲಾದ LUNಗಳಿಗೆ ಸಹಾಯ ಮಾಡಲು ಬ್ಲಾಕ್‌ ಡಿಸ್ಕಾರ್ಡ್ ಮಾಹಿತಿಯನ್ನು ಬಳಸುತ್ತವೆ.

3.4. ನೆಟ್‌ವರ್ಕ್ ಫೈಲ್ ಸಿಸ್ಟಮ್ (NFS)

ಒಂದು Network File System (NFS) ಎನ್ನುವುದು ದೂರಸ್ಥ ಆತಿಥೇಯಗಳು ಕಡತ ವ್ಯವಸ್ಥೆಯನ್ನು ಸ್ಥಳೀಯ ಗಣಕದಲ್ಲೆ ಆರೋಹಿಸಲಾಗಿದೆ ಎಂಬ ರೀತಿಯಲ್ಲಿ ಒಂದು ಜಾಲಬಂಧದ ಮೂಲಕ ಆರೋಹಿಸಲು ಹಾಗು ಸಂವಹಿಸಲು ನೆರವಾಗುತ್ತದೆ. ಇದರಿಂದಾಗಿ ವ್ಯವಸ್ಥೆಯ ನಿರ್ವಾಹಕರು ಸಂಪನ್ಮೂಲಗಳನ್ನು ಜಾಲಬಂಧದಲ್ಲಿರುವ ಕೇಂದ್ರೀಕೃತವಾದ ಪರಿಚಾರಕಗಳಲ್ಲಿ ಇರಿಸಿಕೊಳ್ಳಲು ನೆರವಾಗುತ್ತದೆ. Red Hat Enterprise Linux 6 ರಲ್ಲಿ NFSv2, NFSv3, ಹಾಗು NFSv4 ಕ್ಲೈಂಟ್‌ಗಳಿಗೆ ಬೆಂಬಲವನ್ನು ಒದಗಿಸುತ್ತದೆ. NFS ಮೂಲಕ ಆರೋಹಿಸುವಿಕೆಯು NFSv4 ನ ಪೂರ್ವನಿಯೋಜಿತವಾಗಿರುತ್ತದೆ.
Red Hat Enterprise Linux 6 ರಲ್ಲಿ NFS ಗಾಗಿ ಹೆಚ್ಚುವರಿಯಾದ ಸುಧಾರಣೆಗಳನ್ನು ಮಾಡಲಾಗಿದ್ದು, ಇದು ಇಂಟರ್ನೆಟ್ ಪ್ರೊಟೊಕಾಲ್ ಆವೃತ್ತಿ 6 (IPv6) ಕ್ಕೆ ಉತ್ತಮವಾದ ಬೆಂಬಲವನ್ನು ಒದಗಿಸಲಾಗಿದೆ.

4. ಶೇಖರಣೆ

4.1. ಶೇಖರಣೆಯ ಇನ್‌ಪುಟ್/ಔಟ್‌ಪುಟ್‌ನ ವಾಲಿಕೆ ಹಾಗು ಗಾತ್ರ

SCSI ಹಾಗು ATA ಶಿಷ್ಟತೆಗಳಲ್ಲಿನ ಇತ್ತೀಚಿನ ಸುಧಾರಣೆಗಳಿಂದಾಗಿ ಶೇಖರಣಾ ಸಾಧನಗಳು ಅವುಗಳ ಇಚ್ಛೆಯ (ಹಾಗು ಕೆಲವು ಸಂದರ್ಭಗಳಲ್ಲಿ, ಅಗತ್ಯವಿರುತ್ತದೆ) I/O ವಾಲಿಕೆ ಹಾಗು I/O ಗಾತ್ರವನ್ನು ಸೂಚಿಸುವುದನ್ನು ಅನುವು ಮಾಡಿಕೊಡಲಾಗುತ್ತದೆ. ಈ ಮಾಹಿತಿಯು 512 ಬೈಟ್‌ಗಳಿಂದ 4K ಬೈಟ್‌ಗಳಿಗೆ ಭೌತಿಕ ಖಂಡವನ್ನು ಹೆಚ್ಚಿಸುವಂತಹ ಹೊಸ ಡಿಸ್ಕುಗಳಲ್ಲಿ ಸಹಕಾರಿಯಾಗುತ್ತದೆ. ಈ ಮಾಹಿತಿಯು ಚಂಕ್ ಗಾತ್ರ ಹಾಗು ಸ್ಟ್ರೈಪ್‌ ಗಾತ್ರವು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವಂತಹ RAID ಸಾಧನಗಳಲ್ಲಿಯೂ ಸಹ ಪ್ರಯೋಜನವಾಗುತ್ತದೆ.
Red Hat Enterprise Linux 6 ಈ ಮಾಹಿತಿಯನ್ನು ಓದುವ ಹಾಗು ಬಳಸಿಕೊಳ್ಳುವ, ಮತ್ತು ಶೇಖರಣಾ ಸಾಧನದಿಂದ ಹೇಗೆ ದತ್ತಾಂಶವನ್ನು ಓದಲಾಗುತ್ತದೆ ಹಾಗು ಹೇಗೆ ಬರೆಯಲಾಗುತ್ತದೆ ಎನ್ನುವುದನ್ನು ಅನುಕೂಲಕರಗೊಳಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.

ಹೆಚ್ಚಿನ ಓದಿಗಾಗಿ

ಶೇಖರಣೆ ವ್ಯವಸ್ಥಾಪನೆ ಮಾರ್ಗದರ್ಶಿ ಯಲ್ಲಿ I/O ಮಿತಿಗಳನ್ನು ಇನ್ನಷ್ಟು ವಿವರವಾಗಿ ತಿಳಿಸುವ ಒಂದು ಅಧ್ಯಾಯವಿದೆ.

4.2. DM-ಮಲ್ಟಿಪಾತ್‌ನೊಂದಿಗೆ ಡೈನಮಿಕ್ ಹೊರೆ ಸಮತೋಲನೆ

ಡಿವೈಸ್ ಮ್ಯಾಪರ್ ಮಲ್ಟಿಪಾತ್ (DM-Multipath) ಪರಿಚಾರಕಗಳನ್ನು ಶೇಖರಣಾ ವ್ಯೂಹಕ್ಕೆ ಸಂಪರ್ಕ ಸಾಧಿಸುವ ಅನೇಕ ಕೇಬಲ್‌ಗಳು, ಸ್ವಿಚ್‌ಗಳು ಹಾಗು ನಿಯಂತ್ರಕಗಳಿಂದ ಒಂದು ಕಲ್ಪನಾ ಸಾಧನವನದನು ರಚಿಸುತ್ತದೆ. ಇದರಿಂದಾಗಿ ಸಂಪರ್ಕ ಸಾಧನಗಳನ್ನು (ಮಾರ್ಗಗಳು ಎಂದೂ ಸಹ ಕರೆಯಲಾಗುತ್ತದೆ) ಕೇಂದ್ರೀಕೃತ ನಿರ್ವಹಣೆಯನ್ನು ನಡೆಸುವುದನ್ನು ಶಕ್ತಗೊಳಿಸುತ್ತದೆ ಹಾಗು ಲಭ್ಯವಿರುವ ಎಲ್ಲಾ ಮಾರ್ಗಗಳಲ್ಲಿಯೂ ಹೊರೆಯನ್ನು ಸರಿಯಾಗಿ ಹಂಚುವುದನ್ನು ಸಾಧ್ಯವಾಗಿಸುತ್ತದೆ.
Red Hat Enterprise Linux 6 ರಲ್ಲಿನ DM-ಮಲ್ಟಿಪಾತ್, ಡೈನಮಿಕ್‌ ಆಗಿ ಹೊರೆಯನ್ನು ಸಮತೋಲನಗೊಳಿಸುವಾಗ ಎರಡು ಹೊಸ ಆಯ್ಕೆಗಳನ್ನು ಒದಗಿಸುತ್ತದೆ. ಮಾರ್ಗಗಳನ್ನು ಈಗ ಪ್ರತಿಯೊಂದು ಮಾರ್ಗದಲ್ಲಿನ ಸರತಿಯ ಗಾತ್ರ ಅಥವ ಹಿಂದಿನ I/O ಸಮಯ ದತ್ತಾಂಶದ ಆಧಾರದ ಮೇಲೆ ಡೈನಮಿಕ್ ಆಗಿ ಆಯ್ಕೆ ಮಾಡಬಹುದು.

ಹೆಚ್ಚಿನ ಓದಿಗಾಗಿ

DM Multipath ಪುಸ್ತಕವು Red Hat Enterprise Linux 6 ರಲ್ಲಿ ಡಿವೈಸ್-ಮ್ಯಾಪರ್ ಮಲ್ಟಿಪಾತ್ ಸವಲತ್ತನ್ನು ಬಳಸುವ ಬಗೆಗಿನ ಮಾಹಿತಿಯನ್ನು ಒದಗಿಸುತ್ತದೆ.

4.3. ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ (LVM)

ಪರಿಮಾಣ ನಿರ್ವಹಣೆಯು ತಾರ್ಕಿಕ ಶೇಖರಣಾ ಪರಿಮಾಣಗಳನ್ನು ರಚಿಸುವ ಮೂಲಕ ಭೌತಿಕ ಶೇಖರಣೆಯ ಮೇಲೆ ಒಂದು ತಡೆಯ ಪದರವನ್ನು ರಚಿಸುತ್ತದೆ. ಇದರಿಂದಾಗಿ ಭೌತಿಕ ಶೇಖರಣೆಯನ್ನು ನೇರವಾಗಿ ಬಳಸದೆ ಇರುವ ಆಯ್ಕೆಯನ್ನು ಒದಗಿಸುತ್ತದೆ. Red Hat Enterprise Linux 6 ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್(LVM) ಮೂಲಕ ತಾರ್ಕಿಕ ಪರಿಮಾಣಗಳನ್ನು ವ್ಯವಸ್ಥಾಪಿಸುತ್ತದೆ.

ಮಹತ್ವ

system-config-lvm ಎನ್ನುವುದು ತಾರ್ಕಿಕ ಪರಿಮಾಣಗಳನ್ನು ವ್ಯವಸ್ಥಾಪಿಸಲು Red Hat Enterprise Linux ನಲ್ಲಿ ಒದಗಿಸಲಾದ ಚಿತ್ರಾತ್ಮಕ ಬಳಕೆದಾರ ಸಂಪರ್ಕ ಸಾಧನವಾಗಿರುತ್ತದೆ. system-config-lvm ಇಂದ ಒದಗಿಸಲಾದ ಕಾರ್ಯಭಾರವು ಇನ್ನಷ್ಟು ಉತ್ತಮವಾಗಿ ಮೇಲ್ವಿಚಾರಣೆ ನಡೆಸಬಹುದಾದಂತಹ ಉಪಕರಣವಾದ gnome-disk-utility ಗೆ (palimpsest ಎಂದೂ ಸಹ ಕರೆಯಲಾಗುವ) ಮಾರ್ಪಡುವ ಹಂತದಲ್ಲಿದೆ. ಇದರ ಫಲಿತಾಂಶವಾಗಿ, system-config-lvm ನಲ್ಲಿ Red Hat ಕೇವಲ ಕೆಲವು ಅಂಶಗಳನ್ನು ಮಾತ್ರ ಅಪ್‌ಡೇಟ್ ಮಾಡಿದೆ. gnome-disk-utility system-config-lvm ನೊಂದಿಗೆ ಹೊಂದಿಕೊಂಡಿ ನಂತರ, system-config-lvm ಅನ್ನು Red Hat Enterprise Linux 6 ರ ಜೀವನ ಚಕ್ರದಲ್ಲಿ ತೆಗೆದು ಹಾಕುವ ಹಕ್ಕನ್ನು Red Hat ಕಾದಿರಿಸಿಕೊಂಡಿದೆ.

ಹೆಚ್ಚಿನ ಓದಿಗಾಗಿ

ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ನಿರ್ವಹಣೆ ದಸ್ತಾವೇಜು LVM ತಾರ್ಕಿಕ ಪರಿಮಾಣ ವ್ಯವಸ್ಥಾಪಕವನ್ನು ವಿವರಿಸುತ್ತದೆ, ಇದರಲ್ಲಿ ಒಂದು ಕ್ಲಸ್ಟರ್ ಮಾಡಲಾದ ಪರಿಸರದಲ್ಲಿ LVM ಅನ್ನು ಚಲಾಯಿಸುವ ಮಾಹಿತಿಯನ್ನೂ ಸಹ ಹೊಂದಿದೆ.

4.3.1. LVM ಬಿಂಬ ಸುಧಾರಣೆಗಳು

ಬಿಂಬ ಮಾಡಲಾದ ಪರಿಮಾಣಗಳನ್ನು LVM ಬೆಂಬಲಿಸುತ್ತದೆ. ಬಿಂಬ ಮಾಡಲಾದ ತಾರ್ಕಿಕ ಪರಿಮಾಣಗಳನ್ನು ರಚಿಸುವುದರಿಂದ, ಕೆಳಗಿರುವ ಭೌತಿಕ ಪರಿಮಾಣದಲ್ಲಿ ಬರೆಯಲಾದ ದತ್ತಾಂಶವನ್ನು ಬೇರೊಂದು ಪ್ರತ್ಯೇಕ ಭೌತಿಕ ಪರಿಮಾಣಕ್ಕೆ ಪ್ರತಿಬಿಂಬಿತಗೊಳಿಸಲಾಗುತ್ತದೆ ಎನ್ನುವುದನ್ನು LVM ಖಾತ್ರಿಗೊಳಿಸುತ್ತದೆ.
4.3.1.1. ಬಿಂಬಗಳ ಸ್ನ್ಯಾಪ್‌ಶಾಟ್
LVM ಸ್ನ್ಯಾಪ್‌ಶಾಟ್ ಸವಲತ್ತು, ಸೇವೆಗೆ ಯಾವುದೆ ತಡೆಯುಂಟು ಮಾಡದೆ ಒಂದು ನಿರ್ದಿಷ್ಟ ಸಮಯದಲ್ಲಿ ತಾರ್ಕಿಕ ಪರಿಮಾಣದ ಬ್ಯಾಕ್ಅಪ್ ಚಿತ್ರಿಕೆಗಳನ್ನು ರಚಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಸ್ನ್ಯಾಪ್‌ಶಾಟ್‌ ಅನ್ನು ತೆಗೆದುಕೊಂಡ ನಂತರ ಮೂಲ ಡ್ರೈವ್‌ಗೆ ಬದಲಾವಣೆಗಳನ್ನು ಮಾಡಿದಲ್ಲಿ (ಮೂಲ), ಸ್ನ್ಯಾಪ್‌ಶಾಟ್ ಸವಲತ್ತು ಬದಲಾಯಿಸಲಾದ ದತ್ತಾಂಶ ಸ್ಥಳವನ್ನು ಅದು ಬದಲಾಯಿಸುವ ಮೊದಲು ಹೇಗಿತ್ತೊ ಹಾಗೆ ಒಂದು ಪ್ರತಿಯನ್ನು ಮಾಡಿಕೊಳ್ಳುತ್ತದೆ ಇದರಿಂದಾಗಿ ಸಾಧನದ ಸ್ಥಿತಯನ್ನು ಮರಳಿ ರಚಿಸಲು ಸಾಧ್ಯವಿರುತ್ತದೆ. Red Hat Enterprise Linux 6 ರಲ್ಲಿ ಬಿಂಬ ಮಾಡಲಾದ ತಾರ್ಕಿಕ ಪರಿಮಾಣದ ಸ್ನ್ಯಾಪ್‌ಶಾಟ್ ಅನ್ನು ತೆಗೆದುಕೊಳ್ಳುವ ಸವಲತ್ತನ್ನು ಸೇರಿಸಲಾಗಿದೆ.
4.3.1.2. ಸ್ನ್ಯಾಪ್‌ಶಾಟ್‌ಗಳನ್ನು ವಿಲೀನಗೊಳಿಸುವಿಕೆ
Red Hat Enterprise Linux 6 ರಲ್ಲಿ ತಾರ್ಕಿಕ ಪರಿಮಾಣದ ಸ್ನ್ಯಾಪ್‌ಶಾಟ್ ಅನ್ನು ಮೂಲ ತಾರ್ಕಿಕ ಪರಿಮಾಣಕ್ಕೆ ವಿಲೀನಗೊಳಿಸುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಇದರಿಂದಾಗಿ ವ್ಯವಸ್ಥೆಯ ನಿರ್ವಾಹಕರು ಸ್ನ್ಯಾಪ್‌ಶಾಟ್‌ನಿಂದ ಕಾದಿರಿಸಲಾದುದರೊಂದಿಗೆ ವಿಲೀನಗೊಳಿಸುವಾಗ ತಾರ್ಕಿಕ ಪರಿಮಾಣದಲ್ಲಿ ಯಾವುದೆ ಬದಲಾವಣೆಗಳು ಉಂಟಾದಲ್ಲಿ ಅದನ್ನು ಪೂರ್ವಾವಸ್ಥೆಗೆ ಮರಳಿಸಲು ಸಾಧ್ಯವಿರುತ್ತದೆ.
ಸ್ನ್ಯಾಪ್‌ಶಾಟ್ ವಿಲೀನಗೊಳಿಸುವ ಸವಲತ್ತಿನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ, lvconvert ಮ್ಯಾನ್‌ಪುಟವನ್ನು ನೋಡಿ.
4.3.1.3. ನಾಲ್ಕು-ಪರಿಮಾಣದ ಬಿಂಬಗಳು
Red Hat Enterprise Linux 6 ರಲ್ಲಿನ LVM ನಾಲ್ಕು ಬಿಂಬಗಳನ್ನು ಹೊಂದಿದ ತಾರ್ಕಿಕ ಪರಿಮಾಣವನ್ನು ರಚಿಸುವುದನ್ನು ಬೆಂಬಲಿಸುತ್ತದೆ.
4.3.1.4. ಪ್ರತಿಬಿಂಬಿತ ದಾಖಲೆಗಳನ್ನು ಪ್ರತಿಬಿಂಬಿಸುವಿಕೆ
LVM ಒಂದು ಸಣ್ಣದಾದ ದಾಖಲೆಯನ್ನು (ಒಂದು ಪ್ರತ್ಯೇಕ ಸಾಧನದಲ್ಲಿ) ಹೊಂದಿದ್ದು, ಇದು ಬಿಂಬ ಅಥವ ಬಿಂಬಗಳೊಂದಿಗೆ ಯಾವ ಸ್ಥಳಗಳು ಸಿಂಕ್ ಆಗಿದೆ ಎನ್ನುವುದರ ಜಾಡನ್ನು ಇರಿಸುತ್ತದೆ. Red Hat Enterprise Linux 6 ರಲ್ಲಿ ಈ ದಾಖಲೆ ಸಾಧನದ ಬಿಂಬವನ್ನು ರಚಿಸುವ ಸಾಮರ್ಥ್ಯವನ್ನು ಸೇರಿಸಲಾಗಿದೆ.

4.3.2. LVM ಅನ್ವಯ ಲೈಬ್ರರಿ

Red Hat Enterprise Linux 6 ರಲ್ಲಿ ಹೊಸ LVM ಅನ್ವಯ ಲೈಬ್ರರಿಯನ್ನು (lvm2app) ಸೇರಿಸಲಾಗಿದ್ದು, ಇದು LVM ಆಧರಿತವಾದ ಶೇಖರಣೆ ನಿರ್ವಹಣಾ ಅನ್ವಯಗಳನ್ನು ವಿಕಸನಗೊಳಿಸಲು ನೆರವಾಗುತ್ತದೆ.

5. ವಿದ್ಯುಚ್ಚಕ್ತಿಯ ನಿರ್ವಹಣೆ

ಹೆಚ್ಚಿನ ಓದಿಗಾಗಿ

ವಿದ್ಯುಚ್ಛಕ್ತಿ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 6 ರಲ್ಲಿ ಹೇಗೆ ಪರಿಣಾಮಕಾರಿಯಾಗಿ ವಿದ್ಯುಚ್ಛಕ್ತಿಯನ್ನು ಉಳಿಸಬಹುದು ಎನ್ನುವುದನ್ನು ವಿವರಿಸುತ್ತದೆ.

5.1. powertop

Red Hat Enterprise Linux 6 ರಲ್ಲಿ ಟಿಕ್‌ಲೆಸ್‌ ಕರ್ನಲ್ ಅನ್ನು ಪರಿಚಯಿಸುವ ಮೂಲಕ (ವಿಭಾಗ 12.4.2, “ಟಿಕ್‌ಲೆಸ್ ಕರ್ನಲ್” ಅನ್ನು ನೋಡಿ) CPU ವು ಪದೆ ಪದೆ ಜಡ ಸ್ಥಿತಿಗೆ ಹೋಗುತ್ತದೆ, ಇದರಿಂದಾಗಿ ವಿದ್ಯುಚ್ಛಕ್ತಿ ಉಳಿಯುತ್ತದೆ ಹಾಗು ವಿದ್ಯುಚ್ಛಕ್ತಿ ನಿರ್ವಹಣೆಯು ಉತ್ತಮಗೊಳ್ಳುತ್ತದೆ. ಹೊಸ powertop ಉಪಕರಣವು CPU ಅನ್ನು ಪದೆ ಪದೆ ಎಚ್ಚರಿಸುತ್ತಿರುವ ಕರ್ನಲ್‌ನ ನಿಶ್ಚಿತ ಘಟಕಗಳು ಹಾಗು ಬಳಕೆದಾರ ಸ್ಥಳಗಳನ್ನು ಗುರುತಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. powertop ಅನ್ನು ಈ ಬಿಡುಗಡೆಯ ಹಲವು ಅನ್ವಯಗಳನ್ನು ಗುರುತಿಸಲು ಹಾಗು ಸರಿಪಡಿಸಲು ಬಳಸಲಾಗಿದ್ದು, ಇದರಿಂದ ಅನಗತ್ಯವಾಗಿ CPU ಎಚ್ಚರಗೊಳ್ಳುವಿಕೆಯನ್ನು 10 ರಷ್ಟು ಕಡಿಮೆ ಮಾಡಲಾಗಿದೆ.

5.2. tuned

tuned ಎನ್ನುವುದು ವ್ಯವಸ್ಥೆಯನ್ನು ಸರಿಪಡಿಸುವ ಡೆಮನ್‌ವಾಗಿದ್ದು, ಇದು ವ್ಯವಸ್ಥೆಯ ಘಟಕಗಳನ್ನು ಮೇಲ್ವಿಚಾರಣೆ ನಡೆಸುತ್ತದೆ ಹಾಗು ವ್ಯವಸ್ಥೆಯ ಸಿದ್ಧತೆಗಳನ್ನು ಸರಿಪಡಿಸುತ್ತದೆ. ktune (ವ್ಯವಸ್ಥೆಯನ್ನು ಸರಿಪಡಿಸುವ ಸ್ಥಿರ ವ್ಯವಸ್ಥೆ) ಅನ್ನು ಬಳಸಿಕೊಂಡು, tuned ಸಾಧನಗಳನ್ನು (ಉದಾ. ಹಾರ್ಡ್ ಡಿಸ್ಕ್ ಡ್ರೈವ್‌ಗಳು ಹಾಗು ಎತರ್ನೆಟ್‌ ಸಾಧನಗಳು) ಮೇಲ್ವಿಚಾರಣೆ ನಡೆಸಬಲ್ಲದೆ ಹಾಗು ಸರಿಪಡಿಸಬಲ್ಲದು. Red Hat Enterprise Linux 6 ರಲ್ಲಿ ಡಿಸ್ಕ್ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ನಡೆಸಲು diskdevstat ಅನ್ನು ಹಾಗು ಜಾಲಬಂಧ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ನಡೆಸಲು netdevstat ಅನ್ನು ಬಳಸುತ್ತದೆ.

6. ಪ್ಯಾಕೇಜ್ ವ್ಯವಸ್ಥಾಪನೆ

6.1. ಪ್ಯಾಕೇಜ್ checksums ಅನ್ನು ಶೇಖರಿಸಿಡುವಿಕೆ

RPM ನಲ್ಲಿ ಪ್ಯಾಕೇಜಿನ ಸಮಗ್ರತೆ ಹಾಗು ಸುರಕ್ಷತೆಯನ್ನು ಹೆಚ್ಚಿಸಲು ಸಹಿ ಮಾಡಲಾದ ಪ್ಯಾಕೇಜುಗಳು SHA-256 ನಂತಹ ಬಲವಾದ ಹ್ಯಾಶ್ ಅಲ್ಗಾರಿತಮ್‌ಗಳನ್ನು ಬಳಸುವುದನ್ನು ಬೆಂಬಲಿಸುತ್ತದೆ. Red Hat Enterprise Linux 6 ಪ್ಯಾಕೇಜುಗಳನ್ನು XZ ಲಾಸ್‌ಲೆಸ್‌ ಸಂಕುಚನ ಲೈಬ್ರರಿಯನ್ನು ಬಳಸಿಕೊಂಡು ಸಂಕುಚನಗೊಳಿಸಲಾಗುತ್ತದೆ, ಇದು ಹೆಚ್ಚಿನ ಸಂಕುಚನಕ್ಕಾಗಿ LZMA2 ಕಂಪ್ರೆಶನ್ (ಪ್ಯಾಕೇಜಿನ ಗಾತ್ರವನ್ನು ಕಡಿಮೆ ಮಾಡುತ್ತದೆ) ಅನ್ನು ಬಳಸುತ್ತದೆ ಹಾಗು ವೇಗವಾಗಿ ಅನ್‌ಪ್ಯಾಕ್‌ ಮಾಡುವುದನ್ನು ಬೆಂಬಲಿಸುತ್ತದೆ (RPMಗಳನ್ನು ಅನುಸ್ಥಾಪಿಸುವಾಗ). ಲಭ್ಯವಿರುವ ಶಕ್ತಿಯುತವಾದ checksums ನ ಬಗೆಗಿನ ಇನ್ನಷ್ಟು ಮಾಹಿತಿಗಾಗಿ ನಿಯೋಜನಾ ಮಾರ್ಗದರ್ಶಿಯನ್ನು ನೋಡಿ

6.2. PackageKit ಪ್ಯಾಕೇಜ್ ವ್ಯವಸ್ಥಾಪಕ

ನಿಮ್ಮ ವ್ಯವಸ್ಥೆಯೊಂದಿಗೆ ಸರಿಹೊಂದುವ ಪ್ಯಾಕೇಜುಗಳನ್ನು ಹಾಗು ಪ್ಯಾಕೇಜು ಸಮೂಹಗಳನ್ನು ನೋಡಲು, ಅಪ್‌ಡೇಟ್ ಮಾಡಲು, ಅನುಸ್ಥಾಪಿಸಲು ಹಾಗು ಅನುಸ್ಥಾಪಿಸಲಾಗಿದ್ದನ್ನು ತೆಗೆದು ಹಾಕಲು ಮತ್ತು Yum ರೆಪೊಸಿಟರಿಗಳನ್ನು ಶಕ್ತಗೊಳಿಸಲು PackageKit ಅನ್ನು Red Hat ಒದಗಿಸುತ್ತದೆ. PackageKit ಅನ್ನು GNOME ಫಲಕದ ಮೆನುವಿನ ಮೂಲಕ ತೆರೆಯಲು ಅಥವ ಅಪ್‌ಡೇಟ್‌ಗಳು ಲಭ್ಯವಿವೆ ಎಂದು ಸೂಚನಾ ಸ್ಥಳದಲ್ಲಿ, PackageKit ಎಚ್ಚರಿಸಿದಾಗ ತೆರೆಯಲು ಹಲವಾರು ಬಳಕೆದಾರ ಸಂಪರ್ಕಸಾಧನಗಳು ಲಭ್ಯವಿವೆ. ಹೆಚ್ಚುವರಿಯಾಗಿ,PackageKit ತಕ್ಷಣವಾಗಿ ರೆಪೊಸಿಟರಿಯನ್ನು ಶಕ್ತಗೊಳಿಸುವಿಕೆ ಅಥವ ಅಶಕ್ತಗೊಳಿಸುವಿಕೆ, ಒಂದು ಚಿತ್ರಾತ್ಮಕ ಹಾಗು ಹುಡುಕಬಹುದಾದ ವ್ಯವಹಾರದ ದಾಖಲೆ, ಮತ್ತು PolicyKit ಸಂಘಟನೆಯನ್ನು ಅನುಮತಿಸುತ್ತದೆ. Package Kit ಬಗೆಗಿನ ಹೆಚ್ಚಿನ ಮಾಹಿತಿಯು ನಿಯೋಜನಾ ಮಾರ್ಗದರ್ಶಿಯಲ್ಲಿ ಲಭ್ಯವಿದೆ.

6.3. Yum

ತನ್ನ ಪ್ಲಗ್‌ಇನ್ ಆರ್ಕಿಟೆಕ್ಚರಿನ ಮೂಲಕ, Yum ನಲ್ಲಿ ಇವುಗಳಂತಹ ಹಲವಾರು ಸಾಮರ್ಥ್ಯಕ್ಕೆ ಹೊಸದಾಗಿ ಅಥವ ಸುಧಾರಿತ ಬೆಂಬಲವನ್ನು ಒದಗಿಸಲಾಗುತ್ತದೆ: ಡೆಲ್ಟಾ RPMಗಳು (ಪ್ರೆಸ್ಟೊ ಪ್ಲಗ್‌ಇನ್ ಅನ್ನು ಬಳಸಿಕೊಂಡು), RHN ಕಮ್ಯುನಿಕೇಶನ್ (rhnplugin), ಹಾಗು ಆಡಿಟಿಂಗ್ ಮತ್ತು ಅನ್ವಯಿಸುವಿಕೆಯಂತ —ಗಣಿಸಲಾದ ಕಡಿಮೆ-ಇನ್‌ವೇಸೀವ್ (ಕನಿಷ್ಟ) ಸಂಖ್ಯೆಯ ಅಪ್‌ಡೇಟ್‌ಗಳನ್ನು ಬಳಸುವಿಕೆ—ಒಂದು ವ್ಯವಸ್ಥೆಗೆ ಸೂಕ್ತವಾದ ಸುರಕ್ಷತಾ ಪರಿಹಾರಗಳನ್ನು ಮಾತ್ರ (ಸುರಕ್ಷತಾ ಪ್ಲಗ್‌ಇನ್).
Yum ನೊಂದಿಗೆ yum-config-manager ಸವಲತ್ತನ್ನೂ ಸಹ ಸೇರಿಸಲಾಗಿದ್ದು, ಇದು ಪ್ರತಿಯೊಂದು ರೆಪೊಸಿಟರಿಯ ಸಂಪೂರ್ಣ ಸಂರಚನಾ ಆಯ್ಕೆಗಳನ್ನು ಹಾಗು ನಿಯತಾಂಕಗಳ ಸೆಟ್‌ಗಳನ್ನು ತೋರಿಸುತ್ತದೆ. Yum ನ ಅಪ್‌ಡೇಟ್‌ನ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನಿಯೋಜನಾ ಮಾರ್ಗದರ್ಶಿಯನ್ನು ನೋಡಿ

7. ಕ್ಲಸ್ಟರಿಂಗ್

ಕ್ಲಸ್ಟರುಗಳು ವಿಶ್ವಾಸಾರ್ಹತೆ, ಗಾತ್ರ ಬದಲಾವಣೆಯ ಸಾಮರ್ಥ್ಯ, ಹಾಗು ಸಂದಿಗ್ಧ ಉತ್ಪಾದನಾ ಸೇವೆಗಳಲ್ಲಿ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಅನೇಕ ಗಣಕಗಳನ್ನು (ನೋಡ್‌ಗಳು) ಒಟ್ಟಿಗೆ ಕೆಲಸ ಮಾಡುವ ವ್ಯವಸ್ಥೆಯಾಗಿರುತ್ತದೆ. Red Hat Enterprise Linux 6 ಅನ್ನು ಬಳಸಿಕೊಂಡು ಕಾರ್ಯಕ್ಷಮತೆ, ಅತಿ ಲಭ್ಯತೆ, ಹೊರೆ ಸಮತೋಲನೆ, ಹಾಗು ಕಡತ ಹಂಚಿಕೆ ಮುಂತಾದ ಬದಲಾಗುವ ಅಗತ್ಯತೆಗೆ ಹೊಂದಿಕೊಳ್ಳುವಂತೆ ಹಲವಾರು ಸಂರಚನೆಗಳಲ್ಲಿ ನಿಯೋಜಿಸಬಹುದು.

ಹೆಚ್ಚಿನ ಓದಿಗಾಗಿ

Cluster Suite Overview ಎಂಬ ದಸ್ತಾವೇಜು Red Hat Enterprise Linux 6 ಕ್ಕಾಗಿನ Red Hat ಕ್ಲಸ್ಟರ್ ಸೂಟ್‌ನ ಅವಲೋಕವನ್ನು ಒದಗಿಸುತ್ತದೆ. ಜೊತೆಗೆ, High Availability Administration ಎನ್ನು ದಸ್ತಾವೇಜು Red Hat Enterprise Linux 6 ಕ್ಕಾಗಿನ Red Hat ಕ್ಲಸ್ಟರ್ ವ್ಯವಸ್ಥೆಗಳನ್ನು ಸಂರಚಿಸುವ ಹಾಗು ನಿರ್ವಹಿಸುವ ಮಾಹಿತಿಯನ್ನು ವಿವರಿಸುತ್ತದೆ.

7.1. Corosync ಕ್ಲಸ್ಟರ್ ಎಂಜಿನ್

Red Hat Enterprise Linux 6 ರಲ್ಲಿ ಪ್ರಮುಖ ಕ್ಲಸ್ಟರ್ ಕಾರ್ಯಕ್ಕಾಗಿ Corosync ಕ್ಲಸ್ಟರ್ ಎಂಜಿನ್‌ ಅನ್ನು ಬಳಸಲಾಗುತ್ತದೆ.

7.2. ಒಗ್ಗೂಡಿಸಲಾದ ಪ್ರವೇಶ ಸಂರಚನೆ(ಯುನಿಫೈಡ್ ಲಾಗಿಂಗ್ ಕಾನ್ಫಿಗರೇಶನ್)

ಅತಿ ಲಭ್ಯತೆಯನ್ನು ನಿಯೋಜಿಸುವ ಹಲವು ಡೆಮನ್‌ಗಳು ಈಗ ಒಂದು ಏಕೀಕೃತವಾದ ದಾಖಲಾತಿ ಸಂರಚನೆಯನ್ನು ಬಳಸುತ್ತದೆ. ಇದರಿಂದಾಗಿ ವ್ಯವಸ್ಥೆಯ ನಿರ್ವಾಹಕರು ಕ್ಲಸ್ಟರ್ ಸಂರಚನೆಯಲ್ಲಿ ಒಂದೆ ಒಂದು ಆಜ್ಞೆಯನ್ನು ಬಳಸಿಕೊಂಡು ಕ್ಲಸ್ಟರ್ ದಾಖಲೆಗಳನ್ನು ಶಕ್ತಗೊಳಿಸಲು, ಸೆರೆಹಿಡಿಯಲು ಹಾಗು ಓದಲು ಅನುವು ಮಾಡಿಕೊಡುತ್ತದೆ.

7.3. ಅತಿ ಲಭ್ಯತೆಯ ನಿರ್ವಹಣೆ

ಕೋಂಗಾ ಎನ್ನುವುದು Red Hat Enterprise Linuxಗೆ ಕೇಂದ್ರೀಕೃತ ಸಂರಚನೆ ಹಾಗು ನಿರ್ವಹಣೆಯನ್ನು ಒದಗಿಸುವ ತಂತ್ರಾಂಶ ಘಟಕಗಳ ಒಂದು ಸಂಘಟಿತ ಸಮೂಹವಾಗಿದೆ. ಕೋಂಗಾದಲ್ಲಿನ ಒಂದು ಪ್ರಮುಖ ಘಟಕವು ಲೂಸಿ (luci) ಆಗಿದ್ದು, ಇದು ಒಂದು ಗಣಕದಲ್ಲಿ ಚಲಾಯಿತಗೊಂಡು ಅನೇಕ ಕ್ಲಸ್ಟರುಗಳು ಹಾಗು ಗಣಕಗಳ ನಡುವೆ ಸಂವಹಿಸುವ ಒಂದು ಪರಿಚಾರಕವಾಗಿರುತ್ತದೆ. Red Hat Enterprise Linux 6 ರಲ್ಲಿ ಲೂಸಿಯೊಂದಿಗೆ ವ್ಯವಹರಿಸುವ ಮಾಧ್ಯಮವಾದಂತಹ ಜಾಲ ಸಂಪರ್ಕಸಾಧನವನ್ನು ಮರಳಿ ವಿನ್ಯಾಸಗೊಳಿಸಲಾಗಿದೆ.

7.4. ಸಾಮಾನ್ಯ ಅತಿ ಲಭ್ಯತೆಯ ಸುಧಾರಣೆಗಳು

Red Hat Enterprise Linux 6 ರಲ್ಲಿ ಮೇಲೆ ಹೇಳಲಾದ ಸವಲತ್ತುಗಳು ಹಾಗು ಸುಧಾರಣೆಗಳ ಜೊತೆಗೆ, ಕ್ಲಸ್ಟರಿಂಗ್‌ಗೆ ಈ ಕೆಳಗಿನ ಸವಲತ್ತುಗಳನ್ನು ಹಾಗು ವರ್ಧನೆಗಳನ್ನು ಅನ್ವಯಿಸಲಾಗಿದೆ.
  • ಇಂಟರ್ನೆಟ್ ಪ್ರೊಟೊಕಾಲ್ ವರ್ಶನ್ 6 (IPv6) ಗಾಗಿನ ವರ್ಧಿತ ಬೆಂಬಲ
  • SCSI ಸ್ಥಿರ ಕಾದಿರಿಸುವಿಕೆ ಫೆನ್ಸಿಂಗ್ ಬೆಂಬಲವನ್ನು ಈಗ ಸುಧಾರಿಸಲಾಗಿದೆ.
  • ವರ್ಚುವಲೈಸ್ಡ್ KVM ಅತಿಥಿಗಳನ್ನು ಈಗ ನಿರ್ವಹಿಸಲಾಗುವ ಸೇವೆಗಳ ರೂಪದಲ್ಲಿ ಚಲಾಯಿಸಲು ಸಾಧ್ಯವಿರುತ್ತದೆ.

8. ಸುರಕ್ಷತೆ

ಹೆಚ್ಚಿನ ಓದಿಗಾಗಿ

ಸುರಕ್ಷತೆ ಮಾರ್ಗದರ್ಶಿಯನ್ನು ಸ್ಥಳೀಯ ಹಾಗು ದೂರಸ್ಥ ಒಳನುಸುಳುವಿಕೆ, ದುರ್ಬಳಕೆ ಹಾಗು ದುರ್ನಡತೆಯ ವಿರುದ್ಧ ಕಾರ್ಯಸ್ಥಳಗಳು ಹಾಗು ಪರಿಚಾರಕಗಳನ್ನು ಸುರಕ್ಷಿತಗೊಳಿಸುವ ಪ್ರಕ್ರಿಯೆಗಳು ಹಾಗು ಪದ್ಧತಿಗಳನ್ನು ಬಳಕೆದಾರರು ಹಾಗು ವ್ಯವಸ್ಥಾಪಕರು ತಿಳಿದುಕೊಳ್ಳಲು ನೆರವಾಗುತ್ತದೆ.

8.1. ಸಿಸ್ಟಮ್ ಸೆಕ್ಯುರಿಟಿ ಸರ್ವಿಸಸ್ ಡೀಮನ್ (SSSD)

System Security Services Daemon (SSSD) ಎನ್ನುವುದು Red Hat Enterprise Linux 6 ರಲ್ಲಿನ ಸವಲತ್ತು ಆಗಿದ್ದು, ಇದು ಗುರುತು ಹಾಗು ದೃಢೀಕರಣದ ಕೇಂದ್ರೀಕೃತ ನಿರ್ವಹಣೆಗಾಗಿ ಸೇವೆಗಳನ್ನು ಅಳವಡಿಸುತ್ತದೆ. ಕೇಂದ್ರೀಕೃತ ಗುರುತು ಹಾಗು ದೃಢೀಕರಣ ಸೇವೆಯಿಂದಾಗಿ ಗುರುತುಗಳ ಸ್ಥಳೀಯ ಕ್ಯಾಶಿಂಗ್ ಅನ್ನು ಶಕ್ತಗೊಳಿಸಬಹುದಾಗಿದ್ದು, ಇದರಿಂದಾಗಿ ಪರಿಚಾರಕದಿಂದ ಸಂಪರ್ಕವು ಕಡಿದು ಹೋದರೂ ಸಹ ಬಳಕೆದಾರರು ಗುರುತಿಸಲು ಸಾಧ್ಯವಿರುತ್ತದೆ. SSSD ಯು ಹಲವು ಬಗೆಯ ಗುರುತು ಹಾಗು ದೃಢೀಕರಣ ಸೇವೆಗಳನ್ನು ಬೆಂಬಲಿಸುತ್ತದೆ, ಅವುಗಳೆಂದರೆ: Red Hat Directory Server, Active Directory, OpenLDAP, 389, Kerberos ಹಾಗು LDAP.

ಹೆಚ್ಚಿನ ಓದಿಗಾಗಿ

ನಿಯೋಜನಾ ಮಾರ್ಗದರ್ಶಿಯು System Security Services Daemon (SSSD) ಅನ್ನು ಹೇಗೆ ಅನುಸ್ಥಾಪಿಸಬೇಕು ಹಾಗು ಸಂರಚಿಸಬೇಕು, ಮತ್ತು ಅದು ಒದಗಿಸುವ ಸವಲತ್ತುಗಳನ್ನು ಹೇಗೆ ಬಳಸಬೇಕು ಎನ್ನುವುದನ್ನು ಹೊಂದಿದೆ.

8.2. ಸೆಕ್ಯುರಿಟಿ-ಎನ್‌ಹಾನ್ಸ್ಡ್ ಲಿನಕ್ಸ್ (SELinux)

ಸೆಕ್ಯುರಿಟಿ-ಎನ್‌ಹಾನ್ಸ್ಡ್ ಲಿನಕ್ಸ್ (SELinux) ಲಿನಕ್ಸ್ ಕರ್ನಲ್‌ಗೆ Mandatory Access Control (MAC) ಅನ್ನು ಸೇರಿಸುತ್ತದೆ ಹಾಗು ಇದನ್ನು Red Hat Enterprise Linux 6 ರಲ್ಲಿ ಪೂರ್ವನಿಯೋಜಿತವಾಗಿ ಶಕ್ತಗೊಳಿಸಲಾಗಿರುತ್ತದೆ. ಸಾಮಾನ್ಯ ಉದ್ಧೇಶದ MAC ಆರ್ಕಿಟೆಕ್ಚರಿಗೆ ನಿರ್ವಾಹಕನ ರೂಪದಲ್ಲಿ ವ್ಯವಸ್ಥೆಯಲ್ಲಿನ ಎಲ್ಲಾ ಪ್ರಕ್ರಿಯೆಗಳು ಹಾಗು ಕಡತಗಳಿಗೆ ಸುರಕ್ಷತೆ ನಿಯಮಗಳನ್ನು ಒತ್ತಾಯಪೂರ್ವಕವಾಗಿ ಹೇರುವ ಸಾಮರ್ಥ್ಯ, ಹಲವಾರು ಸುರಕ್ಷತಾ-ಸಂಬಂಧಿ ಮಾಹಿತಿಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯ ಅಗತ್ಯವಿರುತ್ತದೆ.

8.2.1. ಮಿತಿಗೊಳಪಟ್ಟ ಬಳಕೆದಾರರು

ಸಾಂಪ್ರದಾಯಿಕವಾಗಿ, ಒಂದು ಅನ್ವಯವು ವ್ಯವಸ್ಥೆಯೊಂದಿಗೆ ಹೇಗೆ ವರ್ತಿಸುತ್ತದೆ ಎನ್ನುವುದನ್ನು ವಿವರಿಸಲು ಹಾಗು ನಿಯಂತ್ರಿಸಲು SELinux ಅನ್ನು ಬಳಸಲಾಗುತ್ತಿತ್ತು. Red Hat Enterprise Linux 6 ರಲ್ಲಿನ SELinux ಅನ್ನು ಬಳಸಿಕೊಂಡು ವ್ಯವಸ್ಥೆ ನಿರ್ವಾಹಕರು ಯಾವ ನಿಶ್ಚಿತ ಬಳಕೆದಾರರು ವ್ಯವಸ್ಥೆಯನ್ನು ನಿಲುಕಿಸಿಕೊಳ್ಳಬಹುದು ಎನ್ನುವುದನ್ನು ನಿಯಂತ್ರಿಸಲು ಸಾಧ್ಯವಿರುತ್ತದೆ.

8.2.2. ಸ್ಯಾಂಡ್‌ಬಾಕ್ಸ್

Red Hat Enterprise Linux 6 ರಲ್ಲಿನ SELinux ಹೊಸ ಸುರಕ್ಷತಾ ಸ್ಯಾಂಡ್‌ಬಾಕ್ಸ್ ಸವಲತ್ತನ್ನು ಹೊಂದಿರುತ್ತದೆ. ಸುರಕ್ಷತಾ ಸ್ಯಾಂಡ್‌ಬಾಕ್ಸ್ ವ್ಯವಸ್ಥೆಯ ನಿರ್ವಾಹಕರು ಬಿಗಿಯಾಗಿ ಮಿತಿಗೊಳಪಡಿಸಲಾದ SELinux ಡೊಮೈನಿನಲ್ಲಿ ಯಾವುದೆ ಅನ್ವಯಗಳನ್ನು ಚಲಾಯಿಸಲು ಅನುವು ಮಾಡಿಕೊಡುವ ಕೆಲವು SELinux ನಿಯಮಗಳನ್ನು ಸೇರಿಸುತ್ತದೆ. ಸ್ಯಾಂಡ್‌ಬಾಕ್ಸನ್ನು ಬಳಸುವುದರಿಂದ, ವ್ಯವಸ್ಥೆಯ ನಿರ್ವಾಹಕರು ವ್ಯವಸ್ಥೆಗೆ ತೊಂದರೆಯುಂಟು ಮಾಡದೆ ನಂಬಿಕಸ್ತವಲ್ಲದ ವಿಷಯದ ಸಂಸ್ಕರಣೆಯನ್ನು ಪರಿಶೀಲಿಸಲು ಸಾಧ್ಯವಿರುತ್ತದೆ.

8.2.3. X ಎಕ್ಸೆಸ್‌ ಕಂಟ್ರೋಲ್ ಎಕ್ಸ್ಟೆನ್ಶನ್ (XACE)

X Window System (ಸಾಮಾನ್ಯವಾಗಿ "X" ಎಂದು ಕರೆಯಲಾಗುವ) Red Hat Enterprise Linux 6 ರಲ್ಲಿ ಚಿತ್ರಾತ್ಮಕ ಬಳಕೆದಾರ ಸಂಪರ್ಕಸಾಧನವನ್ನು (GUI) ತೋರಿಸಲು ಮೂಲಭೂತ ಫ್ರೇಮ್‌ವರ್ಕ್ ಅನ್ನು ಒದಗಿಸುತ್ತದೆ. ಈ ಬಿಡುಗಡೆಯಲ್ಲಿ ಹೊಸ X Access Control Extension (XACE) ಅನ್ನು ಸೇರಿಸಲಾಗಿದ್ದು, ಇದರಿಂದಾಗಿ X ನ ಒಳಗೆ ನಿರ್ಧಾರಗಳನ್ನು ನಿಲುಕಿಸಿಕೊಳ್ಳಲು SELinux ಗೆ ಅನುಮತಿಸುತ್ತದೆ, ವಿಶೇಷವಾಗಿ, ವಿಂಡೊ ವಸ್ತುಗಳ ನಡುವೆ ಮಾಹಿತಿಯ ಹರಿವನ್ನು ನಿಯಂತ್ರಿಸುವಿಕೆ.

8.3. ಗೂಢಲಿಪೀಕರಣಗೊಂಡ ಶೇಖರಣಾ ಸಾಧನಗಳಿಗಾಗಿನ ಬ್ಯಾಕ್‌ಅಪ್‌ ಗುಪ್ತವಾಕ್ಯಾಂಶಗಳು

Red Hat Enterprise Linux ನಲ್ಲಿ ಶೇಖರಣಾ ಸಾಧನದಲ್ಲಿನ ದತ್ತಾಂಶವನ್ನು ಗೂಢಲಿಪೀಕರಿಸು ಸಾಮರ್ಥ್ಯವನ್ನು ಒದಗಿಸಲಾಗಿದ್ದು, ಇದರಿಂದಾಗಿ ಅನಧೀಕೃತವಾಗಿ ದತ್ತಾಂಶವನ್ನು ನಿಲುಕಿಸಿಕೊಳ್ಳುವುದನ್ನು ತಡೆಯಬಹುದಾಗಿದೆ. ದತ್ತಾಂಶವನ್ನು ಒಂದು ನಿಶ್ಚಿತವಾದ ಕೀಲಿಯಿಂದ ಮಾತ್ರ ಓದಲು ಸಾಧ್ಯವಿರುವಂತಹ ಒಂದು ವಿನ್ಯಾಸಕ್ಕೆ ಮಾರ್ಪಡಿಸುವಿಕೆಗೆ ಗೂಢಲಿಪೀಕರಣ ಎನ್ನಲಾಗುತ್ತದೆ. ಈ ಕೀಲಿಯನ್ನು — ಅನುಸ್ಥಾಪನೆಯ ಸಮಯದಲ್ಲಿ ರಚಿಸಲಾಗುತ್ತದೆ, ಹಾಗು ಅದನ್ನು ಒಂದು ಗುಪ್ತವಾಕ್ಯಾಂಶದಿಂದ ಸಂರಕ್ಷಿಸಲಾಗುತ್ತದೆ — ಹಾಗು ಗೂಢಲಿಪೀಕರಿಸಲಾದ ದತ್ತಾಂಶವನ್ನು ಡೀಕ್ರಿಪ್ಟ್ ಮಾಡಲು ಇದು ಒಂದೇ ದಾರಿಯಾಗಿರುತ್ತದೆ.
text-based installer
ಚಿತ್ರ 7. ದತ್ತಾಂಶವನ್ನು ಡೀಕ್ರಿಪ್ಟ್ ಮಾಡುವಿಕೆ

ಆದರೆ, ಗುಪ್ತವಾಕ್ಯಾಂಶವು ಮರೆತು ಹೋದಲ್ಲಿ, ಗೂಢಲಿಪೀಕರಣ ಕೀಲಿಯನ್ನು ಬಳಸಲು ಸಾಧ್ಯವಿರುವುದಿಲ್ಲ, ಹಾಗು ಗೂಢಲಿಪೀಕರಿಸಲಾದ ಶೇಖರಣಾ ಸಾಧನವನ್ನು ನಿಲುಕಿಸಿಕೊಳ್ಳಲು ಸಾಧ್ಯವಿರುವುದಿಲ್ಲ.
Red Hat Enterprise Linux 6 ರಲ್ಲಿ ಗೂಢಲಿಪೀಕರಣ ಕೀಲಿಯನ್ನು ಉಳಿಸಿಕೊಳ್ಳುವ ಹಾಗು ಬ್ಯಾಕ್ಅಪ್‌ ಗುಪ್ತವಾಕ್ಯಾಂಶಗಳನ್ನು ರಚಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಸವಲತ್ತಿನಿಂದಾಗಿ ಮೂಲ ಗುಪ್ತವಾಕ್ಯಾಂಶವು ಮರೆತಹೋದರೂ ಸಹ ಗೂಢಲಿಪೀಕರಿಸಲಾದ ಪರಿಮಾಣವನ್ನು ಮರಳಿ ಪಡೆಯಲು (ರೂಟ್ ಸಾಧನವೂ ಸೇರಿದಂತೆ) ಸಾಧ್ಯವಿರುತ್ತದೆ.

8.4. sVirt

libvirt ಎನ್ನುವುದು Red Hat Enterprise Linux 6 ರ ವರ್ಚುವಲೈಸೇಶನ್ ಸಾಮರ್ಥ್ಯಗಳನ್ನು ನಿರ್ವಹಿಸಬಹುದಾದ C ಭಾಷೆಯ application programming interface (API) ಆಗಿರುತ್ತದೆ. ಈ ಬಿಡುಗಡೆಯಲ್ಲಿ, libvirt ಹೊಸ sVirt ಘಟಕವನ್ನು ಹೊಂದಿರುತ್ತದೆ. sVirt ಅನ್ನು SELinux ನಲ್ಲಿ ಸೇರಿಸಲಾಗಿದ್ದು, ಇದರಿಂದಾಗಿ ವರ್ಚುವಲೈಸ್ಡ್ ಆತಿಥೇಯಗಳನ್ನು ಹಾಗು ಅತಿಥಿಗಳನ್ನು ಅನಧೀಕೃತವಾಗಿ ನಿಲುಕಿಸಿಕೊಳ್ಳುವುದನ್ನು ತಡೆಯುವಂತಹ ಸುರಕ್ಷತಾ ವ್ಯವಸ್ಥೆಯನ್ನು ಒದಗಿಸುತ್ತದೆ.

8.5. ಎಂಟರ್ಪ್ರೈಸ್ ಸೆಕ್ಯುರಿಟಿ ಕ್ಲೈಂಟ್

Enterprise Security Client (ESC) ಎನ್ನುವುದು Red Hat Enterprise Linux ನಲ್ಲಿ ಸ್ಮಾರ್ಟ್ ಕಾರ್ಡ್ ಹಾಗು ಟೋಕನ್‌ಗಳನ್ನು ನಿರ್ವಹಿಸಬಹುದಾದ ಒಂದು ಸರಳವಾದ GUI ಆಗಿದೆ. ಹೊಸ ಸ್ಮಾರ್ಡ್ ಕಾರ್ಡುಗಳನ್ನು ಫಾರ್ಮ್ಯಾಟ್‌ ಮಾಡಬಹುದಾಗಿರುತ್ತದೆ ಹಾಗು ಎನ್ರೋಲ್ ಮಾಡಬಹುದಾಗಿರುತ್ತದೆ, ಅಂದರೆ ಹೊಸ ಕೀಲಿಗಳನ್ನು ಉತ್ಪಾದಿಸಲಾಗುತ್ತದೆ ಹಾಗು ಸ್ವಯಂಚಾಲಿತವಾಗಿ ಸ್ಮಾರ್ಟ್ ಕಾರ್ಡುಗಳಿಗಾಗಿ ಪ್ರಮಾಣಪತ್ರಗಳಿಗಾಗಿ ಮನವಿ ಸಲ್ಲಿಸಲಾಗುತ್ತದೆ. ಸ್ಮಾರ್ಟ್ ಕಾರ್ಡುಗಳ ಜೀವನ ಚಕ್ರವನ್ನು ನಿರ್ವಹಿಸಬಹುದಾಗಿರುತ್ತದೆ ಹಾಗು ಕಳೆದು ಹೋದ ಸ್ಮಾರ್ಟ್ ಕಾರ್ಡುಗಳ ಪ್ರಮಾಣಪತ್ರಗಳನ್ನು ಮರಳಿ ಪಡೆಯಬಹುದಾಗಿರುತ್ತದೆ ಮತ್ತು ವಾಯಿದೆ ತೀರಿದ ಪ್ರಮಾಣಪತ್ರಗಳನ್ನು ನವೀಕರಿಸಬಹುದಾಗಿರುತ್ತದೆ. ESC ದೊಡ್ಡ ಪ್ರಮಾಣ ಸಾರ್ವಜನಿಕ-ಕೀಲಿ ಸೌಕರ್ಯ ನಿರ್ವಹಣಾ ಉತ್ಪನ್ನವಾದಂತಹ Red Hat Certificate System ಅಥವ Dogtag PKI ಯೊಂದಿಗೆ ಕೆಲಸ ಮಾಡುತ್ತದೆ.

9. ಜಾಲಬಂಧ

9.1. ಬಹುಸರತಿ ಜಾಲಬಂಧ

ಒಂದು ಜಾಲಬಂಧದ ಮೂಲಕ ವರ್ಗಾಯಿಸಲಾದ ಪ್ರತಿಯೊಂದು ದತ್ತಾಂಶ ಪ್ಯಾಕೆಟ್‌ಗಳನ್ನೂ ಸಹ CPU ಸಂಸ್ಕರಿಸ ಬೇಕಾಗುತ್ತದೆ. Red Hat Enterprise Linux 6 ರಲ್ಲಿನ ಕೆಳಮಟ್ಟದ ಜಾಲಬಂಧ ಅಳವಡಿಕೆಯಿಂದಾಗಿ ಜಾಲಬಂಧ ಸಾಧನ ಚಾಲಕಗಳು ಜಾಲಬಂಧ ಪ್ಯಾಕೆಟ್‌ ಸಂಸ್ಕರಣೆಯನ್ನು ಅನೇಕ ಸರತಿಗಳ ಮೂಲಕ ಹಂಚಿಕೊಳ್ಳುವುದನ್ನು ಅನುಮತಿಸುತ್ತದೆ. ಆಧುನಿಕ ವ್ಯವಸ್ಥೆಗಳಲ್ಲಿ ಈ ಪ್ರಕ್ರಿಯೆಗಳನ್ನು ಹಂಚಿಕೆ ಮಾಡುವುದರಿಂದ ವ್ಯವಸ್ಥೆಯ ಅನೇಕ ಸಂಸ್ಕಾರಗಳನ್ನು ಹಾಗು CPU ಕೋರುಗಳನ್ನು ಉತ್ತಮವಾಗಿ ಬಳಸಿದಂತಾಗುತ್ತದೆ.

9.2. ಇಂಟರ್ನೆಟ್ ಪ್ರೊಟೊಕಾಲ್ ಆವೃತ್ತಿ 6 (IPv6)

ಮುಂದಿನ-ಪೀಳಿಗೆಯ Internet Protocol version 6 (IPv6) ರ ಗುಣವಿಶೇಷಗಳನ್ನು Internet Protocol version 4 (IPv4) ರ ಮುಂದಿನ ಆವೃತ್ತಿಯಾಗಿ ವಿನ್ಯಾಸಗೊಳಿಸಲಾಗಿದೆ. IPv4 ಗೆ ಹೋಲಿಸಿದಲ್ಲಿ IPv6 ದೊಡ್ಡ ವ್ಯಾಪ್ತಿಯ ಸುಧಾರಣೆಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವೆಂದರೆ: ವಿಸ್ತರಿಸಲಾದ ಅಡ್ರೆಸಿಂಗ್ ಸಾಮರ್ಥ್ಯ, ಫ್ಲೋ ಲೇಬಲಿಂಗ್ ಹಾಗು ಸರಳೀಕೃತ ಹೆಡರ್ ಫಾರ್ಮ್ಯಾಟ್.

9.2.1. ಆಪ್ಟಿಮಿಸ್ಟಿಕ್ ಡೂಪ್ಲಿಕೇಟ್ ಅಡ್ರೆಸ್ ಡಿಟೆಕ್ಶನ್

ಡೂಪ್ಲಿಕೇಟ್ ಅಡ್ರೆಸ್ ಡಿಟೆಕ್ಶನ್ (DAD) ಎನ್ನುವುದು IPv6 ರಲ್ಲಿನ Neighbor Discovery Protocol ಭಾಗವಾಗಿರುತ್ತದೆ. ವಿಶೇಷವಾಗಿ, IPv6 ವಿಳಾಸವನ್ನು ಈಗಾಗಲೆ ಬಳಸಲಾಗಿದೆಯೆ ಎಂದು ಪರಿಶೀಲಿಸಲು DAD ಅನ್ನು ನಿಯೋಜಿಸಲಾಗುತ್ತದೆ. Red Hat Enterprise Linux ನಲ್ಲಿ DADಯ ವೇಗವಾದ ಅನುರೂಪಗೊಳಿಕೆಯಾದಂತಹ ಆಪ್ಟಿಮಿಸ್ಟಿಕ್ ಡೂಪ್ಲಿಕೇಟ್ ಅಡ್ರೆಸ್ ಡಿಟೆಕ್ಶನ್ ಅನ್ನು ಸೇರಿಸಲಾಗಿದೆ.

9.2.2. ಇಂಟ್ರಾ-ಸೈಟ್ ಆಟೋಮ್ಯಾಟಿಕ್ ಟನಲ್ ಅಡ್ರೆಸಿಂಗ್ ಪ್ರೊಟೊಕಾಲ್

Red Hat Enterprise Linux 6 ರಲ್ಲಿ ಇಂಟ್ರಾ-ಸೈಟ್ ಆಟೋಮ್ಯಾಟಿಕ್ ಟನಲ್ ಅಡ್ರೆಸಿಂಗ್ ಪ್ರೊಟೊಕಾಲ್ (ISATAP) ಗೆ ಬೆಂಬಲವನ್ನು ಸೇರಿಸಲಾಗಿದೆ. ISATAP ಎನ್ನುವುದು IPv6 ರೌಟರುಗಳನ್ನು ಆತಿಥೇಯಗಳನ್ನು IPv4 ಜಾಲಬಂಧ ಸೌಕರ್ಯದಿಂದ ಸಂಪರ್ಕ ಸಾಧಿಸುವ ವ್ಯವಸ್ಥೆಯನ್ನು ಒದಗಿಸುವ ಮೂಲಕ IPv4 ಇಂದ IPv6 ಗೆ ವರ್ಗಾಯಿಸುವ ಒಂದು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

9.3. ನೆಟ್‌ಲೇಬಲ್

ನೆಟ್‌ಲೇಬಲ್ ಎನ್ನುವುದು Red Hat Enterprise Linux 6 ರಲ್ಲಿರುವ Linux Security Modules (LSMs) ಗೆ ಪ್ಯಾಕೆಟ್‌ ಲೇಬಲಿಂಗ್ ಸೇವೆಗಳನ್ನು ಒದಗಿಸುವ ಒಂದು ಹೊಸ ಕರ್ನಲ್-ಹಂತದ ಸವಲತ್ತು ಆಗಿದೆ. ನೆಟ್‌ಲೇಬಲ್ ಅನ್ನು ಬಳಸಿಕೊಂಡು ದತ್ತಾಂಶ ಪ್ಯಾಕೆಟ್‌ ಅನ್ನು ಲೇಬಲ್ ಮಾಡುವಿಕೆಯಿಂದಾಗಿ LSM ಒಳಬರುವ ಜಾಲಬಂಧ ಪ್ಯಾಕೆಟ್‌ಗಳಿಗೆ ಉತ್ತಮವಾದ ಸುರಕ್ಷತೆಯನ್ನು ಒದಗಿಸಲು ನೆರವಾಗುತ್ತದೆ.

9.4. ಜನೆರಿಕ್ ರಿಸೀವ್ ಆಫ್‌ಲೋಡ್

Red Hat Enterprise Linux 6 ರಲ್ಲಿನ ಕೆಳ-ಮಟ್ಟದ ಜಾಲಬಂಧ ಅಳವಡಿಕೆಯು ಜನೆರಿಕ್ ರಿಸೀವ್ ಆಫ್‌ಲೋಡ್ (GRO) ಬೆಂಬಲವನ್ನು ಹೊಂದಿರುತ್ತದೆ. GRO ವ್ಯವಸ್ಥೆಯು CPU ಇಂದ ನಡೆಸಲಾಗುವ ಸಂಸ್ಕರಣೆಯನ್ನು ಕಡಿಮೆ ಮಾಡುವ ಮೂಲಕ ಒಳಬರುವ ಜಾಲಬಂಧ ಸಂಪರ್ಕಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. GRO ವು ಲಾರ್ಜ್ ರಿಸೀವ್ ಆಫ್‌ಲೋಡ್ (LRO) ವ್ಯವಸ್ಥೆಯು ಬಳಸುವ ರೀತಿಯ ತಂತ್ರವನ್ನೇ ಬಳಸುತ್ತಾದರೂ, ಇದನ್ನು ದೊಡ್ಡ ವ್ಯಾಪ್ತಿಯ ವರ್ಗಾವಣೆ ಪದರ ಪ್ರೊಟೊಕಾಲ್‌ಗಳಲ್ಲಿ ಬಳಸಬಹುದಾಗಿರುತ್ತದೆ.

9.5. ವೈರ್ಲೆಸ್ ಬೆಂಬಲ

Red Hat Enterprise Linux 6 ರಲ್ಲಿ ವೈರ್ಲೆಸ್ ಜಾಲಬಂಧ ಹಾಗು ಸಾಧನಗಳಿಗೆ ಉತ್ತಮ ಬೆಂಬಲವನ್ನು ಸೇರಿಸಲಾಗಿದೆ. IEEE 802.11 ಸೆಟ್‌ನ ಶಿಷ್ಟತೆಗಳನ್ನು ಬಳಸಿಕೊಳ್ಳುವ ವೈರ್ಲೆಸ್ ಸ್ಥಳೀಯ ಕ್ಷೇತ್ರದ ಜಾಲಬಂಧದ ಬೆಂಬಲವನ್ನು ಉತ್ತಮಗೊಳಿಸಲಾಗಿದ್ದು, ಇದರಲ್ಲಿ 802.11n ಆಧರಿತವಾದ ಜಾಲಬಂಧಕ್ಕೆ ಬೆಂಬಲವನ್ನು ಸೇರಿಸಲಾಗಿದೆ.

10. ಗಣಕತೆರೆ

10.1. ಚಿತ್ರಾತ್ಮಕ ಆರಂಭ

Red Hat Enterprise Linux 6 ರಲ್ಲಿ ಯಂತ್ರಾಂಶವನ್ನು ಆರಂಭಿಸಿದ ಕೂಡಲೆ ಪ್ರಾರಂಭಗೊಳ್ಳುವ ಹೊಸತಾದ, ಸುಲಲಿತವಾದ ಚಿತ್ರಾತ್ಮಕ ಬೂಟ್ ಅನುಕ್ರಮವನ್ನು ಪರಿಚಯಿಸುತ್ತದೆ.
Graphical Boot Screen
ಚಿತ್ರ 8. ಚಿತ್ರಾತ್ಮಕ ಬೂಟ್‌ ತೆರೆ

ಹೊಸತಾದ ಚಿತ್ರಾತ್ಮಕ ಬೂಟ್‌ ಅನುಕ್ರಮವು ವ್ಯವಸ್ಥೆಯು ಬಳಕೆದಾರರಿಗೆ ಬೂಟ್‌ ಆಗುವಿಕೆಯ ಒಂದು ಸರಳವಾದ ದೃಶ್ಯರೂಪದ ಪ್ರತಿಕ್ರಿಯೆಯನ್ನು ಒದಗಿಸುತ್ತದೆ ಹಾಗು ಸುಲಲಿತವಾಗಿ ಪ್ರವೇಶ ತೆರೆಗೆ ಬದಲಾಯಿಸಬಹುದಾಗುತ್ತದೆ. Red Hat Enterprise Linux 6 ಚಿತ್ರಾತ್ಮಕ ಬೂಟ್ ಅನುಕ್ರಮವು ಕರ್ನಲ್ ಮಾಡ್‌ಸೆಟ್ಟಿಂಗ್ ಸವಲತ್ತಿನ ಮೂಲಕ ಶಕ್ತಗೊಳಿಸಲಾಗುತ್ತದೆ ಹಾಗು ATI, Intel ಹಾಗು NVIDIA ಗ್ರಾಫಿಕ್ಸ್ ಯಂತ್ರಾಂಶದಲ್ಲಿ ಲಭ್ಯವಿರುತ್ತದೆ

ಸೂಚನೆ

ವ್ಯವಸ್ಥೆಯ ನಿರ್ವಾಹಕರು ಈಗಲೂ ಸಹ ಚಿತ್ರಾತ್ಮಕ ಬೂಟ್‌ ಸಮಯದಲ್ಲಿ F11 ಕೀಲಿಯನ್ನು ಒತ್ತುವ ಮೂಲಕ ಬೂಟ್ ಅನುಕ್ರಮದಲ್ಲಿನ ಪ್ರಗತಿಯ ವಿವರಗಳನ್ನು ನೋಡಬಹುದಾಗಿರುತ್ತದೆ.

10.2. ತಾತ್ಕಾಲಿಕ ಸ್ಥಗಿತ ಹಾಗು ಮರಳಿ ಆರಂಭಿಸುವಿಕೆ

ತಾತ್ಕಾಲಿಕ ಸ್ಥಗಿತ ಹಾಗು ಮರಳಿ ಆರಂಭಿಸುವಿಕೆಯು Red Hat Enterprise Linux ನಲ್ಲಿನ ಒಂದು ಸವಲತ್ತಾಗಿದ್ದು, ಇದು ಗಣಕವನ್ನು ಕಡಿಮೆ ವಿದ್ಯುಚ್ಛಕ್ತಿ ಸ್ಥಿತಿಯಲ್ಲಿ ಇರಿಸಿ ನಂತರ ತೆಗೆಯುತ್ತದೆ. ಹೊಸ ಕರ್ನಲ್ ಮಾಡ್‌ಸೆಟ್ಟಿಂಗ್ ಸವಲತ್ತು ತಾತ್ಕಾಲಿಕ ಸ್ಥಗಿತ ಹಾಗು ಮರಳಿ ಆರಂಭಿಸುವಿಕೆ ಸವಲತ್ತಿಗೆ ವರ್ಧಿತ ಬೆಂಬಲವನ್ನು ಶಕ್ತಗೊಳಿಸುತ್ತದೆ. ಈ ಹಿಂದೆ, ಗ್ರಾಫಿಕ್ಸ್ ಯಂತ್ರಾಂಶವು ಬಳಕೆದಾರಸ್ಥಳ ಅನ್ವಯಗಳ ಮೂಲಕ ತಾತ್ಕಾಲಿಕ ಸ್ಥಗಿತಗೊಂಡು ನಂತರ ಮರಳಿ ಆರಂಭಿಸಲ್ಪಡುತ್ತಿತ್ತು. Red Hat Enterprise Linux 6 ರಲ್ಲಿ, ಈ ಕಾರ್ಯಭಾರವನ್ನು ಕರ್ನಲ್‌ಗೆ ವರ್ಗಾಯಿಸಲಾಗಿದ್ದು, ಇದು ಕಡಿಮೆ ವಿದ್ಯುಚ್ಛಕ್ತಿ ಸ್ಥಿತಿಯನ್ನು ಶಕ್ತಗೊಳಿಸಲು ಹೆಚ್ಚು ನಂಬಿಕಸ್ತ ವ್ಯವಸ್ಥೆಯನ್ನು ಒದಗಿಸುತ್ತದೆ.

10.3. ಬಹು ಪ್ರದರ್ಶಕ ಬೆಂಬಲ

Red Hat Enterprise Linux 6 ಬಹು ಪ್ರದರ್ಶಕಗಳನ್ನು ಹೊಂದಿರುವ ವ್ಯವಸ್ಥೆಗಳಿಗೆ ಉತ್ತಮ ಬೆಂಬಲವನ್ನು ಒದಗಿಸುತ್ತದೆ . ಒಂದು ಗಣಕಕ್ಕೆ ಹೆಚ್ಚುವರಿ ಪ್ರದರ್ಶಕವನ್ನು ಜೋಡಿಸಿದಾಗ, ಗ್ರಾಫಿಕ್ಸ್ ಚಾಲಕವು ಅದನ್ನು ಗುರುತಿಸುತ್ತದೆ ಹಾಗು ಸ್ವಯಂಚಾಲಿತವಾಗಿ ಅದನ್ನು ಗಣಕತೆರೆಗೆ ಸೇರಿಸುತ್ತದೆ. ಅದೆ ರೀತಿ, ಪ್ರದರ್ಶಕದ ಸಂಪರ್ಕವನ್ನು ತಪ್ಪಿಸಿದಾಗ, ಗ್ರಾಫಿಕ್ಸ್ ಚಾಲಕವು ಸ್ವಯಂಚಾಲಿತವಾಗಿ ಅದನ್ನು ಗಣಕತೆರೆಯಿಂದ ತೆಗೆದು ಹಾಕುತ್ತದೆ.

ಸೂಚನೆ

ಪೂರ್ವನಿಯೋಜಿತವಾಗಿ, ಹೆಚ್ಚುವರಿ ಪ್ರದರ್ಶಕವನ್ನು ವ್ಯಾಪಿಸಲಾದ ವಿನ್ಯಾಸದಲ್ಲಿ ಪ್ರಸಕ್ತ ಪ್ರದರ್ಶಕದ ಎಡಭಾಗದಲ್ಲಿ ಸೇರಿಸಲಾಗುತ್ತದೆ.
ಹೆಚ್ಚುವರಿ ಪ್ರದರ್ಶಕಗಳನ್ನು ಸ್ವಯಂಚಾಲಿತವಾಗಿ ಗುರುತಿಸುವಿಕೆಯು ಪದೆ ಪದೆ ಪ್ರದರ್ಶಕವನ್ನು ಜೋಡಿಸುವುದು ಹಾಗು ತೆಗೆದುಹಾಕುವಂತಹ ಸಂದರ್ಭಗಳಲ್ಲಿ ಉಪಯುಕ್ತವಾಗುತ್ತದೆ (ಉದಾ. ಒಂದು ಬಾಹ್ಯ ಪ್ರೊಜೆಕ್ಟರಿನ ಜೊತೆಗೆ ಒಂದು ಲ್ಯಾಪ್‌ಟಾಪ್‌ ಅನ್ನು ಸಿದ್ಧಗೊಳಿಸುವಿಕೆ)

10.3.1. ಪ್ರದರ್ಶಕದ ಆದ್ಯತೆಗಳು

ಹೊಸ ಪ್ರದರ್ಶಕದ ಆದ್ಯತೆಗಳ ಸಂವಾದ ಚೌಕವು ಅನೇಕ ಪ್ರದರ್ಶಕ ವಿನ್ಯಾಸಗಳನ್ನು ಇನ್ನಷ್ಟು ಬದಲಾಯಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.
Display Preferences dialog
ಚಿತ್ರ 9. ಪ್ರದರ್ಶಕದ ಆದ್ಯತೆಗಳ ಸಂವಾದಚೌಕ

ಹೊಸ ಸಂವಾದ ಚೌಕವು ಪ್ರಸಕ್ತ ಗಣಕಕ್ಕೆ ಲಗತ್ತಿಸಲಾದ ಪ್ರತಿಯೊಂದು ಪ್ರದರ್ಶಕದ ಸ್ಥಾನ, ರೆಸಲ್ಯೂಶನ್, ಪುನಶ್ಚೇತನ ದರ ಹಾಗು ತಿರುಗಿಸುವ ಸಿದ್ಧತೆಗಳನ್ನು ತಕ್ಷಣ ಬದಲಾಯಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ.

10.4. NVIDIA ಗ್ರಾಫಿಕ್ಸ್‌ ಸಾಧನಗಳಿಗಾಗಿನ nouveau ಚಾಲಕ

Red Hat Enterprise Linux 6 ರಲ್ಲಿ NVIDIA GeForce 200 ಸರಣಿಗಳೂ ಸೇರಿದಂತೆ ಎಲ್ಲಾ NVIDIA ಗ್ರಾಫಿಕ್ಸ್ ಸಾಧನಗಳಿಗಾಗಿ ಹೊಸ nouveau ಚಾಲಕವನ್ನು ಪೂರ್ವನಿಯೋಜಿತವಾಗಿಸಲಾಗಿದೆ. nouveau ವು 2D ಹಾಗು ತಂತ್ರಾಂಶ ವೀಡಿಯೊ ವೇಗವರ್ಧನೆ ಹಾಗು ಕರ್ನಲ್ ಮಾಡ್‌ಸೆಟ್ಟಿಂಗ್ ಬೆಂಬಲಿಸುತ್ತದೆ.

ಸೂಚನೆ

NVIDIA ಯಂತ್ರಾಂಶದ (nv) ಈ ಹಿಂದಿನ ಪೂರ್ವನಿಯೋಜಿತ ಚಾಲಕವು ಈಗಲೂ ಸಹ Red Hat Enterprise Linux 6 ರಲ್ಲಿ ಲಭ್ಯವಿರುತ್ತದೆ.

10.5. ಅಂತರಾಷ್ಟ್ರೀಕರಣ(ಇಂಟರ್ನ್ಯಾಶನಲೈಸೇಶನ್)

10.5.1. IBus

Red Hat Enterprise Linux 6 ಇಂಟೆಲಿಜೆಂಟ್ ಇನ್‌ಪುಟ್ ಬಸ್ (IBus) ಅನ್ನು ಏಶಿಯಾದ ಭಾಷೆಗಳಿಗಾಗಿ ಪೂರ್ವನಿಯೋಜಿತವಾದ ಇನ್‌ಪುಟ್ ವಿಧಾನ ಫ್ರೇಮ್‌ವರ್ಕ್ ಆಗಿ ಪರಿಚಯಿಸಲಾಗುತ್ತದೆ.

10.5.2. ಇನ್‌ಪುಟ್ ವಿಧಾನಗಳನ್ನು ಆಯ್ಕೆ ಮಾಡುವಿಕೆ ಹಾಗು ಸಂರಚಿಸುವಿಕೆ

Red Hat Enterprise Linux 6, ಇನ್‌ಪುಟ್‌ ವಿಧಾನಗಳನ್ನು ಶಕ್ತಗೊಳಿಸುವ ಹಾಗು ಸಂರಚಿಸುವ ಚಿತ್ರಾತ್ಮಕ ಬಳಕೆದಾರ ಸಂಪರ್ಕಸಾಧನವಾದಂತಹ im-chooser ಅನ್ನು ಹೊಂದಿದೆ. im-chooser (ಮುಖ್ಯ ಮೆನುವಿನಲ್ಲಿರುವ ವ್ಯವಸ್ಥೆ > ಆದ್ಯತೆಗಳು > ಇನ್‌ಪುಟ್‌ ವಿಧಾನದಲ್ಲಿರುವ) ಬಳಕೆದಾರರಿಗೆ ವ್ಯವಸ್ಥೆಯಲ್ಲಿ ಲಭ್ಯವಿರುವ ಇನ್‌ಪುಟ್ ವಿಧಾನಗಳನ್ನು ಸುಲಭವಾಗಿ ಶಕ್ತಗೊಳಿಸಲು ಹಾಗು ಸಂರಚಿಸಲು ಅನುವು ಮಾಡಿಕೊಡುತ್ತದೆ.

10.5.3. ಇಂಡಿಕ್ ಆನ್‌ಸ್ಕ್ರೀನ್ ಕೀಬೋರ್ಡ್

ಹೊಸ ಇಂಡಿಕ್ ಆನ್‌ಸ್ಕ್ರೀನ್ ಕೀಬೋರ್ಡ್ (iok) ಎನ್ನುವುದು ತೆರೆ ಆಧರಿತವಾದ ವರ್ಚುವಲ್ ಕೀಲಿಮಣೆಯಾಗಿದ್ದು, ಇದರಲ್ಲಿ ಇನ್‌ಸ್ಕ್ರಿಪ್ಟ್ ಕೀಲಿನಕ್ಷೆ ವಿನ್ಯಾಸಗಳು ಹಾಗು ಇತರೆ 1:1 ಕೀಲಿ ಮ್ಯಾಪಿಂಗ್‌ಗಳನ್ನು ಶಕ್ತಗೊಳಿಸಬಹುದಾಗಿರುತ್ತದೆ.

10.5.4. ಇಂಡಿಕ್ ಕೊಲೇಶನ್ ಬೆಂಬಲ್

Red Hat Enterprise Linux 6 ರಲ್ಲಿ ಭಾರತೀಯ ಭಾಷೆಗಳಿಗಾಗಿ ಸುಧಾರಿತ ವಿಂಗಡಣಾ ಕ್ರಮವನ್ನು ಸೇರ್ಪಡಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ಮೆನುಗಳು ಹಾಗು ಇತರೆ ಸಂಪರ್ಕಸಾಧನ ಘಟಕಗಳು ಈಗ ಸರಿಯಾದ ಕ್ರಮದಲ್ಲಿ ವಿಂಗಡಿಸಲಾಗುತ್ತದೆ.

10.5.5. ಅಕ್ಷರಶೈಲಿಗಳು

Red Hat Enterprise Linux 6 ರಲ್ಲಿ ಅಕ್ಷರಶೈಲಿಯ ಬೆಂಬಲವನ್ನು ಸುಧಾರಿಸಲಾಗಿದ್ದು, ಚೈನೀಸ್, ಜಾಪನೀಸ್, ಕೊರಿಯನ್, ಇಂಡಿಕ್ ಹಾಗು ತಾಯ್ ಭಾಷೆಗಳಿಗಾಗಿನ ಅಕ್ಷರಶೈಲಿಗಳಿಗಾಗಿನ ಅಪ್‌ಡೇಟ್‌ಗಳನ್ನು ಹೊಂದಿದೆ.

10.6. ಅನ್ವಯಗಳು

Red Hat Enterprise Linux 6 ಗಣಕತೆರೆಯ ಹೆಚ್ಚಿನ ಅನ್ವಯಗಳನ್ನು ಅಪ್‌ಡೇಟ್ ಮಾಡಲಾಗಿದೆ. ಅಂತಹುಗಳಲ್ಲಿನ ಗಮನಾರ್ಹ ಅಪ್‌ಡೇಟ್‌ಗಳನ್ನು ದಸ್ತಾವೇಜಿನ ಈ ಕೆಳಗಿನ ವಿಭಾಗದಲ್ಲಿ ನೀಡಲಾಗಿದೆ.

10.6.1. ಫೈರ್ಫಾಕ್ಸ್

Red Hat Enterprise Linux 6 ರಲ್ಲಿ ಮೋಜಿಲ್ಲಾ ಫೈರ್ಫಾಕ್ಸ್ ಜಾಲ ವೀಕ್ಷಕದ ಆವೃತ್ತಿ 3.5 ನ್ನು ಪರಿಚಯಿಸಲಾಗುತ್ತದೆ.
ಫೈರ್ಫಾಕ್ಸಿನಲ್ಲಿನ ಹೊಸ ಸವಲತ್ತುಗಳ ಬಗೆಗಿನ ವಿವರಗಳಿಗಾಗಿ, Firefox Release Notes ಅನ್ನು ನೋಡಿ

10.6.2. ತಂಡರ್ಬರ್ಡ್ 3

Red Hat Enterprise Linux 6 ರಲ್ಲಿ ಮೋಜಿಲ್ಲಾ ತಂಡರ್ಬರ್ಡ್ ಇಮೈಲ್ ಕ್ಲೈಂಟ್ ಆವೃತ್ತಿ 3 ನ್ನು ಒಳಗೊಳ್ಳಿಸಲಾಗಿದ್ದು, ಟ್ಯಾಬ್ಡ್ ಮೆಸೆಜಿಂಗ್, ಸ್ಮಾರ್ಟ್ ಫೋಲ್ಡರುಗಳು, ಹಾಗು ಒಂದು ಮೆಸೇಜಿಂಗ್ ಆರ್ಕೈವ್‌ ಮುಂತಾದ ಸವಲತ್ತುಗಳನ್ನು ಒದಗಿಸುತ್ತದೆ. ತಂಡರ್ಬರ್ಡ್ 3 ರಲ್ಲಿನ ಇನ್ನಿತರೆ ಹೊಸ ಸವಲತ್ತುಗಳಿಗಾಗಿನ ಹೆಚ್ಚಿನ ಮಾಹಿತಿಗಾಗಿ, Thunderbird Release Notes ಅನ್ನು ನೋಡಿ

10.6.3. OpenOffice.org 3.1

Red Hat Enterprise Linux 6 ರಲ್ಲಿ OpenOffice.org 3.1 ಸೇರಿಸಲಾಗಿದ್ದು, ಇದು Microsoft Office OOXML ವಿನ್ಯಾಸವೂ ಸೇರಿದಂತೆ ಹಲವಾರು ಬಗೆಯ ಕಡತ ವಿನ್ಯಾಸಗಳನ್ನು ಓದಲು ಬೆಂಬಲವನ್ನು ಒದಗಿಸುತ್ತದೆ. ಅಷ್ಟೆ ಅಲ್ಲದೆ, OpenOffice.org ಕಡತ ಲಾಕಿಂಗ್ ಬೆಂಬಲವನ್ನು ಸುಧಾರಿಸಿದೆ ಹಾಗು ಆಂಟಿ-ಅಲಿಯಾಸಿಂಗ್ ಅನ್ನು ಬಳಸಿಕೊಂಡು ಗ್ರಾಫಿಕ್ಸ್ ಅನ್ನು ರೆಂಡರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
OpenOffice.org 3.1
ಚಿತ್ರ 10. OpenOffice.org 3.1

OpenOffice.org ನ ಈ ಆವೃತ್ತಿಯಲ್ಲಿನ ಎಲ್ಲಾ ಸವಲತ್ತುಗಳ ಸಂಪೂರ್ಣ ವಿವರಗಳು OpenOffice.org Release Notes ನಲ್ಲಿ ಲಭ್ಯವಿರುತ್ತದೆ.

10.7. NetworkManager

NetworkManager ಎನ್ನುವುದು ಹಲವು ಬಗೆಯ ಜಾಲಬಂಧ ಸಂಪರ್ಕಗಳನ್ನು ಸಿದ್ಧಗೊಳಿಸುವ, ಸಂರಚಿಸುವ ಹಾಗು ನಿರ್ವಹಿಸಲು ಬಳಸಬಹುದಾದ ಒಂದು ಗಣಕತೆರೆ ಉಪಕರಣವಾಗಿರುತ್ತದೆ.
NetworkManager
ಚಿತ್ರ 11. NetworkManager

Red Hat Enterprise Linux 6 ರಲ್ಲಿರುವ, NetworkManager ನಲ್ಲಿ ಮೊಬೈಲ್ ಬ್ರಾಡ್‌ಬ್ಯಾಂಡ್ ಸಾಧನಗಳಿಗಾಗಿ, IPv6 ಹಾಗು ಬ್ಲೂಟೂತ್ ಪರ್ಸನಲ್ ಏರಿಯಾ ನೆಟ್‌ವರ್ಕ್ (PAN) ಸಾಧನಗಳಿಗೆ ಹೆಚ್ಚುವರಿ ಬೆಂಬಲವನ್ನು ಸೇರಿಸಲಾಗಿದೆ.

10.8. ಕೆಡಿಇ 4.3

Red Hat Enterprise Linux 6 ರಲ್ಲಿ KDE 4.3 ಅನ್ನು ಒಂದು ಪರ್ಯಾಯ ಗಣಕತೆರೆ ಪರಿಸರವಾಗಿ ಒದಗಿಸಲಾಗಿದೆ.
KDE 4.3 ಯು ಸಂಪೂರ್ಣವಾಗಿ ವಿಭಿನ್ನವಾದಂತಹ ಬಳಕೆದಾರ ಅನುಭವವನ್ನು ಒದಗಿಸುತ್ತದೆ, ಅವುಗಳಲ್ಲಿ ಪ್ರಮುಖವಾದವೆಂದರೆ:
  • ನಿಮ್ಮ ಇಚ್ಛೆಗೆ ತಕ್ಕಂತೆ ಗಣಕತೆರೆಯನ್ನು ಬದಲಾಯಿಸಬಹುದಾದ ಪ್ಲಾಸ್ಮಾ ವಿಜೆಟ್‌ಗಳನ್ನು ಹೊಂದಿರುವ, ಹೊಸತಾದ ಪ್ಲಾಸ್ಮಾ ಗಣಕತೆರೆ ಕಾರ್ಯಕ್ಷೇತ್ರ,.
  • ಇನ್ನಷ್ಟು ಉತ್ತಮಗೊಂಡ ಚಿಹ್ನೆ ಹಾಗು ಧ್ವನಿ ಪರಿಸರವಿನ್ಯಾಸಗಳನ್ನು ಹೊಂದಿರುವ ಆಕ್ಸಿಜನ್
  • KDE ವಿಂಡೊ ಮ್ಯಾನೇಜರಿನಲ್ಲಿ (kwin) ಉತ್ತಮ ಸುಧಾರಣೆಗಳು
ಜೊತೆಗೆ, konqueror ಜಾಗದಲ್ಲಿ dolphin ಪೂರ್ವನಿಯೋಜಿತವಾದ KDE ಕಡತ ವೀಕ್ಷಕವಾಗಿ ಬದಲಾಯಿಸಲ್ಪಟ್ಟಿದೆ.

11. ದಸ್ತಾವೇಜೀಕರಣ

Red Hat Enterprise Linux 6 ಕ್ಕಾಗಿ ದಸ್ತಾವೇಜು 18 ಪ್ರತ್ಯೇಕ ದಸ್ತಾವೇಜುಗಳನ್ನು ಹೊಂದಿದೆ. ಪ್ರತಿಯೊಂದು ದಸ್ತಾವೇಜುಗಳೂ ಈ ಕೆಳಗಿನ ತಿಳಿಸಲಾದ ಒಂದು ಅಥವ ಹೆಚ್ಚಿನ ವಿಷಯಗಳ ಸಂಬಂಧಪಟ್ಟಿದ್ದಾಗಿರುತ್ತದೆ:
  • ಬಿಡುಗಡೆ ದಸ್ತಾವೇಜು
  • ಅನುಸ್ಥಾಪನೆ ಹಾಗು ನಿಯೋಜನೆ
  • ಸುರಕ್ಷತೆ
  • ಉಪಕರಣಗಳು ಹಾಗು ಕಾರ್ಯಕ್ಷಮತೆ
  • ಕ್ಲಸ್ಟರಿಂಗ್
  • ವರ್ಚುವಲೈಸೇಶನ್

11.1. ಬಿಡುಗಡೆ ದಸ್ತಾವೇಜು

ಬಿಡುಗಡೆ ಟಿಪ್ಪಣಿಗಳು
ಬಿಡುಗಡೆ ಟಿಪ್ಪಣಿಗಳು ದಸ್ತಾವೇಜಿನಲ್ಲಿ Red Hat Enterprise Linux 6ರ ಬಿಡುಗಡೆಯಲ್ಲಿ ಸೇರ್ಪಡಿಸಲಾದಂತಹ ಪ್ರಮುಖ ಸವಲತ್ತುಗಳು ಹಾಗು ವರ್ಧನೆಗಳನ್ನು ಹೊಂದಿರುತ್ತದೆ.
ತಾಂತ್ರಿಕ ಟಿಪ್ಪಣಿಗಳು
Red Hat Enterprise Linux ತಾಂತ್ರಿಕ ಟಿಪ್ಪಣಿಗಳು ದಸ್ತಾವೇಜಿನಲ್ಲಿ ತಂತ್ರಜ್ಞಾನ ಮುನ್ನೋಟಗಳು, ಪ್ಯಾಕೇಜ್ ಬದಲಾವಣೆ ವಿವರಗಳು ಹಾಗು ಗೊತ್ತಿರುವ ಸಮಸ್ಯೆಗಳು ಮುಂತಾದ ಈ ಬಿಡುಗಡೆಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಇರುತ್ತದೆ.
ವರ್ಗಾವಣೆ ಮಾರ್ಗದರ್ಶಿ
Red Hat Enterprise Linux ವರ್ಗಾವಣೆ ಮಾರ್ಗದರ್ಶಿ ದಸ್ತಾವೇಜು Red Hat Enterprise Linux 5 ರಿಂದ Red Hat Enterprise Linux 6 ಕ್ಕೆ ವರ್ಗಾಯಿಸುವುದರ ಕುರಿತಾದ ಮಾಹಿತಿಯನ್ನು ಹೊಂದಿರುತ್ತದೆ.

11.2. ಅನುಸ್ಥಾಪನೆ ಹಾಗು ನಿಯೋಜನೆ

ಅನುಸ್ಥಾಪನಾ ಮಾರ್ಗದರ್ಶಿ
ಅನುಸ್ಥಾಪನಾ ಮಾರ್ಗದರ್ಶಿ ದಸ್ತಾವೇಜುಗಳು Red Hat Enterprise Linux 6 ರ ಅನುಸ್ಥಾಪನೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ
ನಿಯೋಜನಾ ಮಾರ್ಗದರ್ಶಿ
ನಿಯೋಜನಾ ಮಾರ್ಗದರ್ಶಿ ದಸ್ತಾವೇಜು Red Hat Enterprise Linux 6 ಅನ್ನು ನಿಯೋಜಿಸುವ, ಸಂರಚಿಸುವ ಹಾಗು ನಿರ್ವಹಿಸುವ ಬಗೆಗಿನ ಸೂಕ್ತವಾದ ಮಾಹಿತಿಯನ್ನು ಹೊಂದಿದೆ.
ಶೇಖರಣೆ ನಿರ್ವಹಣಾ ಮಾರ್ಗದರ್ಶಿ
ಶೇಖರಣೆ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 6 ರಲ್ಲಿ ಶೇಖರಣಾ ಸಾಧನಗಳನ್ನು ಹಾಗು ಕಡತ ವ್ಯವಸ್ಥೆಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂಬುದರ ಕುರಿತಾದ ಸೂಚನೆಗಳನ್ನು ಒದಗಿಸುತ್ತದೆ. Red Hat Enterprise Linux ಅಥವ ಲಿನಕ್ಸಿನ Fedora ವಿತರಣೆಗಳೊಂದಿಗೆ ಒಂದಿಷ್ಟು ಅನುಭವ ಇರುವ ಗಣಕ ವ್ಯವಸ್ಥಾಪಕರ ಬಳಕೆಗಾಗಿ ಉದ್ಧೇಶಿಸಲಾಗಿದೆ.
ಗ್ಲೋಬಲ್ ಫೈಲ್ ಸಿಸ್ಟಮ್ 2
ಗ್ಲೋಬಲ್ ಫೈಲ್ ಸಿಸ್ಟಮ್ 2 ಪುಸ್ತಕವು Red Hat Enterprise Linux 6 ರಲ್ಲಿರುವ Red Hat GFS2 (Red Hat ಗ್ಲೋಬಲ್ ಫೈಲ್ ಸಿಸ್ಟಮ್ 2) ಅನ್ನು ಸಂರಚಿಸುವ ಹಾಗು ಮೇಲ್ವಿಚಾರಣೆ ನಡೆಸುವ ಮಾಹಿತಿಯನ್ನು ಹೊಂದಿದೆ.
ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ನಿರ್ವಹಣೆ
ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ನಿರ್ವಹಣೆ ಪುಸ್ತಕವು LVM ತಾರ್ಕಿಕ ಪರಿಮಾಣ ವ್ಯವಸ್ಥಾಪಕವನ್ನು ವಿವರಿಸುತ್ತದೆ, ಇದರಲ್ಲಿ ಒಂದು ಕ್ಲಸ್ಟರ್ ಮಾಡಲಾದ ಪರಿಸರದಲ್ಲಿ LVM ಅನ್ನು ಚಲಾಯಿಸುವ ಮಾಹಿತಿಯನ್ನೂ ಸಹ ಹೊಂದಿದೆ.

11.3. ಸುರಕ್ಷತೆ

ಸುರಕ್ಷತೆಯ ಮಾರ್ಗದರ್ಶಿ
ಸುರಕ್ಷತೆ ಮಾರ್ಗದರ್ಶಿಯನ್ನು ಸ್ಥಳೀಯ ಹಾಗು ದೂರಸ್ಥ ಒಳನುಸುಳುವಿಕೆ, ದುರ್ಬಳಕೆ ಹಾಗು ದುರ್ನಡತೆಯ ವಿರುದ್ಧ ಕಾರ್ಯಸ್ಥಳಗಳು ಹಾಗು ಪರಿಚಾರಕಗಳನ್ನು ಸುರಕ್ಷಿತಗೊಳಿಸುವ ಪ್ರಕ್ರಿಯೆಗಳು ಹಾಗು ಪದ್ಧತಿಗಳನ್ನು ಬಳಕೆದಾರರು ಹಾಗು ವ್ಯವಸ್ಥಾಪಕರು ತಿಳಿದುಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ.
SELinux ಬಳಕೆದಾರ ಮಾರ್ಗದರ್ಶಿ
SELinux ಬಳಕೆದಾರ ಮಾರ್ಗದರ್ಶಿಯು ಫ್ರೇಮ್‌ವರ್ಕಿನೊಂದಿಗೆ ಕನಿಷ್ಟ ಅಥವ ಕೊಂಚವೂ ಮಾಹಿತಿ ತಿಳಿದಿಲ್ಲದವರಿಗೆ ಸೆಕ್ಯುರಿಟಿ-ಎನ್‌ಹ್ಯಾನ್ಸಡ್ ಲಿನಕ್ಸಿನ ನಿರ್ವಹಣೆ ಹಾಗು ಬಳಕೆಯ ಬಗೆಗಿನ ಮಾಹಿತಿಯನ್ನು ಹೊಂದಿರುತ್ತದೆ. ಇದು SELinux ಗೆ ಪರಿಚಯವನ್ನು ಒದಗಿಸುತ್ತದೆ ಹಾಗು ಬಳಸುವಾಗಿನ ನಿಯಮಗಳು ಹಾಗು ಪರಿಕಲ್ಪನೆಯನ್ನು ವಿವರಿಸುತ್ತದೆ.
ಮಿತಿಗೊಳಿಸಲಾದ ಸೇವೆಗಳ ನಿರ್ವಹಣೆ
ಮಿತಿಗೊಳಿಸಲಾದ ಸೇವೆಗಳ ನಿರ್ವಹಣೆ ಮಾರ್ಗದರ್ಶಿಯನ್ನು ಮುಂದುವರೆದ ಬಳಕೆದಾರರು ಹಾಗು ವ್ಯವಸ್ಥಾಪಕರು Security-Enhanced Linux (SELinux) ಅನ್ನು ಬಳಸುವಾಗ ನೆರವಾಗುವಂತೆ ವಿನ್ಯಸಿಸಲಾಗಿದೆ. ಅದನ್ನು Red Hat Enterprise Linux ನ ಮೇಲೆ ಕೇಂದ್ರೀಕರಿಸಲಾಗಿದೆ ಹಾಗು SELinux ಅನ್ನು ಒಬ್ಬ ಮುಂದುವರೆದ ಬಳಕೆದಾರ ಅಥವ ವ್ಯವಸ್ಥಾಪಕರು ಹೇಗೆ ಸಂರಚಿಸಬಹುದು ಎನ್ನುವುದನ್ನು ವಿವರಿಸುತ್ತದೆ. ಅಷ್ಟೆ ಅಲ್ಲದೆ ಈ ಸೇವೆಗಳನ್ನು ದೈನಂದಿನ ಬಳಕೆಯಲ್ಲಿನ ಉಪಯೋಗಿಸಲಾದ ಉದಾಹರಣೆಗಳು ಹಾಗು SELinux ಹೇಗೆ ಅವರ ಈ ಕೆಲಸಗಳಿಗೆ ಮನ್ನಣೆ ನೀಡುತ್ತದೆ ಎನ್ನುವುದನ್ನೂ ಸಹ ಒದಗಿಸಲಾಗಿದೆ.

11.4. ಉಪಕರಣಗಳು ಹಾಗು ಕಾರ್ಯಕ್ಷಮತೆ

ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿ
ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿ ದಸ್ತಾವೇಜು Red Hat Enterprise Linux 6 ರಲ್ಲಿನ ವ್ಯವಸ್ಥಾ ಸಂಪನ್ಮೂಲಗಳನ್ನು ನಿರ್ವಹಿಸುವ ತಂತ್ರಗಳನ್ನು ವಿವರಿಸುತ್ತದೆ.
ವಿದ್ಯುಚ್ಚಕ್ತಿಯ ನಿರ್ವಹಣಾ ಮಾರ್ಗದರ್ಶಿ
ವಿದ್ಯುಚ್ಚಕ್ತಿಯ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 6 ವ್ಯವಸ್ಥೆಗಳಲ್ಲಿ ವಿದ್ಯುಚ್ಚಕ್ತಿ ಬಳಕೆಯನ್ನು ನಿರ್ವಹಿಸುವುದು ಹೇಗೆ ಎನ್ನುವುದನ್ನು ವಿವರಿಸುತ್ತದೆ. ಈ ದಸ್ತಾವೇಜು ವಿದ್ಯುಚ್ಛಕ್ತಿಯ ಬಳಕೆಯನ್ನು (ಪರಿಚಾರಕ ಹಾಗು ಲ್ಯಾಪ್‌ಟಾಪ್ ಎರಡರಲ್ಲೂ) ಕಡಿಮೆ ಮಾಡುವ ಬಗೆಗಿನ ವಿವಿಧ ತಂತ್ರಗಳು, ಹಾಗು ಪ್ರತಿಯೊಂದು ತಂತ್ರಗಳೂ ಹೇಗೆ ಒಂದು ವ್ಯವಸ್ಥೆಯ ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ವಿವರಿಸುತ್ತದೆ.
ವಿಕಸನೆಗಾರರ ಮಾರ್ಗದರ್ಶಿ
ವಿಕಸನೆಗಾರರ ಮಾರ್ಗದರ್ಶಿಯು Red Hat Enterprise Linux 6 ರಲ್ಲಿನ ಸವಲತ್ತುಗಳು ಹಾಗು ಉಪಕರಣಗಳು ಅದನ್ನು ಅನ್ವಯ ವಿಕಸನೆಗೆ ಯೋಗ್ಯವಾದ ಎಂಟರ್ಪ್ರೈಸ್ ಪ್ಲಾಟ್‌ಫಾರ್ಮ್ ಆಗಿಸುತ್ತದೆ ಎನ್ನುವುದನ್ನು ವಿವರಿಸುತ್ತದೆ.
SystemTap ಆರಂಭಿಕರಿಗಾಗಿನ ಮಾರ್ಗದರ್ಶಿ
SystemTap ಆರಂಭಿಕರಿಗಾಗಿನ ಮಾರ್ಗದರ್ಶಿಯು Red Hat Enterprise Linux ನ ವಿವಿಧ ಉಪವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಲು SystemTap ಅನ್ನು ಹೇಗೆ ಬಳಸಬಹುದು ಎನ್ನುವುದರ ಕುರಿತಾದ ಮೂಲಭೂತ ಸೂಚನೆಗಳನ್ನು ಸೂಕ್ಷ್ಮವಾದ ವಿವರಗಳ ಸಹಿತ ಒದಗಿಸುತ್ತದೆ.
SystemTap ಟ್ಯಾಪ್‌ಸೆಟ್‌ ಉಲ್ಲೇಖ
SystemTap ಟ್ಯಾಪ್‌ಸೆಟ್‌ ಉಲ್ಲೇಖ ಮಾರ್ಗದರ್ಶಿಯು SystemTap ಸ್ಕ್ರಿಪ್ಟುಗಳಿಗೆ ಬಳಕೆದಾರರು ಅನ್ವಯಿಸಬಹುದಾದ ಹೆಚ್ಚು ಪ್ರಚಲಿತವಿರುವ ಟ್ಯಾಪ್‌ಸೆಟ್ ವಿವರಣೆಗಳನ್ನು ವಿವರಿಸುತ್ತದೆ.

11.5. ಅತಿ ಲಭ್ಯತೆ

ಕ್ಲಸ್ಟರ್ ಸೂಟ್ ಅವಲೋಕನ
ಕ್ಲಸ್ಟರ್ ಸೂಟ್ ಅವಲೋಕನ ದಸ್ತಾವೇಜು Red Hat Enterprise Linux 6 ಕ್ಕಾಗಿ ಅತಿ ಲಭ್ಯತೆಯ ಒಂದು ಅವಲೋಕವನ್ನು ಒದಗಿಸುತ್ತದೆ.
ಅತಿ ಲಭ್ಯತೆಯ ನಿರ್ವಹಣೆ
The ಅತಿ ಲಭ್ಯತೆಯ ನಿರ್ವಹಣೆದಸ್ತಾವೇಜಿಲ್ಲಿ Red Hat Enterprise Linux 6 ಕ್ಕಾಗಿನ Red Hat ಅತಿ ಲಭ್ಯತೆ ವ್ಯವಸ್ಥೆಗಳ ಸಂರಚನೆ ಹಾಗು ನಿರ್ವಹಣೆಯನ್ನು ವಿವರಿಸಲಾಗಿದೆ.
ವರ್ಚುವಲ್ ಸರ್ವರ್ ನಿರ್ವಹಣೆ
Virtual Server Administration ಪುಸ್ತಕವು Red Hat Enterprise Linux 6 ಹಾಗು Linux Virtual Server (LVS) ವ್ಯವಸ್ಥೆಗಳೊಂದಿಗೆ ಉತ್ತಮ-ಕಾರ್ಯನಿರ್ವಹಣೆಯ ವ್ಯವಸ್ಥೆಗಳು ಹಾಗು ಸೇವೆಗಳ ಸಂರಚನೆಯನ್ನು ಚರ್ಚಿಸುತ್ತದೆ.
DM ಮಲ್ಟಿಪಾತ್
DM Multipath ಪುಸ್ತಕವು Red Hat Enterprise Linux 6 ರಲ್ಲಿ ಡಿವೈಸ್-ಮ್ಯಾಪರ್ ಮಲ್ಟಿಪಾತ್ ಸವಲತ್ತನ್ನು ಬಳಸುವ ಬಗೆಗಿನ ಮಾಹಿತಿಯನ್ನು ಒದಗಿಸುತ್ತದೆ.

11.6. ವರ್ಚುವಲೈಸೇಶನ್

ವರ್ಚುವಲೈಸೇಶನ್ ಮಾರ್ಗದರ್ಶಿ
ವರ್ಚುವಲೈಶೇನ್ ಮಾರ್ಗದರ್ಶಿಯಲ್ಲಿ Red Hat Enterprise Linux 6 ರಲ್ಲಿ ವರ್ಚುವಲೈಶೇನ್ ತಂತ್ರಜ್ಞಾನಗಳನ್ನು ಅನುಸ್ಥಾಪಿಸುವ, ಸಂರಚಿಸುವ ಹಾಗು ನಿರ್ವಹಿಸುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ.

12. ಕರ್ನಲ್

12.1. ಸಂಪನ್ಮೂಲ ನಿಯಂತ್ರಣ

12.1.1. ನಿಯಂತ್ರಣ ಗುಂಪುಗಳು(ಕಂಟ್ರೋಲ್ ಗ್ರೂಪ್ಸ್)

ನಿಯಂತ್ರಣ ಗುಂಪುಗಳು ಎನ್ನುವುದು Red Hat Enterprise Linux 6 ರಲ್ಲಿರುವ ಲಿನಕ್ಸ್ ಕರ್ನಲ್‌ನ ಒಂದು ಹೊಸ ಸವಲತ್ತು ಆಗಿರುತ್ತದೆ. ಪ್ರತಿಯೊಂದು ನಿಯಂತ್ರಣ ಗುಂಪು ಎನ್ನುವುದು ವ್ಯವಸ್ಥೆಯ ಯಂತ್ರಾಂಶದೊಂದಿಗಿನ ಸಂವಹನವನ್ನು ಉತ್ತಮಗೊಳಿಸುವ ಉದ್ಧೇಶದಿಂದ ಗುಂಪುಗೂಡಿಸಲಾದ ಕಾರ್ಯಗಳ ಸೆಟ್‌ ಆಗಿರುತ್ತದೆ. ನಿಯಂತ್ರಣ ಗುಂಪುಗಳನ್ನು ಅವು ಬಳಸುವ ಸಂಪನ್ಮೂಲಗಳ ಮೇಲ್ವಿಚಾರಣೆ ನಡೆಸಲು ನಿಯೋಜಿಸಬಹುದಾಗಿರುತ್ತದೆ. ಜೊತೆಗೆ, ವ್ಯವಸ್ಥೆಯ ನಿರ್ವಾಹಕರು ನಿಯಂತ್ರಣ ಗುಂಪು ಸೌಕರ್ಯವನ್ನು ಬಳಸಿಕೊಂಡು ಮೆಮೊರಿ, CPUಗಳು (ಅಥವ CPUಗಳ ಗುಂಪು), ಜಾಲಬಂಧ, I/O, ಅಥವ ಅನುಸೂಚಕದಂತಹ ವ್ಯವಸ್ಥೆಯ ಸಂಪನ್ಮೂಲಗಳನ್ನು ನಿಯಂತ್ರಣ ಗುಂಪುಗಳು ನಿಲುಕಿಸಿಕೊಳ್ಳುವುದನ್ನು ಅನುಮತಿಸಬಹುದಾಗಿರುತ್ತದೆ ಅಥವ ನಿರಾಕರಿಸಬಹುದಾಗಿರುತ್ತದೆ. ಬಳಕೆದಾರ ಸ್ಥಳದಲ್ಲಿ ನಿಯಂತ್ರಣ ಗುಂಪುಗಳನ್ನು ನಿರ್ವಹಿಸುವುದನ್ನು libcgroup ಇಂದ ಒದಗಿಸಲಾಗುತ್ತದೆ, ಇದರಿಂದಾಗಿ ವ್ಯವಸ್ಥೆಯ ನಿರ್ವಾಹಕರು ಹೊಸ ನಿಯಂತ್ರಣ ಗುಂಪುಗಳನ್ನು ರಚಿಸಲು, ಒಂದು ನಿಶ್ಚಿತ ನಿಯಂತ್ರಣ ಗುಂಪಿನಲ್ಲಿ ಹೊಸ ಪ್ರಕ್ರಿಯೆಗಳನ್ನು ಆರಂಭಿಸಲು ಹಾಗು ನಿಯಂತ್ರಣ ಗುಂಪಿನ ನಿಯತಾಂಕಗಳನ್ನು ಹೊಂದಿಸಲು ಸಾಧ್ಯವಿರುತ್ತದೆ.

ಸೂಚನೆ

Red Hat Enterprise Linux 6 ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿದಲ್ಲಿ ನಿಯಂತ್ರಣ ಗುಂಪುಗಳು ಹಾಗು ಇತರೆ ಸಂಪನ್ಮೂಲ ನಿರ್ವಹಣೆಯ ಸವಲತ್ತುಗಳನ್ನು ವಿವರವಾಗಿ ಚರ್ಚಿಸಲಾಗಿದೆ

12.2. ಗಾತ್ರ ಬದಲಾವಣೆಯ ಸಾಮರ್ಥ್ಯ

12.2.1. ಕಂಪ್ಲೀಟ್ಲಿ ಫೇರ್ ಶೆಡ್ಯೂಲರ್ (CFS)

ಒಂದು ಪ್ರಕ್ರಿಯೆ (ಅಥವ ಕಾರ್ಯ) ಅನುಸೂಚಿಯು ಒಂದು ಕರ್ನಲ್‌ಗೆ ನಿಶ್ಚಿತವಾಗಿರುತ್ತದೆ ಹಾಗು ಯಾವ ಕ್ರಮದಲ್ಲಿ ಪ್ರಕ್ರಿಯೆಗಳನ್ನು CPU ಗೆ ಕಳುಹಿಸಬೇಕು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಹೊರುತ್ತದೆ. Red Hat Enterprise Linux 6 ರಲ್ಲಿ ಅಡಕಗೊಳಿಸಲಾದ ಕರ್ನಲ್ (ಆವೃತ್ತಿ 2.6.32) O(1) ಅನುಸೂಚಿಯನ್ನು ಹೊಸ ಕಂಪ್ಲೀಟ್ಲಿ ಫೇರ್ ಶೆಡ್ಯೂಲರ್ (CFS) ನಿಂದ ಬದಲಾಯಿಸುತ್ತದೆ. fair queuing ಅನುಸೂಚಿ ಅಲ್ಗಾರಿತಮ್ ಅನ್ನು CFS ಅಳವಡಿಸುತ್ತದೆ.

12.2.2. ವರ್ಚುವಲ್ ಮೆಮೊರಿ ಪೇಜ್ಔಟ್ ಸ್ಕೇಲೆಬಿಲಿಟಿ

ಕರ್ನಲ್‌ನಿಂದ ಅನ್ವಯಿಸಲಾದ ವರ್ಚುವಲ್ ಮೆಮೊರಿಯು ಒಂದೆ ಒಂದು, ಮೆಮೊರಿ ವಿಳಾಸಗಳ ಸಮೀಪದಲ್ಲೆ ಇರುವ ಖಂಡವನ್ನು ಒದಗಿಸುತ್ತದೆ. ಈ ರೀತಿ ನೀಡಿಕೆಯ ಹಿನ್ನಲೆಯು ಕೊಂಚ ಸಂಕೀರ್ಣವಾಗಿದ್ದು, ನಿಜವಾದ ಭೌತಿಕ ವಿಳಾಸಗಳು ಸಾಮಾನ್ಯವಾಗಿ ವಿಭಜಿಸಲಾಗಿರುತ್ತದೆ ಹಾಗು ನಿಶ್ಚಿತ ಡಿಸ್ಕುಗಳಂತಹ ಹೆಚ್ಚು ನಿಧಾನದ ಸಾಧನಗಳಿಗೆ ಪೇಜ್ಡ್ ಔಟ್‌ ಮಾಡಲಾಗುತ್ತದೆ. ವರ್ಚುವಲ್ ಮೆಮೊರಿ ವಿಳಾಸಗಳನ್ನು ಕರ್ನಲ್‌ನಿಂದ ಪೇಜ್‌ಗಳು ಎಂದು ಕರೆಯಲಾಗುವ ಶಿಷ್ಟವಾದ ಘಟಕಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗಿರುತ್ತದೆ. Red Hat Enterprise Linux 6 ರಲ್ಲಿನ ಕರ್ನಲ್‌ನಲ್ಲಿ ಉತ್ತಮಗೊಳಿಸಲಾದ ಮೆಮೊರಿ ಪುಟಗಳನ್ನು ಹೊಂದಿದ್ದು, ಇದು ದೊಡ್ಡ ಮೊತ್ತದ ಭೌತಿಕ ಮೆಮೊರಿಯನ್ನು ಹೊಂದಿರುವ ವ್ಯವಸ್ಥೆಗಳಲ್ಲಿ ಸಂಸ್ಕರಿಸುವ ಲೋಡ್‌ ಅನ್ನು ಕಡಿಮೆ ಮಾಡುತ್ತದೆ.

12.3. ದೋಷ ವರದಿ ಮಾಡುವಿಕೆ

12.3.1. ಅಡ್ವಾನ್ಸಡ್ ಎರರ್ ರಿಪೋರ್ಟಿಂಗ್ (AER)

Red Hat Enterprise Linux 6 ರಲ್ಲಿನ ಕರ್ನಲ್‌ನಲ್ಲಿ ಅಡ್ವಾನ್ಸಡ್ ಎರರ್ ರಿಪೋರ್ಟಿಂಗ್ (AER) ಅನ್ನು ಸೇರಿಸಲಾಗಿದೆ. AER ಎನ್ನುವುದು PCI-Express ಸಾಧನಗಳಿಗಾಗಿ ಉತ್ತಮಗೊಂಡ ದೋಷ ವರದಿ ಮಾಡುವಿಕೆಯ ಸವಲತ್ತನ್ನು ಒದಗಿಸುತ್ತದೆ.

12.3.2. Kdump ಸ್ವಯಂಚಾಲಿತ ಶಕ್ತಗೊಳಿಕೆ

Kdump ಅನ್ನು ಈಗ ದೊಡ್ಡ ಗಾತ್ರದ ಮೆಮೊರಿಯನ್ನು ಹೊಂದಿರುವ ಗಣಕಗಳಲ್ಲಿ ಪೂರ್ವನಿಯೋಜಿತವಾಗಿ ಶಕ್ತಗೊಳಿಸಲಾಗಿರುತ್ತದೆ. ವಿಶೇಷವಾಗಿ, kdump ಅನ್ನು ಈ ಕೆಳಗಿನವುಗಳಲ್ಲಿ ಪೂರ್ವನಿಯೋಜಿತವಾಗಿ ಶಕ್ತಗೊಳಿಸಲಾಗಿರುತ್ತದೆ:
  • 4KB ಪೇಜ್ ಗಾತ್ರದೊಂದಿಗಿನ ಆರ್ಕಿಟೆಕ್ಚರುಗಳಲ್ಲಿ 4GB ಗೂ ಹೆಚ್ಚಿನ ಮೆಮೊರಿಯನ್ನು ಹೊಂದಿರುವ ವ್ಯವಸ್ಥೆಗಳಲ್ಲಿ (ಅಂದರೆ x86 ಅಥವ x86_64), ಅಥವ
  • 8KB ಪೇಜ್ ಗಾತ್ರದೊಂದಿಗಿನ ಆರ್ಕಿಟೆಕ್ಚರುಗಳಲ್ಲಿ 8GB ಗೂ ಹೆಚ್ಚಿನ ಮೆಮೊರಿಯನ್ನು ಹೊಂದಿರುವ ವ್ಯವಸ್ಥೆಗಳಲ್ಲಿ (ಅಂದರೆ PPC64).

12.4. ವಿದ್ಯುಚ್ಚಕ್ತಿಯ ನಿರ್ವಹಣೆ

12.4.1. ಅಗ್ರೆಸೀವ್ ಲಿಂಕ್ ಪವರ್ ಮ್ಯಾನೇಜ್‌ಮೆಂಟ್ (ALPM)

Red Hat Enterprise Linux 6 ರಲ್ಲಿನ ಕರ್ನಲ್ ಅಗ್ರೆಸೀವ್ ಲಿಂಕ್ ಪವರ್ ಮ್ಯಾನೇಜ್‌ಮೆಂಟ್ (ALPM) ಗೆ ಬೆಂಬಲವನ್ನು ಒದಗಿಸುತ್ತದೆ. ALPM ಎನ್ನುವುದು ವಿದ್ಯುಚ್ಛಕ್ತಿ-ಉಳಿಸುವ ತಂತ್ರವಾಗಿದ್ದು ಇದು ಜಡ ಸಮಯದಲ್ಲಿ ಡಿಸ್ಕಿಗೆ ಕಡಿಮೆ-ವಿದ್ಯುಚ್ಛಕ್ತಿ ಸಿದ್ಧತೆಗಾಗಿ ಒಂದು SATA ಸಂಪರ್ಕಕೊಂಡಿಯನ್ನು ಜೋಡಿಸುವ ಮೂಲಕ ವಿದ್ಯುಚ್ಛಕ್ತಿಯನ್ನು ಉಳಿಸುತ್ತದೆ (ಅಂದರೆ, ಯಾವುದೆ I/O ಇಲ್ಲದೆ ಇದ್ದಾಗ). I/O ಮನವಿಗಳು ಸರತಿಯಲ್ಲಿ ಕಂಡುಬಂದಾಗ ALPM ಸ್ವಯಂಚಾಲಿತವಾಗಿ SATA ಕೊಂಡಿಯನ್ನು ಮರಳಿ ಒಂದು ಸಕ್ರಿಯ ವಿದ್ಯುಚ್ಛಕ್ತಿ ಸ್ಥಿತಿಗೆ ಮರಳಿಸುತ್ತದೆ.

12.4.2. ಟಿಕ್‌ಲೆಸ್ ಕರ್ನಲ್

ಈ ಹಿಂದೆ, ಯಾವುದಾದರೂ ಕಾರ್ಯಗಳು ಸಂಸ್ಕರಿಸಲು ಬಾಕಿ ಇವೆಯೆ ಎಂದು ಕಾಲ ಕಾಲಕ್ಕೆ ಪರಿಶೀಲಿಸಲು ಕರ್ನಲ್ ಒಂದು ಟೈಮರ್ ಅನ್ನು ಅಳವಡಿಸುತ್ತಿತ್ತು. ಇದರಿಂದಾಗಿ CPU ವು ಸಕ್ರಿಯ ಸ್ಥಿತಿಯಲ್ಲಿ ಇರುತ್ತಿದ್ದು, ಇದಕ್ಕಾಗಿ ಅನಗತ್ಯವಾಗಿ ವಿದ್ಯುಚ್ಛಕ್ತಿ ವ್ಯಯವಾಗುತ್ತಿತ್ತು. Red Hat Enterprise Linux 6 ರಲ್ಲಿನ ಕರ್ನಲ್ ಹೊಸ ಟಿಕ್‌ಲೆಸ್ ಕರ್ನಲ್ ಸವಲತ್ತನ್ನು ಹೊಂದಿದ್ದು, ಇದು ಕಾಲ ಕಾಲಕ್ಕೆ ನಡೆಸಲಾಗುತ್ತಿದ್ದ ಟೈಮರ್ ತಡೆಯ ಬದಲಿಗೆ ಬೇಡಿಕೆ-ಮೇರೆಗೆ ತಡೆಗಳನ್ನು ನಡೆಸುತ್ತದೆ. ಟಿಕ್‌ಲೆಟ್‌ ಕರ್ನಲ್ ಒಂದು CPU ಜಡವಾಗಿದ್ದಾಗ ಹೆಚ್ಚು ಸಮಯ ನಿದ್ರಾ ಸ್ಥಿತಿಯಲ್ಲಿ ಇರಲು ಅನುವು ಮಾಡಿಕೊಡುತ್ತದೆ, ಯಾವುದಾದರೂ ಕಾರ್ಯವು ಸಂಸ್ಕರಣೆಗೊಳ್ಳಲು ಸರತಿಯಲ್ಲಿ ಬಂದಾಗ ಎಚ್ಚರಿಸುತ್ತದೆ.

12.5. ಕರ್ನಲ್ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಿಕೆ

12.5.1. ಪರ್ಫಾರ್ಮೆನ್ಸ್ ಕೌಂಟರ್ ಫಾರ್ ಲಿನಕ್ಸ್ (PCL)

ಲಿನಕ್ಸ್ ಪರ್ಫಾರ್ಮೆನ್ಸ್ ಕೌಂಟರ್ ಸೌಕರ್ಯವು, ಕಾರ್ಯಗತಗೊಳಿಸಲಾದ ಸೂಚನೆಗಳು, ತಪ್ಪಿ ಹೋದ ಕ್ಯಾಶೆ ಹಾಗು ತಪ್ಪಾಗಿ ಊಹಿಸಲಾದ ಕವಲುಗಳಂತಹ ಕೌಂಟರ್ ಯಂತ್ರಾಂಶ ಸಾಮರ್ಥ್ಯಗಳನ್ನು ಒದಗಿಸುತ್ತದೆ. PCL ಪ್ರತಿ ಕಾರ್ಯಗಳ ಹಾಗು ಪ್ರತಿ-CPU ಕೌಂಟರುಗಳನ್ನು ಒದಗಿಸುತ್ತದೆ, ಹಾಗು ಈ ಕೌಂಟರುಗಳ ಮೇಲೆ ಘಟನೆ ಸಾಮರ್ಥ್ಯಗಳನ್ನು ಸೇರಿಸುತ್ತದೆ. ಕಾರ್ಯಕ್ಷಮತೆ ಕೌಂಟರ್ ಮಾಹಿತಿಯನ್ನು ಕರ್ನಲ್ ಕ್ರಿಯೆಗಳನ್ನು ಹಾಗು ಘಟನೆಗಳನ್ನು ಪ್ರೊಫೈಲ್ ಮಾಡಲು ಹಾಗು ಕರ್ನಲ್ ಕಾರ್ಯಕ್ಷಮತೆ ಸಮಸ್ಯೆಗಳನ್ನು ವಿಶ್ಲೇಷಣೆಯಲ್ಲಿ ಬಳಸಬಹುದಾಗಿರುತ್ತದೆ.

12.5.2. Ftrace ಹಾಗು perf

Red Hat Enterprise Linux 6 ರಲ್ಲಿ ಲಭ್ಯವಿರುವ ಎರಡು ಹೊಸ ಉಪಕರಣಗಳು ಕರ್ನಲ್‌ನ ಕ್ಷಮತೆಯನ್ನು ವಿಶ್ಲೇಷಿಸುವಲ್ಲಿ ನೆರವನ್ನು ನೀಡುತ್ತವೆ. Ftrace ಕರ್ನಲ್‌ನ ಕಾಲ್ ಗ್ರಾಫ್ ಜಾಡನ್ನು ಇರಿಸುವಲ್ಲಿ ನೆರವಾಗುತ್ತದೆ. ಹೊಸ perf ಉಪಕರಣವು ಯಂತ್ರಾಂಶ ಘಟನೆಗಳನ್ನು ಮೇಲ್ವಿಚಾರಣೆ ನಡೆಸುತ್ತದೆ, ದಾಖಲಿಸುತ್ತದೆ ಹಾಗು ವಿಶ್ಲೇಷಿಸುತ್ತದೆ.

12.6. ಸಾಮಾನ್ಯ ಕರ್ನಲ್ ಅಪ್‌ಡೇಟ್‌ಗಳು

12.6.1. ಫಿಸಿಕಲ್ ಅಡ್ರೆಸ್‌ ಎಕ್ಸ್‌ಟೆನ್ಶನ್ (PAE)

Physical Address Extension (PAE) ಎನ್ನುವುದು x86 ಸಂಸ್ಕಾರಕಗಳಲ್ಲಿ ಅಳವಡಿಸಲಾದ ಒಂದು ಸವಲತ್ತು ಆಗಿದೆ. PAE ಯು ಮೆಮೊರಿ ಅಡ್ರೆಸಿಂಗ್ ಸಾಮರ್ಥ್ಯವನ್ನು ವಿಸ್ತರಿಸುತ್ತದೆ, ಇದರಿಂದಾಗಿ 4 ಗಿಗಾಬೈಟ್‌ಗಳಿಗೂ (GB) ಹೆಚ್ಚಿನ random access memory (RAM) ಅನ್ನು ಬಳಸಲು ಸಾಧ್ಯವಿರುತ್ತದೆ. Red Hat Enterprise Linux 6 ರ x86 ಆರ್ಕಿಟೆಕ್ಚರ್ ಆವೃತ್ತಿಯೊಂದಿಗೆ ನೀಡಲಾಗುವ ಕರ್ನಲ್‌ನಲ್ಲಿ ಪೂರ್ವನಿಯೋಜಿತವಾಗು PAE ಅನ್ನು ಶಕ್ತಗೊಳಿಸಲಾಗಿರುತ್ತದೆ. x86 variant of Red Hat Enterprise Linux 6 ರ ವೇರಿಯಂಟ್‌ಗೆ ಒಂದು PAE ಶಕ್ತಗೊಂಡ ಸಂಸ್ಕಾರಕವು ಕನಿಷ್ಟ ಅಗತ್ಯವಾಗಿರುತ್ತದೆ.

12.6.2. ಲೋಡ್‌ ಮಾಡಬಹುದಾದ ಫರ್ಮ್-ವೇರ್ ಕಡತಗಳು

ಸೂಕ್ತವಾದ ಪರವಾನಗಿಯನ್ನು ಹೊಂದಿರುವ ಆಕರ ಸಂಜ್ಞೆಯನ್ನು (ಸೋರ್ಸ್ ಕೋಡ್) ಹೊಂದಿರದೆ ಇರುವ ಫರ್ಮ್-ವೇರ್ ಕಡತಗಳನ್ನು Red Hat Enterprise Linux 6 ಕರ್ನಲ್‌ನಿಂದ ತೆಗೆದು ಹಾಕಲಾಗಿದೆ. ಲೋಡ್‌ ಮಾಡಬಹುದಾದ ಫರ್ಮ್-ವೇರಿನ ಅಗತ್ಯವಿರುವ ಮಾಡ್ಯೂಲ್‌ಗಳು ಈಗ ಕರ್ನಲ್ ಸಂಪರ್ಕಸಾಧನವನ್ನು ಫರ್ಮ್-ವೇರಿಗಾಗಿ ಬಳಕೆದಾರ ಸ್ಥಳದಿಂದ ಮನವಿ ಮಾಡುತ್ತವೆ.

13. ಕಂಪೈಲರ್ ಹಾಗು ಉಪಕರಣಗಳು

13.1. SystemTap

SystemTap ಎನ್ನುವುದು ಬಳಕೆದಾರರು ಕಾರ್ಯವ್ಯವಸ್ಥೆಯ (ವಿಶೇಷವಾಗಿ, ಕರ್ನಲ್) ಚಟುವಟಿಕೆಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸುವುದನ್ನು ಹಾಗು ಮೇಲ್ವಿಚಾರಣೆ ನಡೆಸುವುದನ್ನು ಅನುಮತಿಸುವ ಒಂದು ಜಾಡನ್ನು ಇರಿಸುವ ಹಾಗು ತನಿಖೆ ನಡೆಸುವ ಉಪಕರಣವಾಗಿದೆ. ಇದು netstat, ps, top, ಹಾಗು iostat ಗಳು ನೀಡುವ ರೀತಿಯಲ್ಲಿಯೆ ಔಟ್‌ಪುಟ್‌ಗಳನ್ನು ಒದಗಿಸುತ್ತದೆ; ಆದರೆ, SystemTap ಅನ್ನು ಸಂಗ್ರಹಿಸಲಾದ ಮಾಹಿತಿಯನ್ನು ಇನ್ನೂ ಹೆಚ್ಚಿನ ಫಿಲ್ಟರಿಂಗ್ ಹಾಗು ವಿಶ್ಲೇಷಣಾ ಆಯ್ಕೆಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
Red Hat Enterprise Linux 6 ರಲ್ಲಿ SystemTap ಆವೃತ್ತಿ 1.1 ಇರುತ್ತದೆ, ಇದು ಹಲವಾರು ಹೊಸ ಸವಲತ್ತುಗಳು ಹಾಗು ವರ್ಧನೆಗಳನ್ನು ಪರಿಚಯಿಸುತ್ತದೆ, ಅವುಗಳೆಂದರೆ:
  • ಬಳಕೆದಾರ-ಸ್ಥಳ(ಯೂಸರ್) ತನಿಖೆಗಾಗಿ ಸುಧಾರಿತ ಬೆಂಬಲ.
  • C++ ಪ್ರೊಗ್ರಾಮ್‌ಗಳನ್ನು ಸ್ಥಳೀಯ C++ ಸಿಂಟ್ಯಾಕ್ಸಿನೊಂದಿಗೆ ಬೆಂಬಲ.
  • ಹೆಚ್ಚು ಸುರಕ್ಷಿತವಾದ ಸ್ಕ್ರಿಪ್ಟ್-ಕಂಪೈಲ್ ಪರಿಚಾರಕ.
  • ಹೊಸ ಅಧಿಕಾರವಿಲ್ಲದ ಕ್ರಮದಲ್ಲಿ, ನಿರ್ವಾಹಕರಲ್ಲದ ಬಳಕೆದಾರರೂ ಸಹ SystemTap ಅನ್ನು ಬಳಸಬಹುದಾಗಿರುತ್ತದೆ.

ಮಹತ್ವ

ಸವಲತ್ತಿಲ್ಲ ಕ್ರಮವನ್ನು ಹೊಸದು ಹಾಗು ಪ್ರಾಯೋಗಿಕವಾಗಿದೆ. ಇದಕ್ಕೆ ಅಗತ್ಯವಿರುವ stap-server ಸೌಕರ್ಯದಲ್ಲಿನ ಸುರಕ್ಷತೆಯನ್ನು ಸುಧಾರಿಸುವದರ ಮೇಲೆ ಕೆಲಸವು ನಡೆಯತ್ತಿದೆ ಹಾಗು ಒಂದು ನಂಬಿಕಾರ್ಹವಾದ ಜಾಲಬಂಧದಲ್ಲಿ ಎಚ್ಚರಿಕೆಯಿಂದ ನಿಯೋಜಿಸಬೇಕಿರುತ್ತದೆ.

13.2. OProfile

OProfile ಎನ್ನುವುದು ಲಿನಕ್ಸ್ ವ್ಯವಸ್ಥೆಗಳಿಗಾಗಿನ ವ್ಯವಸ್ಥೆಯಾದ್ಯಂತದ ಪ್ರೊಫೈಲರ್ ಆಗಿರುತ್ತದೆ. ಪ್ರೊಫೈಲಿಂಗ್ ಹಿನ್ನಲೆಯಲ್ಲಿ ಪಾರದರ್ಶಕವಾಗಿ ಚಲಾಯಿಸಲ್ಪಡುತ್ತದೆ ಹಾಗು ಪ್ರೊಫೈಲ್ ದತ್ತಾಂಶವು ಯಾವುದೆ ಸಂದರ್ಭದಲ್ಲಿ ಸಂಗ್ರಹಿಸಬಹುದಾಗಿರುತ್ತದೆ.
Red Hat Enterprise Linux 6 ರಲ್ಲಿ OProfile ನ ಆವೃತ್ತಿ 0.9.5 ಅನ್ನು ಸೇರಿಸಲಾಗಿದೆ, ಇದು ಹೊಸ Intel ಹಾಗು AMD ಸಂಸ್ಕಾರಕಗಳಿಗೆ ಬೆಂಬಲವನ್ನು ಒದಗಿಸುತ್ತದೆ.

13.3. GNU ಕಂಪೈಲರ್ ಕಲೆಕ್ಷನ್ (GCC)

GNU ಕಂಪೈಲರ್ ಕಲೆಕ್ಷನ್ (GCC) ನಲ್ಲಿ ಬೇರೆಯವುಗಳೊಂದಿಗೆ, C, C++, ಹಾಗು Java GNU ಕಂಪೈಲರುಗಳು ಮತ್ತು ಸಂಬಂಧಿತವಾದ ಬೆಂಬಲ ಲೈಬ್ರರಿಗಳು ಇರುತ್ತವೆ. Red Hat Enterprise Linux 6 ರಲ್ಲಿ GCC ಯ ಆವೃತ್ತಿ 4.4 ಅನ್ನು ಹೊಂದಿರುತ್ತದೆ, ಇದು ಈ ಕೆಳಗಿನ ಸವಲತ್ತುಗಳನ್ನು ಹಾಗು ವರ್ಧನೆಗಳನ್ನು ಹೊಂದಿರುತ್ತದೆ:
  • Open Multi-Processing (OpenMP) ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (API) ಅನ್ನು ಆವೃತ್ತಿ 3.0 ಗೆ ಅನುರೂಪಗೊಳಿಸಲಾಗಿದೆ.
  • OpenMP ತ್ರೆಡ್‌ಗಳನ್ನು ಉಪಯೋಗಿಸಿಕೊಳ್ಳುವ ಹೆಚ್ಚುವರಿ C++ ಲೈಬ್ರರಿಗಳು
  • ಮುಂದಿನ ISO C++ ಶಿಷ್ಟವಾಧ ಡ್ರಾಫ್ಟ್‌ನ (C++0x) ಇನ್ನೂ ಹೆಚ್ಚಿನ ಅಳವಡಿಕೆ
  • GNU ಪ್ರಾಜೆಕ್ಟ್ ಡಿಬಗ್ಗರ್ (GDB) ಹಾಗು SystemTap ಅನ್ನು ಬಳಸಿಕೊಂಡು ವೇರಿಯೇಬಲ್ ಟ್ರಾಕಿಂಗ್ ಯೋಜನೆಗಳ ಪರಿಚಯ.
GCC 4.4 ರಲ್ಲಿ ಅನ್ವಯಿಸಲಾದ ಸುಧಾರಣೆಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ GCC ಜಾಲತಾಣವನ್ನು ನೋಡಿ.

13.4. GNU C ಲೈಬ್ರರಿ (glibc)

GNU C ಲೈಬ್ರರಿ (glibc) ಪ್ಯಾಕೇಜುಗಳು Red Hat Enterprise Linux ನಲ್ಲಿ ಅನೇಕ ಪ್ರೊಗ್ರಾಮ್‌ಗಳಿಂದ ಬಳಸಲಾಗುವ ಶಿಷ್ಟವಾದ C ಲೈಬ್ರರಿಗಳನ್ನು ಹೊಂದಿದೆ. ಈ ಪ್ಯಾಕೇಜುಗಳು ಶಿಷ್ಟವಾದ C ಹಾಗು ಶಿಷ್ಟವಾದ ಮ್ಯಾತ್ ಲೈಬ್ರರಿಗಳನ್ನು ಹೊಂದಿರುತ್ತದೆ. ಈ ಎರಡು ಲೈಬ್ರರಿಗಳಿಲ್ಲದೆ, ಲಿನಕ್ಸ್ ವ್ಯವಸ್ಥೆಯು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ.
Red Hat Enterprise Linux 6 ರಲ್ಲಿ glibc ಯ ಆವೃತ್ತಿ 2.11 ಇರುತ್ತದೆ, ಇದು ಹಲವಾರು ಸವಲತ್ತುಗಳು ಹಾಗು ವರ್ಧನೆಗಳನ್ನು ಒದಗಿಸುತ್ತದೆ, ಅವುಗಳೆಂದರೆ:
  • ಉತ್ತಮಗೊಳಿಸಲಾದ ಡೈನಮಿಕ್ ಮೆಮೊರಿ ನಿಯೋಜನೆ (malloc) ವರ್ತನೆಯು ಹಲವು ಸಾಕೆಟ್‌ಗಳು ಹಾಗು ಕೋರುಗಳ ನಡುವೆ ಹೆಚ್ಚಿನ ಗಾತ್ರ ಬದಲಾವಣೆಯನ್ನು ಶಕ್ತಗೊಳಿಸುತ್ತದೆ. ಅದರದೆ ಆದ ಮೆಮೊರಿಗೆ ತ್ರೆಡ್‌ಗಳನ್ನು ನಿಯೋಜಿಸುವುದು ಹಾಗು ಕೆಲವು ಸಂದರ್ಭಗಳಲ್ಲಿ ಲಾಕ್ ಮಾಡುವಿಕೆಯನ್ನು ತಪ್ಪಿಸುವ ಮೂಲಕ ಇದನ್ನು ಪಡೆಯಬಹುದಾಗಿದೆ. MALLOC_ARENA_TEST ಹಾಗು MALLOC_ARENA_MAX ಎಂಬ ಪರಿಸರ ವೇರಿಯೇಬಲ್‌ ಅನ್ನು ಬಳಸುವ ಮೂಲಕ ಮೆಮೊರಿ ಪೂಲ್‌ಗಳಿಗೆ (ಯಾವುದಾದರೂ ಇದ್ದಲ್ಲಿ) ಹೆಚ್ಚುವರಿ ಮೆಮೊರಿಯನ್ನು ನಿಯೋಜಿಸುವುದನ್ನು ನಿಯಂತ್ರಿಸಬಹುದಾಗಿರುತ್ತದೆ. ಮೆಮೊರಿ ಪೂಲ್‌ಗಳ ಸಂಖ್ಯೆಯು MALLOC_ARENA_TEST ಯ ಮೌಲ್ಯವನ್ನು ತಲುಪಿದಾಗ ಆ ಸಂಖ್ಯೆಯ ಕೋರುಗಳಿಗಾಗಿ ಒಂದು ಪರೀಕ್ಷೆಯನ್ನು ನಡೆಲಾಗುತ್ತದೆ ಎಂಬುದನ್ನು ಸೂಚಿಸುತ್ತದೆ. MALLOC_ARENA_MAX ಎನ್ನುವುದು ಕೋರುಗಳ ಸಂಖ್ಯೆ ಏನೇ ಇರಲಿ, ಬಳಸಲಾಗುವ ಗರಿಷ್ಟ ಸಂಖ್ಯೆ ಪೂಲ್‌ಗಳನ್ನು ಸೂಚಿಸುತ್ತದೆ.
  • ಕರ್ನಲ್‌ನಲ್ಲಿ PI ವೇಗವಾದ ಬಳಕೆದಾರಸ್ಥಳ ಮ್ಯೂಟೆಕ್ಸ್‌ಗಳಿಗಾಗಿ ಸ್ಥಿತಿ ವೇರಿಯೇಬಲ್‌ಗಳನ್ನು (condvars) ಬಳಸುವಾಗ ಪ್ರಿಯಾರಿಟಿ ಇನ್‌ಹೆರಿಟೆನ್ಸ್ (PI) ಮ್ಯೂಚುವಲ್ ಎಕ್ಸ್‌ಕ್ಲೂಶನ್‌ ಕಾರ್ಯಗಳೊಂದಿಗೆ (mutex) ಬಳಸುವಾಗಿನ ಕಾರ್ಯಕ್ಷಮತೆಯಲ್ಲಿನ ಸುಧಾರಣೆ.
  • x86_64 ಆರ್ಕಿಟೆಕ್ಚರಿನಲ್ಲಿ ಸೂಕ್ತವಾದ ವಾಕ್ಯಾಂಶ ಕಾರ್ಯನಿರ್ವಹಣೆಗಳು.
  • getaddrinfo() ಕ್ರಿಯೆಯು Datagram Congestion Control Protocol (DCCP) ಹಾಗು UDP-Lite ಪ್ರೊಟೊಕಾಲ್‌ಗೆ ಬೆಂಬಲವನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, getaddrinfo() ಈಗ IPv4 ಹಾಗು IPv6 ವಿಳಾಸಗಳಿಗಾಗಿ ನೋಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

13.5. GNU ಪ್ರಾಜೆಕ್ಟ್ ಡೀಬಗ್ಗರ್ (GDB)

GNU ಪ್ರಾಜೆಕ್ಟ್ ಡೀಬಗ್ಗರ್ (ಸಾಮಾನ್ಯವಾಗಿ GDB ಎಂದು ಕರೆಯಲಾಗುತ್ತದೆ) ಎನ್ನುವುದು C, C++, ಹಾಗು ಇತರೆ ಭಾಷೆಗಳಲ್ಲಿ ಬರೆಯಲಾದ ಪ್ರೊಗ್ರಾಮ್‌ಗಳನ್ನು ಒಂದು ನಿಯಂತ್ರಿತ ವಿಧಾನದಲ್ಲಿ ಕಾರ್ಯಗತಗೊಳಿಸುವ ಮೂಲಕ, ಹಾಗು ನಂತರ ಅವುಗಳ ದತ್ತಾಂಶವನ್ನು ಮುದ್ರಿಸುವ ಮೂಲಕ ದೋಷ ನಿದಾನ ಮಾಡುತ್ತದೆ..Red Hat Enterprise Linux 6 ರಲ್ಲಿ GDB ಯ ಆವೃತ್ತಿ 7.0 ಇರುತ್ತದೆ.
Python ಸ್ಕ್ರಿಪ್ಟಿಂಗ್
ಅಪ್‌ಡೇಟ್ ಮಾಡಲಾದ GDB ಯ ಈ ಆವೃತ್ತಿಯು ಪೈತಾನ್ API ಅನ್ನು ಹೊಂದಿದ್ದು, ಇದು ಪೈತಾನ್ ಪ್ರೊಗ್ರಾಮಿಂಗ್ ಭಾಷೆಯಲ್ಲಿ ಬರೆಯಲಾದ ಸ್ಕ್ರಿಪ್ಟುಗಳನ್ನು ಬಳಸಿಕೊಂಡು GDB ಸ್ವಯಂಚಲಾಯಿತಗೊಳ್ಳಲು ಅನುವು ಮಾಡಿಕೊಡುತ್ತದೆ.
ಪೈತಾನ್ API ಯ ಒಂದು ಗಮನಾರ್ಹ ಸವಲತ್ತೆಂದರೆ ಪೈತಾನ್ ಸ್ಕ್ರಿಪ್ಟುಗಳನ್ನು ಬಳಸಿಕೊಂಡು GDB ಔಟ್‌ಪುಟ್ (ಸಾಮಾನ್ಯವಾಗಿ ಪ್ರೆಟಿ-ಪ್ರಿಂಟಿಂಗ್ ಎಂದು ಕರೆಯಲಾಗುವ) ಅನ್ನು ಫಾರ್ಮ್ಯಾಟ್‌ ಮಾಡುವಿಕೆ. ಈ ಹಿಂದೆ, GDB ಯ ಪ್ರೆಟಿ-ಪ್ರಿಂಟಿಂಗ್ ಅನ್ನು ಶಿಷ್ಟ ರೀತಿಯ ಪ್ರಿಂಟ್ ಸಿದ್ಧತೆಗಳಿಗೆ ಮಾತ್ರ ಸಂರಚಿಸಲಾಗಿತ್ತು. ಇಚ್ಛೆಯ ಪ್ರೆಟಿ-ಪ್ರಿಂಟರ್ ಸ್ಕ್ರಿಪ್ಟುಗಳನ್ನು ರಚಿಸುವ ಸಾಮರ್ಥ್ಯದಿಂದಾಗಿ GDB ಯು ಕೆಲವು ನಿಶ್ಚಿತ ಅನ್ವಯಗಳಿಗಾಗಿನ ಮಾಹಿತಿಯನ್ನು ತೋರಿಸುವುದನ್ನು ಬಳಕೆದಾರರು ನಿಯಂತ್ರಿಸಬಹದಾಗಿರುತ್ತದೆ. Red Hat Enterprise Linux ನಲ್ಲಿ GNU ಶಿಷ್ಟ C++ ಲೈಬ್ರರಿಗಾಗಿನ ಪ್ರೆಟಿ-ಪ್ರಿಂಟರ್ ಸ್ಕ್ರಿಪ್ಟುಗಳ ಸಂಪೂರ್ಣ ಸೂಟ್ ಅನ್ನು ಸೇರಿಸಲಾಗಿದೆ (libstdc++).
ವರ್ಧಿತ C++ ಬೆಂಬಲ
GDB ಯಲ್ಲಿ C++ ಪ್ರೊಗ್ರಾಮಿಂಗ್ ಭಾಷೆಗಾಗಿನ ಬೆಂಬಲವನ್ನು ಸುಧಾರಿಸಲಾಗಿದೆ. ಗಮನಾರ್ಹವಾದ ಸುಧಾರಣೆಗಳೆಂದರೆ:
  • ಎಕ್ಸ್‌ಪ್ರೆಶನ್ ಪಾರ್ಸಿಂಗ್‌ಗೆ ಹಲವು ಸುಧಾರಣೆಗಳು.
  • ಟೈಪ್‌ ನೇಮ್‌ಗಳ ಉತ್ತಮ ಹ್ಯಾಂಡ್ಲಿಂಗ್.
  • ಅಗತ್ಯವಿಲ್ಲದೆ ಕೋಟ್‌ ಮಾಡುವಿಕೆಯನ್ನು ಹೆಚ್ಚು ಕಡಿಮೆ ತೆಗೆದು ಹಾಕಲಾಗಿದೆ
  • "next" ಹಾಗು ಇತರೆ ಸ್ಟೆಪ್ಪಿಂಗ್ ಆಜ್ಞೆಗಳ ಕೆಳಗಿರುವುದು ಒಂದು ಆಕ್ಷೇಪಣೆಯನ್ನು ತೋರಿಸಿದರೂ ಸಹ ಇವುಗಳು ಸರಿಯಾಗಿ ಕೆಲಸ ಮಾಡುತ್ತವೆ.
  • GDB ಒಂದು ಹೊಸ "catch syscall"ಆಜ್ಞೆಯನ್ನು ಹೊಂದಿದೆ. ಕೆಳಗಿನದು ಒಂದು ವ್ಯವಸ್ಥೆಯ ಕರೆಯನ್ನು (ಸಿಸ್ಟಮ್ ಕಾಲ್) ಮಾಡಿದಾಗ ಅದನ್ನು ನಿಲ್ಲಿಸಲು ಇದನ್ನು ಬಳಸಬಹುದಾಗಿದೆ.
ಸ್ವತಂತ್ರ ತ್ರೆಡ್ ದೋಷನಿದಾನ
ತ್ರೆಡ್ ಕಾರ್ಯಗತಗೊಳಿಸುವಿಕೆಯು ಈಗ ತ್ರೆಡ್‌ಗಳನ್ನು ಪ್ರತ್ಯೇಕವಾಗಿ ಹಾಗು ಒಂದೊಕ್ಕೊಂದು ಸ್ವತಂತ್ರವಾಗಿ ದೋಷನಿದಾನ ಮಾಡುವುದನ್ನು ಅನುಮತಿಸುತ್ತದೆ; ಹೊಸ ಸಂಯೋಜನೆಗಳಾದ "set target-async" ಹಾಗು "set non-stop" ಎನ್ನುವುದು ಶಕ್ತಗೊಂಡಿರುತ್ತದೆ.

14. ಇಂಟರ್ಪೊಲೆಬಿಲಿಟಿ

14.1. Samba

Samba ವು ಕಡತಗಳನ್ನು, ಮುದ್ರಕಗಳನ್ನು ಹಾಗು ಇತರೆ ಮಾಹಿತಿಗಳನ್ನು (ಲಭ್ಯವಿರುವ ಕಡತಗಳ ಹಾಗು ಮುದ್ರಕಗಳಲ್ಲಿನ ಕೋಶಗಳು) ಹಂಚಿಕೊಳ್ಳಲು NetBIOS over TCP/IP (NetBT) ಪ್ರೊಗ್ರಾಮ್ ಅನ್ನು ಬಳಸುತ್ತದೆ. ಈ ಪ್ಯಾಕೇಜ್ Server Message Block ಅಥವ SMB ಪರಿಚಾರಕವನ್ನು (Common Internet File System ಅಥವ CIFS ಪರಿಚಾರಕ ಎಂದೂ ಸಹ ಕರೆಯಲಾಗುತ್ತದೆ) ಒದಗಿಸಲಿದ್ದು ಇದು SMB/CIFS ಕ್ಲೈಂಟ್‌ಗಳಿಗಾಗಿ ಜಾಳಬಂಧ ಸೇವೆಗಳನ್ನು ಒದಗಿಸುತ್ತದೆ.
Red Hat Enterprise Linux 6 ರಲ್ಲಿ Samba ಗೆ ಈ ಕೆಳಗಿನ ಗಮನಾರ್ಹ ಸುಧಾರಣೆಗಳನ್ನು ಸೇರಿಸಲಾಗಿದೆ:
  • ಇಂಟರ್ನೆಟ್ ಪ್ರೊಟೊಕಾಲ್ ಆವೃತ್ತಿ 6 ಬೆಂಬಲ (IPv6)
  • Windows 2008 (R2) ನಂಬಿಕೆ ಸಂಬಂಧಗಳಿಗೆ ಬೆಂಬಲ.
  • Windows 7 ಡೊಮೈನ್ ಸದಸ್ಯರುಗಳಿಗೆ ಬೆಂಬಲ.
  • Active Directory LDAP ಸೈನಿಂಗ್/ಸೀಲಿಂಗ್ ಪಾಲಿಸಿಗೆ ಬೆಂಬಲ.
  • libsmbclient ಗೆ ಸುಧಾರಣೆಗಳು
  • Windows ನಿರ್ವಹಣಾ ಉಪಕರಣಗಳಿಗಾಗಿ (mmc ಹಾಗು User Manager) ಉತ್ತಮ ಬೆಂಬಲ
  • ಡೊಮೈಲ್ ಸದಸ್ಯರು ಬದಲಾದಂತೆ ಸ್ವಯಂಚಾಲಿತವಾಗಿ ಗಣಕದ ಗುಪ್ತಪದವು ಬದಲಾಗುತ್ತದೆ
  • ಹೊಸ ರಿಜಿಸ್ಟ್ರಿ ಆಧರಿತವಾದ ಸಂರಚನಾ ಪದರ
  • Samba ಕ್ಲೈಂಟ್ ಹಾಗು ಪರಿಚಾರಕದ ನಡುವೆ ಗೂಢಲಿಪೀಕರಿಸಲಾದ SMB ವರ್ಗಾವಣೆ
  • Windows ಕ್ರಾಸ್‌-ಫಾರೆಸ್ಟ್, ಟ್ರಾನ್ಸಿಟೀವ್ ಟ್ರಸ್ಟ್ ಹಾಗು ಒನ್-ವೇ ಡೊಮೈನ್ ಟ್ರಸ್ಟ್‌ಗಳಿಗೆ ಸಂಪೂರ್ಣ ಬೆಂಬಲ
  • ಹೊಸ NetApi ದೂರಸ್ಥ ನಿರ್ವಹಣೆ ಹಾಗು winbind client C ಲೈಬ್ರರಿಗಳು
  • Windows ಡೊಮೈನ್‌ಗಳಿಗೆ ಸೇರಲು ಹೊಸ ಚಿತ್ರಾತ್ಮಕ ಬಳಕೆದಾರ ಸಂಪರ್ಕಸಾಧನ

Further Reading

Red Hat Enterprise Linux 6 ರಲ್ಲಿನ Samba ಸಂರಚನೆಯ ಬಗೆಗಾಗಿನ ಹೆಚ್ಚಿನ ಮಾಹಿತಿಗಾಗಿ ನಿಯೋಜನಾ ಮಾರ್ಗದರ್ಶಿಯನ್ನು ನೋಡಿ.

15. ವರ್ಚುವಲೈಸೇಶನ್

15.1. ಕರ್ನಲ್-ಆಧರಿತ ವರ್ಚುವಲ್ ಮೆಶೀನ್

Red Hat Enterprise Linux 6 ರಲ್ಲಿ AMD64 ಹಾಗು Intel 64 ಆರ್ಕಿಟೆಕ್ಚರಿಗಳಿಗಾಗಿ ಕರ್ನಲ್-ಆಧರಿತ ವರ್ಚುವಲ್ ಮೆಶೀನ್(KVM) ಹೈಪರ್ವೈಸರಿಗೆ ಸಂಪೂರ್ಣ ಬೆಂಬಲವನ್ನು ಸೇರಿಸಲಾಗಿದೆ. KVM ಅನ್ನು ಲಿನಕ್ಸ್ ಕರ್ನಲ್‌ನೊಂದಿಗೆ ಸೇರಿಸಲಾಗಿದ್ದು, ಇದರಿಂದಾಗಿ Red Hat Enterprise Linux ನಲ್ಲಿ ಅಂತರ್ಗತಗೊಳಿಸಲಾದ ಸ್ಥಿರತೆ, ಸವಲತ್ತುಗಳು, ಹಾಗು ಯಂತ್ರಾಂಶ ಬೆಂಬಲದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

15.1.1. ಮೆಮೊರಿ ವರ್ಧನೆಗಳು

  • ಟ್ರಾನ್ಸಪರೆಂಟ್ ಹ್ಯೂಜ್‌ಪೇಜಸ್ ಗಾತ್ರವನ್ನು 4 ಕಿಲೋಬೈಟ್‌ಗಳಿಂದ 2 ಮೆಗಾಬೈಟ್‌ಗಳಿಗೆ ಹೆಚ್ಚಿಸುತ್ತವೆ. ಟ್ರಾನ್ಸಪರೆಂಟ್ ಹ್ಯೂಜ್‌ಪೇಜಸ್ ಹೆಚ್ಚು ಸಾಧಿತವಾದ ಸಂಪನ್ಮೂಲಗಳಲ್ಲಿ ಹಾಗು ದೊಡ್ಡ ಪ್ರಮಾಣದ ಮೆಮೊರಿ ಕಾರ್ಯದ ಹೊರೆಗಳನ್ನು ಹೊಂದಿರುವ ವ್ಯವಸ್ಥೆಗಳ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಪ್ರಯೋಜನೆಯನ್ನು ಒದಗಿಸುತ್ತವೆ. ಹೆಚ್ಚುವರಿಯಾಗಿ, KSM ನೊಂದಿಗೆ ಟ್ರಾನ್ಸಪರೆಂಟ್ ಹ್ಯೂಜ್‌ಪೇಜಸ್ ಅನ್ನು ಬಳಸಿಕೊಳ್ಳಲು Red Hat Enterprise Linux 6 ಬೆಂಬಲವನ್ನು ಒದಗಿಸುತ್ತದೆ.
  • ಎಕ್ಸ್ಟೆಂಡೆಂಡ್ ಪೇಜ್‌ ಟೇಬಲ್‌ನ ಪೇಜ್‌ ಬಿಟ್‌ಗಳು ಒಂದು ಮೆಮೊರಿ ಒತ್ತಡಗಳಲ್ಲಿ ಮೆಮೊರಿಯನ್ನು ಬದಲಾಯಿಸಿಕೊಳ್ಳುವ ಚತುರ ಆಯ್ಕೆಗಳನ್ನು ಬಳಸಲು ಆತಿಥೇಯವನ್ನು ಶಕ್ತಗೊಳಿಸುತ್ತದೆ ಹಾಗು ಎಕ್ಸ್ಟೆಂಡೆಂಡ್ ಪೇಜ್‌ಗಳನ್ನು ಸಣ್ಣ ಪೇಜ್‌ಗಳಾಗಿ ವಿಂಗಡಿಸಿಕೊಂಡು ಪಾರದರ್ಶಕ ಹ್ಯೂಜ್‌ಪೇಜಸ್‌ ಅನ್ನು ಬದಲಾಯಿಸುದಕ್ಕೆ ಅನುವು ಮಾಡಿಕೊಡುತ್ತದೆ.

15.1.2. ವರ್ಚುವಲೈಸ್ಡ್ CPU ಸವಲತ್ತುಗಳು

  • Red Hat Enterprise Linux 6 ರಲ್ಲಿ ಒಂದು ವರ್ಚುವಲೈಸ್ಡ್ ಅತಿಥಿಯಲ್ಲಿ 64 ವರ್ಚುವಲೈಸ್ಡ್ CPUಗಳವರೆಗೆ ಬಳಸಲು ಬೆಂಬಲವನ್ನು ಒದಗಿಸುತ್ತದೆ.
  • ಆತಿಥೇಯ ಸಂಸ್ಕಾರಕದಲ್ಲಿ ಇರುವ CPU ವಿಸ್ತರಣೆಗಳನ್ನು ಈಗ ವರ್ಚುವಲೈಸ್ಡ್ ಅತಿಥಿಗಳಿಂದ ಬಳಸಲು ಸಾಧ್ಯವಿರುತ್ತದೆ. ಈ ಸೂಚನೆಗಳಿಗಾಗಿನ ಬೆಂಬಲದಿಂದಾಗಿ ವರ್ಚುಲಸೈಸ್ಡ್ ಅತಿಥಿಗಳು ಆಧುನಿಕ ಸಂಸ್ಕಾರಕ ಸೂಚನೆಗಳನ್ನು ಹಾಗು ಯಂತ್ರಾಂಶ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿರುತ್ತದೆ.
  • ಹೊಸ x2apic ವರ್ಚುವಲ್ Advanced Programmable Interrupt Controller (APIC) ನೇರವಾದ ಅತಿಥಿ APIC ನಿಲುಕಣೆಯನ್ನು ಅನುಮತಿಸುವುದರ ಮೂಲಕ ಹಾಗು ಎಮ್ಯುಲೇಟೆಡ್ ನಿಲುಕಣೆಯಿಂದ ಉಂಟಾಗುವ ಹೆಚ್ಚಿನ ಹೊರೆಯನ್ನು ತಪ್ಪಿಸುವ ಮೂಲಕ ವರ್ಚುವಲೈಸ್ಡ್ x86_64 ಅತಿಥಿಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.
  • ಹೊಸ ಬಳಕೆದಾರ ಸ್ಥಳ ಸೂಚಕಗಳು CPU ರಿಜಿಸ್ಟರುಗಳನ್ನು ಕ್ಯಾಶಿಂಗ್ ಮಾಡುವುದನ್ನು ಅನುಮತಿಸುತ್ತದೆ, ಇದರಿಂದಾಗಿ ಸನ್ನಿವೇಶ ಬದಲಾವಣೆ ಸಂದರ್ಭಗಳಲ್ಲಿ ಬಳಸದೆ ಇರುವ ಘಟಕಗಳ ರಿಜಿಸ್ಟರ್ ಸ್ಥಿತಿಗಳನ್ನು ಶೇಖರಿಸಿಡುವಂತಹ ಗಣಕದ ದೃಷ್ಟಿಯಿಂದ ದುಬಾರಿಯಾದ ಕ್ರಿಯೆಗಳನ್ನು ತಪ್ಪಿಸಿದಂತಾಗುತ್ತದೆ.
  • Read copy update (RCU) ಕರ್ನಲ್ ಲಾಕಿಂಗ್ ಈಗ ಉತ್ತಮಗೊಳಿಸಲಾದ ಸಿಮಿಟ್ರಿಕ್ ಬಹುಸಂಸ್ಕರಣಾ ಬೆಂಬಲವನ್ನು ಬಳಸುತ್ತದೆ. RCU ಕರ್ನಲ್ ಲಾಕಿಂಗ್ ಜಾಲಬಂಧ ಕಾರ್ಯಭಾರಗಳಲ್ಲಿ ಹಾಗು ಬಹು-ಸಂಸ್ಕರಣಾ ವ್ಯವಸ್ಥೆಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

15.1.3. ಶೇಖರಣೆ

  • QEMU ಎಮ್ಯುಲೇಟೆಡ್ ಖಂಡ ಚಾಲಕವು ಸಂಪೂರ್ಣ ಅಸಿಂಕ್ರೊನಸ್ I/O, preadv ಹಾಗು pwritev ಕಾರ್ಯಭಾರಗಳಿಗೆ ಬೆಂಬಲವನ್ನು ಹೊಂದಿರುತ್ತದೆ. ಈ ಕಾರ್ಯಭಾರಗಳು QEMU ಎಮ್ಯುಲೇಟೆಡ್ ಖಂಡ ಚಾಲಕವನ್ನು ಬಳಸಿಕೊಂಡು ಶೇಖರಣಾ ಸಾಧನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.
  • ಅನ್ವಯಗಳು QEMU ಮಾನಿಟರಿನೊಂದಿಗೆ ಸರಿಯಾಗಿ ಸಂವಹಿಸುಂತೆ QEMU ಮಾನಿಟರ್ ಪ್ರೊಟೊಕಾಲ್ (QMP) ಅನ್ವಯಗಳು ಅನುವು ಮಾಡಿಕೊಡುತ್ತದೆ. QEMU ಸುಲಭವಾಗಿ ಪಾರ್ಸ್ ಮಾಡಬಹುದಾದಂತಹ ಹಾಗು ಅಸಿಂಕ್ರೋನಸ್ ಸಂದೇಶಗಳಿಗಾಗಿ ಮತ್ತು ಸಾಮರ್ಥ್ಯಗಳ ಅಳವಡಿಸಬಹುದಾದಂತಹ ಒಂದು ಪಠ್ಯ-ಆಧರಿತವಾದಂತಹ ವ್ಯವಸ್ಥೆಯನ್ನು ಒದಗಿಸುತ್ತದೆ.
  • ಪಾರಾ-ವರ್ಚುವಲೈಸ್ಡ್ (virtio) ಚಾಲಕಕ್ಕೆ ಸುಧಾರಿತ ಖಂಡ I/O ಕಾರ್ಯಕ್ಷಮತೆಗಾಗಿ ನೇರವಲ್ಲದ ರಿಂಗ್ ಅನ್ನು ನಮೂದಿಸುತ್ತದೆ (ಸ್ಪಿನ್ ಲಾಕ್‌ಗಳು) ಹಾಗು ಹೆಚ್ಚು concurrent I/O ಕಾರ್ಯಗಳನ್ನು ಅನುಮತಿಸುತ್ತದೆ.
  • ವರ್ಚುವಲೈಸ್ಡ್ ಶೇಖರಣಾ ಸಾಧನಗಳು ಈಗ ಚಾಲನಾ ಸಮಯದಲ್ಲಿ ಅತಿಥಿಗಳಿಗೆ ಸೇರಿಸಲು ಹಾಗು ಅತಿಥಿಗಳಿಂದ ತೆಗೆದುಹಾಕಲು (ಹಾಟ್ ಪ್ಲಗ್‌ ಮಾಡುವಿಕೆ) ಸಾಧ್ಯವಿರುತ್ತದೆ.
  • ಖಂಡ ಹೊಂದಿಕೆ ಶೇಖರಣಾ ಟೊಪೊಲಜಿ ಅರಿವಿಗಾಗಿ ಬೆಂಬಲ. ಕೆಳಗೆ ಇರುವ ಶೇಖರಣಾ ಯಂತ್ರಾಂಶದ ಸವಲತ್ತುಗಳು ಹಾಗು ಭೌತಿಕ ಶೇಖರಣೆಯ ಖಂಡದ ಗಾತ್ರಗಳನ್ನು (ಉದಾಹರಣೆಗೆ, 4KB ವಿಭಾಗಗಳು) ಅತಿಥಿಗಳಿಗೆ ಒದಗಿಸಲಾಗುತ್ತದೆ. ಈ ಸವಲತ್ತಿಗಾಗಿ ಹೊಂದಿಕೆಯಾಗುವ ಶೇಖರಣಾ ಸಾಧನ ಮಾಹಿತಿ ಹಾಗು ಆಜ್ಞೆಗಳ ಅಗತ್ಯವಿರುತ್ತದೆ. ಅತಿಥಿ ಟಾಪೊಲಜಿ ಅರಿವಿನಿಂದಾಗಿ ವರ್ಚುವಲೈಸ್ಡ್ ಅತಿಥಿಗಳು ಕಡತವ್ಯವಸ್ಥೆ ವಿನ್ಯಾಸಗಳನ್ನು ಅನುರೂಪವಾಗಿಸಲು ಅನುವು ಮಾಡಿಕೊಡುತ್ತದೆ ಹಾಗು I/O ಅನುರೂಪಗೊಳಿಕೆಯನ್ನು ಬಳಸುವ ಅನ್ವಯಗಳಲ್ಲಿ ಸುಧಾರಿತ ಕಾರ್ಯಕ್ಷಮತೆಗೆ ಅನುವು ಮಾಡಿಕೊಡುತ್ತದೆ.
  • qcow2 ವರ್ಚುವಲೈಸ್ಡ್ ಚಿತ್ರಿಕಾ ವಿನ್ಯಾಸಕ್ಕಾಗಿ ಕಾರ್ಯಕ್ಷಮತೆಯಲ್ಲಿ ಉತ್ತಮಗೊಳಿಕೆ.

15.1.4. ಜಾಲಬಂಧ

  • vhost-net ಹಲವಾರು ಜಾಲಬಂಧ ಕಾರ್ಯಭಾರಗಳನ್ನು QEMU ಬಳಕೆದಾರ ಸ್ಥಳದಿಂದ ಕರ್ನಲ್‌ಗೆ ವರ್ಗಾಯಿಸುತ್ತದೆ. vhost-net ಕಡಿಮೆ ಸಂಖ್ಯೆಯ ಸನ್ನಿವೇಶ ಬದಲಾವಣೆಗಳನ್ನು ಹಾಗು vmexit ಕರೆಗಳನ್ನು ಬಳಸುತ್ತದೆ. ಈ ಸುಧಾರಣೆಗಳು SR-IOV ಸಾಧನಗಳ, ನೇರವಾಗಿ ನಿಯೋಜಿಸಲಾದ ಜಾಲಬಂಧ ಸಾಧನವು ಹಾಗು ಇತರೆ ಜಾಲಬಂಧ ಸಾಧನಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.
  • MSI-X ಬೆಂಬಲವು ಜಾಲಬಂಧ ಸಾಧನಗಳಿಗೆ ಲಭ್ಯವಿರುವ ತಡೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. MSI-X ಬೆಂಬಲವು ಹೊಂದಿಕೆಯಾಗುವ ಯಂತ್ರಾಂಶದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
  • ವರ್ಚುವಲೈಸ್ಡ್ ಜಾಲಬಂಧ ಸಾಧನಗಳನ್ನು ಈಗ ಚಾಲಿತಗೊಳ್ಳುತ್ತಿರುವ ಅತಿಥಿಗಳಲ್ಲಿ ಹಾಟ್‌ ಪ್ಲಗ್‌ ಹಾಗು ಹಾಟ್ ರಿಮೂ ಮಾಡಬಹುದಾಗಿರುತ್ತದೆ. ಹೆಚ್ಚು ಸುಧಾರಿತ PXE ಜಾಲಬಂಧ ಬೂಟಿಂಗ್‌ಗಾಗಿ gpxe ಬಳಸಿಕೊಳ್ಳುವ ಜಾಲಬಂಧ ಬೂಟ್.

15.1.5. ಕರ್ನಲ್ ಸೇಮ್‌ಪೇಜ್ ಮರ್ಜಿಂಗ್

Red Hat Enterprise Linux 6 ರಲ್ಲಿನ KVM ನಲ್ಲಿ Kernel SamePage Merging (KSM) ಅನ್ನು ಸೇರಿಸಲಾಗಿದ್ದು, ಇದು KVM ಅತಿಥಿಗಳು ಒಂದೆ ಬಗೆಯ ಮೆಮೊರಿ ಪೇಜ್‌ಗಳನ್ನು ಬಳಸುವಂತೆ ಮಾಡುತ್ತದೆ. ಪೇಜ್ ಹಂಚಿಕೆ ಮಾಡುವುದರಿಂದ ಮೆಮೊರಿಯ ನಕಲು ಪ್ರತಿಯನ್ನು ಮಾಡುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗು ಒಂದೆ ಆತಿಥೇಯದಲ್ಲಿ ಹೆಚ್ಚು ಅತಿಥಿ ಕಾರ್ಯವ್ಯವಸ್ಥೆಗಳನ್ನು ಚಲಾಯಿಸಲು ಅನುವು ಮಾಡಿಕೊಡುತ್ತದೆ.

15.1.6. PCI ಪಾಸ್‌ತ್ರೂ

PCI ಪಾಸ್‌ತ್ರೂ (ನೇರವಾದ ಕಾರ್ಯನಿಯೋಜನೆ) ಸಾಧನಗಳನ್ನು ಈಗ ಚಾಲಿತಗೊಳ್ಳುತ್ತಿರುವ ಅತಿಥಿಗಳಲ್ಲಿ ಹಾಟ್‌ ಪ್ಲಗ್‌ ಹಾಗು ಹಾಟ್ ರಿಮೂ ಮಾಡಬಹುದಾಗಿರುತ್ತದೆ.

15.1.7. SR-IOV

SR-IOV ಈಗ ಕಚ್ಛಾ ಸಾಕೆಟ್ ಕ್ರಮವನ್ನು ಬೆಂಬಲಿಸುತ್ತವೆ. ಈ ಹಿಂದೆ ಜಾಲಬಂಧ ತಡೆಗಳನ್ನು ಟ್ಯಾಪ್ ಕ್ರಮದ ಮೂಲಕ ತಂತ್ರಾಂಶ ಬ್ರಿಡ್ಜಿಂಗ್ ಮೂಲಕ ನಿಭಾಯಿಸಲಾಗುತ್ತಿತ್ತು. SR-IOV ಯು ಅತಿಥಿಗಳಿಗೆ ತಾರ್ಕಿಕ ಜಾಲಬಂಧ ಸಂಪರ್ಕಸಾಧನಗಳಿಗೆ ಬೆಂಬಲವನ್ನು ಒದಗಿಸುತ್ತದೆ.
SR-IOV, ಈ ಹಿಂದೆ ವರ್ಗಾವಣೆಯನ್ನು ಬೆಂಬಲಿಸುತ್ತಿರಲಿಲ್ಲ. vhost-net ತಡೆಯು ಪಾರದರ್ಶಕ ಕಾರ್ಯನಿಯೋಜನೆಯೊಂದಿಗೆ SR-IOV ಅನ್ನು ಒದಗಿಸುತ್ತದೆ ಹಾಗು ಒಂದೇ-ರೀತಿ ಇರದ ವ್ಯವಸ್ಥೆಗಳ ನಡುವೆ ವರ್ಗಾಯಿಸುವುದನ್ನು ಬೆಂಬಲಿಸುತ್ತದೆ.

15.1.8. virtio-serial

ಪ್ಯಾರಾ ವರ್ಚುವಲೈಸ್ಡ್ ಸರಣಿ ಸಾಧನವು (virtio-serial) ಆತಿಥೇಯದ ಬಳಕೆದಾರ ಸ್ಥಳ ಹಾಗು ಅತಿಥಿಯ ಬಳಕೆದಾರ ಸ್ಥಳದ ನಡುವೆ ಒಂದು ಸರಳವಾದ ಸಂವಹನ ಸಂಪರ್ಕ ಸಾಧನವನ್ನು ಒದಗಿಸುತ್ತದೆ. ಜಾಲಬಂಧವು ಲಭ್ಯವಿರದೆ ಇರುವಂತಹ ಅಥವ ಬಳಸಲಾಗದೆ ಇರುವಂತಹ ಸಂದರ್ಭದಲ್ಲಿ virtio-serial ಅನ್ನು ಸಂವಹನಕ್ಕಾಗಿ ಬಳಸಬಹುದಾಗಿರುತ್ತದೆ.

15.1.9. sVirt

sVirt ಎನ್ನುವುದು Red Hat Enterprise Linux 6.0 ರಲ್ಲಿ ಸೇರಿಸಲಾದ ಒಂದು ಹೊಸ ಸವಲತ್ತಾಗಿದ್ದು, ಇದು SELinux ಹಾಗು ವರ್ಚುವಲೈಸೇಶನ್ ಅನ್ನು ಒಂದಾಗಿ ಸಂಘಟಿಸುತ್ತದೆ . sVirt ವರ್ಚುವಲೈಸ್ಡ್ ಅತಿಥಿಗಳನ್ನು ಬಳಸುವಾಗ ಸುರಕ್ಷತೆಯನ್ನು ಸುಧಾರಿಸಲು ಮ್ಯಾಂಡೇಟರಿ ಎಕ್ಸೆಸ್ ಕಂಟ್ರೋಲ್ (MAC) ಅನ್ನು ಬಳಸುತ್ತದೆ. sVirt ಸುರಕ್ಷತೆಯನ್ನು ಸುಧಾರಿಸುತ್ತದೆ ಹಾಗು ಹೈಪರ್ವೈಸರಿನಲ್ಲಿರುವ ಒಂದು ದೋಷದ ವಿರುದ್ಧವಾಗು ಆತಿಥೇಯ ಅಥವ ಬೇರೊಂದು ವರ್ಚುವಲೈಸ್ಡ್ ಅತಿಥಿಗಾಗಿ ಆಕ್ರಮಣ ವೆಕ್ಟರ್ ಆಗಿ ಬಳಸುವಂತೆ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತದೆ.

15.1.10. ವರ್ಗಾವಣೆ

  • ಅತಿಥಿ ABI ಸ್ಥಿರತೆಯು ಉತ್ತಮಗೊಳಿಸಲಾದ ವರ್ಗಾವಣೆ ಬೆಂಬಲವನ್ನು ಒದಗಿಸುತ್ತದೆ. ಅತಿಥಿಗಳ PCI ಸಾಧನ ಸಂಖ್ಯೆಗಳನ್ನು ವರ್ಗಾವಣೆ ಸಮಯದಲ್ಲಿ ಕಾದಿರಿಸಲಾಗುತ್ತದೆ ಹಾಗು ಅತಿಥಿ ವರ್ಗಾವಣೆಯ ನಂತರ ಒಂದೇ ರೀತಿ ಇರುವ PCI ಸಾಧನದ ಸ್ಥಾನಗಳನ್ನು ಒದಗಿಸಲಾಗುತ್ತದೆ.
  • ವರ್ಗಾವಣೆಯು ಈಗ CPU ಮಾದರಿಗಳಿಗೆ ಹೊಣೆಯಾಗಿರುತ್ತದೆ. CPU ಮಾದರಿಗಳು ಹೊಸ ಸಂಸ್ಕಾರಕ ಸೂಚನೆಗಳ ಪ್ರಯೋಜನ ಪಡೆಯಲು ಅತಿಥಿಗಳಿಗೆ ಅನುವು ಮಾಡಿಕೊಡುತ್ತದೆ. ಅತಿಥಿಗಳನ್ನು ಸರಿಹೊಂದುವ CPU ಮಾದರಿಯನ್ನು ಹೊಂದಿರುವ ಆತಿಥೇಯಗಳಿಗೆ ವರ್ಗಾಯಿಸಬಹುದಾಗಿರುತ್ತದೆ.
  • SR-IOV ಅನ್ನು ಬಳಸುವ ಅತಿಥಿಗಳಿಂದ ಒಂದೇ ರೀತಿಯಲ್ಲದ ಸಂರಚನೆಗಳನ್ನು ಹೊಂದಿರುವ ಆದರೆ SR-IOV ಸಾಧನಗಳನ್ನು ಬಳಸುವ ಆತಿಥೇಯಕ್ಕೆ ವರ್ಗಾಯಿಸುವುದನ್ನು vhost-net ಅನುಮತಿಸುತ್ತದೆ.
  • ವರ್ಗಾವಣೆ ಪ್ರೊಟೊಕಾಲ್‌ಗೆ ವರ್ಧನೆಗಳು.

15.1.11. ಅತಿಥಿ ಸಾಧನ ABI ಸ್ಥಿರತೆ

ಹೊಸ qdev ಸಾಧನದ ಮಾದರಿಯ ಒಂದು ಭಾಗವಾಗಿ, ಅತಿಥಿ ABI ಯು ಈಗ ಸ್ಥಿರವಾಗಿದೆ ಹಾಗು ಮುಂಬರುವ ಹೊಸ ಬಿಡುಗಡೆಗಳಲ್ಲಿ ಅದನ್ನು ಸ್ಥಿರವಾಗಿ ಇರಿಸಿಕೊಳ್ಳಲಾಗುತ್ತದೆ. ಅತಿಥಿಗಳಲ್ಲಿನ ಸಾಧನಗಳು ಹಾಗು ಸಾಧನದ ವ್ಯವಸ್ಥೆಗಳು ಮುಂದಿನ ಅಪ್‌ಡೇಟ್‌ಗಳಲ್ಲಿ ಸ್ಥಿರವಾಗಿರುತ್ತವೆ. ಈ ಸವಲತ್ತು ಕೆಲವು ಕಾರ್ಯವ್ಯವಸ್ಥೆಯ ಸಕ್ರಿಯಗೊಳಿಕಾ ಪ್ರಕ್ರಿಯೆಯಲ್ಲಿ ಇದ್ದಂತಹ ಸಮಸ್ಯೆಯನ್ನು ಪರಿಹರಿಸುತ್ತದೆ.

ಸೂಚನೆ

Red Hat Enterprise Linux 6 ರಲ್ಲಿ ಸ್ವತಂತ್ರ ಗಣಕ ಪರಿಸರಗಳಿಗಾಗಿನ ಸರಳ ಪ್ರೊಟೊಕಾಲ್ (SPICE) ದೂರಸ್ಥ ಪ್ರದರ್ಶಕ ಪ್ರೊಟೊಕಾಲ್‌ಗೆ ಕ್ರಿಯಾತ್ಮಕತೆಯನ್ನು ಒದಗಿಸುವ ಘಟಕಗಳನ್ನು ಸೇರಿಸಲಾಗಿದೆ. ಈ ಪ್ರೊಟೊಕಾಲ್‌ಗಳನ್ನು Red Hat ಎಂಟರ್ಪ್ರೈಸ್ ವರ್ಚುವಲೈಸೇಶನ್ ಉತ್ಪನ್ನಗಳೊಂದಿಗೆ ಮಾತ್ರವೆ ಬಳಸಬಹುದಾಗಿರುತ್ತದೆ ಹಾಗು ಹಾಗು ಇವು ಯಾವುದೆ ಸ್ಥಿರ ABI ಅನ್ನು ಹೊಂದಿರುವ ಖಾತ್ರಿ ಇರುವುದಿಲ್ಲ. Red Hat ಎಂಟರ್ಪ್ರೈಸ್ ವರ್ಚುವಲೈಸೇಶನ್ ಉತ್ಪನ್ನಗಳೊಂದಿಗೆ ಹೊಂದಿಕೊಳ್ಳುವಂತೆ ಈ ಘಟಕಗಳನ್ನು ಅಪ್‌ಡೇಟ್ ಮಾಡಲಾಗಿರುತ್ತದೆ. ಭವಿಷ್ಯದ ಬಿಡುಗಡೆಗಳಿಗೆ ವರ್ಗಾವಣೆ ಹೊಂದಲು ಪ್ರತಿ ವ್ಯವಸ್ಥೆಯ ಆಧಾರದಲ್ಲಿ ಕೈಯಾರೆ ಇದನ್ನು ನಿರ್ವಹಿಸುವ ಅಗತ್ಯವಿರಬಹುದು.

15.2. Xen

Red Hat Enterprise Linux 6 ಈಗ x86 ಹಾಗು AMD 64 ಮತ್ತು Intel 64 ಆರ್ಕಿಟೆಕ್ಚರುಗಳಲ್ಲಿ Xen ಅತಿಥಿಯಾಗಿ ಬೆಂಬಲಿಸಲ್ಪಡುತ್ತದೆ. ಪ್ಯಾರಾ-ವರ್ಚುವಲೈಸ್ಡ್ ಕಾರ್ಯಗಳನ್ನು (pv-ops) ಈಗ Red Hat Enterprise Linux 6 ಕರ್ನಲ್‌ನಲ್ಲಿ ಸೇರಿಸಲಾಗಿದೆ. ಪೂರ್ವನಿಯೋಜಿತ Red Hat Enterprise Linux 6 ಕರ್ನಲ್ ಅನ್ನು Red Hat Enterprise Linux 5 ಆತಿಥೇಯದಲ್ಲಿ Xen ಪ್ಯಾರಾ-ವರ್ಚುವಲೈಸ್ಡ್ ಅತಿಥಿಯಾಗಿ ಹಾಗು Xen ಸಂಪೂರ್ಣ ವರ್ಚುವಲೈಸ್ಡ್ ಅತಿಥಿಯಾಗಿ ಬಳಸಬಹುದಾಗಿರುತ್ತದೆ. Red Hat Enterprise Linux 6 ರಲ್ಲಿ ಸಂಪೂರ್ಣ ವರ್ಚುವಲೈಸ್ಡ್ Xen ಅತಿಥಿ ಅನುಸ್ಥಾಪನೆಗಳಿಗಾಗಿ ಪ್ಯಾರಾ-ವರ್ಚುವಲೈಸ್ಡ್ ಚಾಲಕಗಳನ್ನು ಹೊಂದಿರುತ್ತದೆ.
Red Hat Enterprise Linux 6 ಒಂದು Xen ಆತಿಥೇಯವಾಗಿ ಬೆಂಬಲಿಸಲಾಗುವುದಿಲ್ಲ.

ಹೆಚ್ಚಿನ ಓದಿಗಾಗಿ

ವರ್ಚುವಲೈಶೇನ್ ಮಾರ್ಗದರ್ಶಿಯಲ್ಲಿ Red Hat Enterprise Linux 6 ರಲ್ಲಿ ವರ್ಚುವಲೈಶೇನ್ ತಂತ್ರಜ್ಞಾನಗಳನ್ನು ಅನುಸ್ಥಾಪಿಸುವ, ಸಂರಚಿಸುವ ಹಾಗು ನಿರ್ವಹಿಸುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ.

15.3. virt-v2v

Red Hat Enterprise Linux 6 ರಲ್ಲಿ ಹೊಸ virt-v2v ಉಪಕರಣವನ್ನು ಸೇರಿಸಲಾಗಿದೆ, ಇದನ್ನು ಬಳಸಿಕೊಂಡು ವ್ಯವಸ್ಥೆಯ ನಿರ್ವಾಹಕರು Xen ಹಾಗು VMware ESX ನಂತರ ಇತರೆ ವ್ಯವಸ್ಥೆಗಳಲ್ಲಿ ರಚಿಸಲಾಗಿರುವ ವರ್ಚುವಲ್ ಗಣಕಗಳನ್ನು ಮಾರ್ಪಡಿಸಲು ಹಾಗು ಆಮದು ಮಾಡಿಕೊಳ್ಳು ಸಾಧ್ಯವಿರುತ್ತದೆ. virt-v2v ಒಂದು Red Hat Enterprise Linux 5 ಹೈಪರ್ವೈಸರಿನಲ್ಲಿ ಚಲಾಯಿತಗೊಳ್ಳುತ್ತಿರುವ Xen ಅತಿಥಿಗಳಿಗಾಗಿ ವರ್ಗಾವಣೆ ಮಾರ್ಗವನ್ನು ಒದಗಿಸುತ್ತದೆ.

16. ಬೆಂಬಲಿಸುವ ಸಾಮರ್ಥ್ಯ ಹಾಗು ನಿರ್ವಹಣೆ

16.1. firstaidkit ಗಣಕ ಪುನಶ್ಚೇತನ ಉಪಕರಣ

Red Hat Enterprise Linux 6 ರಲ್ಲಿ ಹೊಸ ವ್ಯವಸ್ಥೆ ಪುನಶ್ಚೇತನ ಉಪಕರಣವಾದಂತಹ firstaidkit ಅನ್ನು ಸೇರಿಸಲಾಗಿದೆ. ಸಾಮಾನ್ಯವಾದ ಪುನಶ್ಚೇತನಗೊಳಿಕಾ ಉಪಕರಣಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ, firstaidkit ಸರಿಯಾಗಿ ಬೂಟ್ ಆಗದೆ ಇರುವಂತಹ ವ್ಯವಸ್ಥೆಗಳ ತೊಂದರೆ ಪತ್ತೆಹಚ್ಚಲು ಹಾಗು ಪುನಶ್ಚೇತನಗೊಳಿಸಲು ಒಂದು ಸಂವಾದಾತ್ಮಕವಾದ ಪರಿಸರವನ್ನು ಒದಗಿಸುತ್ತದೆ. ಅಷ್ಟೆ ಅಲ್ಲದೆ, ವ್ಯವಸ್ಥೆಯ ನಿರ್ವಾಹಕರು firstaidkit ಪ್ಲಗ್‌ಇನ್ ಇನ್‌ಫ್ರಾಸ್ಟ್ರಕ್ಚರ್ ಅನ್ನು ಬಳಸಿಕೊಂಡು ತಾವೆ ಸ್ವತಃ ಸ್ವಯಂಚಾಲಿತ ಪುನಶ್ಚೇತನ ಪ್ರಕ್ರಿಯೆಯನ್ನು ರಚಿಸಬಹುದಾಗಿರುತ್ತದೆ.

ಮಹತ್ವ

firstaidkit ಅನ್ನು Red Hat Enterprise Linux 6 ರಲ್ಲಿ ತಂತ್ರಜ್ಞಾನ ಅವಲೋಕನಾ ಆವೃತ್ತಿ ಎಂದು ಪರಿಚಯಿಸಲಾಗುತ್ತಿದೆ.

16.2. ದೋಷ ವರದಿ ಮಾಡುವಿಕೆ

16.2.1. ಅನುಸ್ಥಾಪನಾ ಕುಸಿತ ವರದಿ ಮಾಡುವಿಕೆ

Red Hat Enterprise Linux 6 ರಲ್ಲಿ ಅನುಸ್ಥಾಪನಾ ಕುಸಿತವನ್ನು ವರದಿ ಮಾಡುವ ಉತ್ತಮವಾದ ಅನುಸ್ಥಾಪಕವನ್ನು ಸೇರಿಸಲಾಗಿದೆ. ವಿಭಾಗ 2.4, “ಅನುಸ್ಥಾಪನಾ ಕುಸಿತ ವರದಿ ಮಾಡುವಿಕೆ” ಅನ್ನು ನೋಡಿ

16.3. ಸ್ವಯಂಚಾಲಿತವಾಗಿ ದೋಷ ವರದಿ ಮಾಡುವ ಉಪಕರಣ

Red Hat Enterprise Linux 6 ರಲ್ಲಿ ಹೊಸ ಸ್ವಯಂಚಾಲಿತ ದೋಷ ವರದಿ ಮಾಡುವ ಉಪಕರಣವನ್ನು (ABRT) ಸೇರಿಸಲಾಗಿದೆ. ABRT ಯು ಸ್ಥಳೀಯ ವ್ಯವಸ್ಥೆಯಲ್ಲಿ ಉಂಟಾಗುವ ತಂತ್ರಾಂಶ ಕುಸಿತಗಳ ವಿವರಗಳನ್ನು ದಾಖಲಿಸುತ್ತದೆ, ಹಾಗು Red Hat ಬಗ್‌ಝಿಲ್ಲಾ ದೋಷದ ಜಾಡನ್ನು ಇರಿಸುವ ಜಾಲತಾಣದಲ್ಲಿ ತಕ್ಷಣವೆ ಒಂದು ಟಿಕೆಟ್ ಅನ್ನು ತೆರೆಯಲು ಸಂಪರ್ಕಸಾಧನಗಳನ್ನು (ಚಿತ್ರಾತ್ಮಕ ಹಾಗು ಆಜ್ಞಾ ಸಾಲಿನ) ಒದಗಿಸುತ್ತದೆ.
Automated Bug Reporting Tool
ಚಿತ್ರ 12. ಸ್ವಯಂಚಾಲಿತವಾಗಿ ದೋಷ ವರದಿ ಮಾಡುವ ಉಪಕರಣ

17. ಜಾಲ ಪರಿಚಾರಕಗಳು ಹಾಗು ಸೇವೆಗಳು

17.1. ಅಪಾಚೆ HTTP ಜಾಲ ಪರಿಚಾರಕ

Apache HTTP ಪರಿಚಾರಕವು ಒಂದು ಸದೃಢವಾದ, ವಾಣಿಜ್ಯ-ಮಟ್ಟದ ಮುಕ್ತ ಆಕರ ಜಾಲ ಪರಿಚಾರಕ. Red Hat Enterprise Linux 6 ರಲ್ಲಿ Apache HTTP ಪರಿಚಾರ 2.2.15 ಹಾಗು ಅದರ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತೆ ವಿನ್ಯಸಿಸಲಾದ ಹಲವಾರು ಪರಿಚಾರಕ ಘಟಕಗಳನ್ನು ಸೇರಿಸಲಾಗಿದೆ.
Red Hat Enterprise Linux 6 ರಲ್ಲಿನ Apache ಯು Server Name Indication (SNI) ಪ್ರೊಟೊಕಾಲ್‌ಗೆ ಬೆಂಬಲವನ್ನು ಒದಗಿಸುತ್ತದೆ, ಇದು Secure Sockets Layer (SSL) ಸಂಪರ್ಕಗಳ ಮುಖಾಂತರ ಹೆಸರು-ಆಧರಿತವಾದ ವರ್ಚುವಲ್ ಆತಿಥೇಯವನ್ನು ಶಖ್ತಗೊಳಿಸುತ್ತದೆ. ಅಷ್ಟೆ ಅಲ್ಲದೆ, Web Server Gateway Interface (WSGI) ಗಾಗಿನ ಬೆಂಬಲವನ್ನು ಈ ಬಿಡುಗಡೆಯಲ್ಲಿ Apache ಗೆ ಸೇರಿಸಲಾಗಿದ್ದು, ಇದು WSGI ಶಿಷ್ಟತೆಯನ್ನು ಅಳವಡಿಸುವ ಪೈತಾನ್ ಜಾಲ ಅನ್ವಯ ಫರ್ಮ್-ವೇರ್ ಬಳಕೆಯನ್ನು ಶಕ್ತಗೊಳಿಸುತ್ತದೆ.

17.2. PHP: Hypertext Preprocessor (PHP)

PHP ಎನ್ನುವುದು Apache HTTP ಜಾಲ ಪರಿಚಾರಕದೊಂದಿಗೆ ಬಳಸಬಹುದಾದ HTML-ಅಡಕಗೊಂಡ ಸ್ಕ್ರಿಪ್ಟಿಂಗ್ ಭಾಷೆಯಾಗಿರುತ್ತದೆ. Red Hat Enterprise ಲಿನಕ್ಸಿನಲ್ಲಿ, PHP ಯು ಈಗ Alternative PHP Cache (APC) ಅನ್ನು ಬೆಂಬಲಿಸುತ್ತದೆ.

17.3. memcached

memcached ಎನ್ನುವುದು ದತ್ತಸಂಚಯದ ಹೊರೆಯನ್ನು ಕಡಿಮೆ ಮಾಡುವ ಮೂಲಕ ಡೈನಮಿಕ್ ಜಾಲ ಅನ್ವಯಗಳ ಕ್ಷಮತೆಯನ್ನು ಹೆಚ್ಚಿಸುವಂತೆ ವಿನ್ಯಾಸಗೊಳಿಸಲಾದ ಹೆಚ್ಚು-ಕ್ಷಮತೆ ವಿತರಣೆಗೊಂಡ ವಸ್ತು ಕ್ಯಾಶಿಂಗ್ ಸೇವೆಯಾಗಿರುತ್ತದೆ. memcached ಈ ಬಿಡುಗಡೆಯಲ್ಲಿ ಹೊಸ ಸವಲತ್ತಾಗಿರುತ್ತದೆ, ಹಾಗು C, PHP, Perl ಹಾಗು Python ಪ್ರೊಗ್ರಾಮಿಂಗ್‌ ಭಾಷೆಗಳೊಂದಿಗೆ ಬೈಂಡಿಂಗ್ ಆಗಿರುತ್ತದೆ.

18. ದತ್ತಸಂಚಯಗಳು

18.1. PostgreSQL

PostgreSQL ಯು ಒಂದು ಸುಧಾರಿತ ವಸ್ತು-ಸಂಬಂಧಿತವಾದ ದತ್ತಸಂಚಯ ನಿರ್ವಹಣಾ ವ್ಯವಸ್ಥೆ (DBMS) ಆಗಿರುತ್ತದೆ. postgresql ಪ್ಯಾಕೇಜುಗಳು PostgreSQL DBMS ಪರಿಚಾರಕವನ್ನು ನಿಲುಕಿಸಿಕೊಳ್ಳಲು ಅಗತ್ಯವಿರುವ ಕ್ಲೈಂಟ್‌ ಪ್ರೊಗ್ರಾಮ್‌ಗಳು ಹಾಗು ಲೈಬ್ರರಿಗಳನ್ನು ಹೊಂದಿರುತ್ತವೆ.
Red Hat Enterprise Linux 6 ರಲ್ಲಿ PostgreSQL ನ ಆವೃತ್ತಿ 8.4 ಅನ್ನು ಹೊಂದಿರುತ್ತದೆ

18.2. MySQL

MySQL ಎನ್ನುವುದು, ಬಹು-ಬಳಕೆದಾರ ಬಹು-ತ್ರೆಡ್‌ ಅನ್ನು ಹೊಂದಿರುವ SQL ದತ್ತಸಂಚಯ ಪರಿಚಾರಕವಾಗಿರುತ್ತದೆ. ಇದು MySQL ಪರಿಚಾರಕ ಡೆಮನ್ (mysqld) ಹಲವು ಕ್ಲೈಂಟ್ ಪ್ರೊಗ್ರಾಮ್‌ಗಳು ಮತ್ತು ಲೈಬ್ರರಿಗಳನ್ನು ಹೊಂದಿರುತ್ತದೆ.
ಈ ಬಿಡುಗಡೆಯು MySQL ನ ಆವೃತ್ತಿ 5.1 ಅನ್ನು ಹೊಂದಿರುತ್ತದೆ. ಈ ಆವೃತ್ತಿಯು ಒದಗಿಸುವ ಎಲ್ಲಾ ವರ್ಧನೆಗಳ ಒಂದು ಪಟ್ಟಿಗಾಗಿ, MySQL Release Notes ಅನ್ನು ನೋಡಿ

19. ಆರ್ಕಿಟೆಕ್ಚರ್ ನಿಶ್ಚಿತ ಟಿಪ್ಪಣಿಗಳು

Red Hat Enterprise Linux 6 ಆರ್ಕಿಟೆಕ್ಚರ್ ದೃಷ್ಟಿಯಲ್ಲಿ ಪರಿಪೂರ್ಣವಾಗಿದೆ, ಹಾಗು ಬೆಂಬಲಿತವಾದ ಎಲ್ಲಾ ಆರ್ಕಿಟೆಕ್ಚರುಗಳು ಈಗ ಲಭ್ಯವಿವೆ.
Red Hat Enterprise Linux 6 ರಲ್ಲಿ Intel® Itanium® ಆರ್ಕಿಟೆಕ್ಚರಿಗೆ ಬೆಂಬಲವನ್ನು ಒದಗಿಸಲಾಗುವುದಿಲ್ಲ. ಎಲ್ಲಾ Itanium-ಸಂಬಂಧಿತವಾದ ವಿಕಸನೆಯನ್ನು ವಿಶೇಷವಾಗಿ Red Hat Enterprise Linux 5 ಗೆ ಸೇರಿಸಲಾಗುತ್ತದೆ. ಮಾರ್ಚ್ 2014 ರ ವರೆಗೆ, ಪ್ರಕಟಿಸಲಾದ Red Hat Enterprise Linux ಉತ್ಪನ್ನದ ಜೀವನ-ಚಕ್ರಕ್ಕೆ ಹೊಂದಾಣಿಕೆಯಾಗುವಂತೆ Red Hat Enterprise Linux 5 ರಲ್ಲಿ ಇದಕ್ಕೆ ಬೆಂಬಲ ನೀಡಿಕೆ, ಹೊಸ ಸವಲತ್ತುಗಳನ್ನು ಒದಗಿಸುವಿಕೆ ಹಾಗು ಹೊಸ Itanium ಯಂತ್ರಾಂಶವನ್ನು ಶಕ್ತಗೊಳಿಸುವಿಕೆಯನ್ನು ನಡೆಸಲಾಗುತ್ತದೆ. ಇದರ ಜೊತೆಗೆ, Itanium ಗಾಗಿ Red Hat Enterprise Linux 5 ಗೆ ಮಾರ್ಚ್ 2017 ರ ವರೆಗೆ ಕೆಲವು ನಿಶ್ಚಿತ OEMಗಳಿಂದ ಹೆಚ್ಚುವರಿ ಬೆಂಬಲವನ್ನು ಒದಗಿಸಲಾಗುತ್ತದೆ.
POWER ಆರ್ಕಿಟೆಕ್ಚರಿನಲ್ಲಿ, Red Hat Enterprise Linux 6 ಗಾಗಿ ಒಂದು POWER6 ಅಥವ ನಂತರ CPU ನ ಅಗತ್ಯವಿರುತ್ತದೆ. POWER5 ಸಂಸ್ಕಾರಕಗಳಿಗೆ Red Hat Enterprise Linux 6 ರಲ್ಲಿ ಬೆಂಬಲವಿರುವುದಿಲ್ಲ.

A. ಪುನರಾವರ್ತನೆಯ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1Wed Aug 12 2010Ryan Lerch
Red Hat Enterprise Linux 6 ರ ಬಿಡುಗಡೆ ಟಿಪ್ಪಣಿಗಳ ಆರಂಭಿಕ ಆವೃತ್ತಿ